ಅಮೆರಿಕದ ಐಯೋವಾ ರಾಜ್ಯದ ಎಂಟು ವರ್ಷದ ಬಾಲಕಿಯೊಬ್ಬಳು ಬೀದಿಯಲ್ಲಿ ಆಡುವ ವೇಳೆ ಅಕಸ್ಮಾತ್ ಆಗಿ ಬಾಂಬನ್ನು ಕಂಡಿದ್ದಾಳೆ. ಮೊದಲಿಗೆ ಇದನ್ನು ಅಳಿಲು ಎಂದುಕೊಂಡಿದ್ದ ಈ ಬಾಲೆ, ಹತ್ತಿರ ಹೋಗಿ ನೋಡಿದಾಗ ಅದು ಬೇರೆಯದ್ದೇ ವಸ್ತುವೆಂದು ಅರಿತುಕೊಂಡಿದ್ದಾಳೆ.
ಸಾಹಸ ಮಾಡಲು ಹೋದ ಯುವತಿಯದ್ದು ಬೇಡ ಫಜೀತಿ…!
ಟೇಪ್ ಹಾಗೂ ಕಾರ್ಡ್‌ಬೋರ್ಡ್‌ನಲ್ಲಿ ಸುತ್ತಲಾಗಿದ್ದ ಆ ವಸ್ತುವನ್ನು ಸುರಕ್ಷಿತ ಅಂತರದಿಂದ ಗಮನಿಸಿದ ಬಾಲಕಿ ಮಾಯಾ, ಈ ಬಗ್ಗೆ ತನ್ನ ತಾಯಿಗೆ ವಿಚಾರ ತಿಳಿಸಲು ಮುಂದಾಗಿದ್ದಾಳೆ.
ಮೊಸಳೆ ಬಾಯಿಯಿಂದ ಬಚಾವಾಗಿ ಬಂದಿದ್ದ ಯುವತಿ ʼಕೋಮಾʼದಿಂದ ಹೊರಕ್ಕೆ…!
ಮಾಯಾ ತಾಯಿ ಕೊಟ್ಟ ಮಾಹಿತಿ ಆಧರಿಸಿ ಸ್ಥಳಕ್ಕಾಗಮಿಸಿದ ಪೊಲೀಸ್ ಅಧಿಕಾರಿಗಳು, ಆ ವಸ್ತುವಿಗೆ ಕಾರ್ಡ್‌ಬೋರ್ಡ್ ಕವಚ ಹಾಗೂ ಫ್ಯೂಸ್ ಒಂದು ಇದೆ ಎಂದು ಕಂಡುಕೊಂಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯ ನೆರವಿನಿಂದ ಆ ಸ್ಫೋಟಕ ವಸ್ತುವನ್ನು ನಿಷ್ಕ್ರಿಯಗೊಳಿಸಲಾಗಿದೆ.
ಸ್ಫೋಟಗೊಳ್ಳುತ್ತಲೇ ಒಂದಷ್ಟು ಡ್ಯಾಮೇಜ್ ಮಾಡುವ ರೀತಿಯಲ್ಲಿ ಬಾಂಬ್ ಅನ್ನು ನಿರ್ಮಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.