alex Certify Big News: ‘ವರ್ಕ್ ಫ್ರಮ್ ಹೋಮ್’ ತೊರೆದು ಕಚೇರಿಗೆ ಬರಲು ಹೇಳಿದ್ದಕ್ಕೆ 800 ಉದ್ಯೋಗಿಗಳ ರಾಜೀನಾಮೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Big News: ‘ವರ್ಕ್ ಫ್ರಮ್ ಹೋಮ್’ ತೊರೆದು ಕಚೇರಿಗೆ ಬರಲು ಹೇಳಿದ್ದಕ್ಕೆ 800 ಉದ್ಯೋಗಿಗಳ ರಾಜೀನಾಮೆ

ಎರಡು ವರ್ಷಗಳ ಹಿಂದೆ ಕಾಣಿಸಿಕೊಂಡ ಕೊರೊನಾ ಮಹಾಮಾರಿ ಜನರ ಜೀವನ ವಿಧಾನವನ್ನೇ ಬದಲಾಯಿಸಿದೆ. ಕಂಪನಿಗಳು ಆ ಸಂದರ್ಭದಲ್ಲಿ ತಮ್ಮ ಉದ್ಯೋಗಿಗಳಿಗೆ ‘ವರ್ಕ್ ಫ್ರಮ್ ಹೋಮ್ ‘ಅವಕಾಶ ಕಲ್ಪಿಸಿದ್ದು, ಅದು ಬಹುತೇಕ ಈಗಲೂ ಮುಂದುವರೆದಿದೆ. ಆದರೆ ಕೊರೊನಾ ಸೋಂಕು ಇಳಿಕೆಯಾಗುತ್ತಿರುವ ಕಾರಣ ಈಗ ಕೆಲ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಕಚೇರಿಗೆ ಮರಳಲು ತಿಳಿಸುತ್ತಿವೆ.

ಹೀಗೆ ತನ್ನ ಉದ್ಯೋಗಿಗಳನ್ನು ಒಂದು ತಿಂಗಳೊಳಗಾಗಿ ಕಚೇರಿಗೆ ಮರಳುವಂತೆ ಹೇಳಿದ ಕಂಪನಿಯೊಂದು ಸುಮಾರು 800 ಉದ್ಯೋಗಿಗಳನ್ನು ಕಳೆದುಕೊಂಡಿದೆ. ಹೌದು, WhiteHat Jr ಕಂಪನಿ ಮಾರ್ಚ್ 18ರಂದು ತನ್ನ ಉದ್ಯೋಗಿಗಳಿಗೆ ಇ-ಮೇಲ್ ಸಂದೇಶ ಕಳುಹಿಸಿದ್ದು, ಮುಂಬೈ, ಬೆಂಗಳೂರು ಹಾಗೂ ಗುರುಗ್ರಾಮದಲ್ಲಿರುವ ಕಚೇರಿಗೆ ಈ ಮೊದಲಿನಂತೆ ಹಾಜರಾಗಲು ಸೂಚನೆ ನೀಡಿತ್ತು. ಆದರೆ ಈಗಾಗಲೇ ‘ವರ್ಕ್ ಫ್ರಮ್ ಹೋಮ್’ ಗೆ ಹೊಂದಿಕೊಂಡಿರುವ ಉದ್ಯೋಗಿಗಳು ಕಚೇರಿಗೆ ತೆರಳಲು ಸಿದ್ಧವಿಲ್ಲ. ಹೀಗಾಗಿ ಈವರೆಗೆ ಆ ಕಂಪನಿಯ 800 ಉದ್ಯೋಗಿಗಳು ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

BIG NEWS: ಮಾಜಿ ಸಿಎಂ BSY ಭೇಟಿಯಾದ ಸಿಎಂ ಬೊಮ್ಮಾಯಿ; ಕುತೂಹಲ ಮೂಡಿಸಿದ ಚರ್ಚೆ

WhiteHat Jr ಕೋಡಿಂಗ್ ಕಂಪನಿಯಾಗಿದ್ದು, ಇದನ್ನು 2020 ರಲ್ಲಿ Byju’s 300 ಮಿಲಿಯನ್ ಡಾಲರ್ ಗಳಿಗೆ ಖರೀದಿಸಿತ್ತು. ಅಲ್ಲದೆ WhiteHat Jr ಸಂಸ್ಥಾಪಕ ಕರಣ್ ಬಜಾಜ್ ಅಗಸ್ಟ್ 2021ರಲ್ಲಿ ಕಂಪನಿಯನ್ನು ತೊರೆದಿದ್ದರು. ಆ ಬಳಿಕ ಕಂಪನಿಯ ನಿಯಮಾವಳಿಗಳಲ್ಲಿ ಹಲವು ಬದಲಾವಣೆಗಳಾಗಿದೆ ಎನ್ನಲಾಗಿದ್ದು, ಇದು ಕೂಡ ಉದ್ಯೋಗಿಗಳು ಉದ್ಯೋಗ ತೊರೆಯಲು ಕಾರಣವೆಂದು ಹೇಳಲಾಗಿದೆ. ‘ವರ್ಕ್ ಫ್ರಮ್ ಹೋಮ್’ ಗೆ ಹೊಂದಿಕೊಂಡಿರುವ ಉದ್ಯೋಗಿಗಳು ಮತ್ತೆ ಹಿಂದಿನ ವ್ಯವಸ್ಥೆಗೆ ಮರಳಲು ನಿರಾಸಕ್ತಿ ತೋರಿಸುತ್ತಿದ್ದಾರೆ. ಆಪಲ್ ಕಂಪನಿ ಕೂಡ ತನ್ನ ಉದ್ಯೋಗಿಗಳು ಕಚೇರಿಗೆ ಮರಳಲು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಇದಕ್ಕೆ ಬಹಳಷ್ಟು ಉದ್ಯೋಗಿಗಳಿಂದ ವಿರೋಧ ವ್ಯಕ್ತವಾಗಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...