alex Certify 8 ಅಡಿ ದಂತ ಹೊಂದಿದ್ದ ಮಿಸ್ಟರ್ ಕಬಿನಿ ಖ್ಯಾತಿಯ ‘ಭೋಗೇಶ್ವರ’ ಇನ್ನಿಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

8 ಅಡಿ ದಂತ ಹೊಂದಿದ್ದ ಮಿಸ್ಟರ್ ಕಬಿನಿ ಖ್ಯಾತಿಯ ‘ಭೋಗೇಶ್ವರ’ ಇನ್ನಿಲ್ಲ

ನಾಗರಹೊಳೆ ಮತ್ತು ಬಂಡೀಪುರ ವ್ಯಾಪ್ತಿಯಲ್ಲಿರುವ ಕಬಿನಿ ಹಿನ್ನೀರು ಪ್ರದೇಶದಲ್ಲಿ ಸಂಚರಿಸುತ್ತಿದ್ದ ಬರೋಬ್ಬರಿ ಎಂಟು ಅಡಿ ದಂತ ಹೊಂದಿದ್ದ ಏಷ್ಯಾ ತಳಿಯ ಆನೆ ಮಿಸ್ಟರ್ ಕಬಿನಿ ಖ್ಯಾತಿಯ ‘ಭೋಗೇಶ್ವರ’ ವಯೋಸಹಜ ಕಾರಣಗಳಿಂದ ಮೃತಪಟ್ಟಿದ್ದಾನೆ.

ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿಗೆ ಈ ಆನೆಯ ಮೃತದೇಹ ಕಂಡು ಬಂದಿದ್ದು, ಎರಡರಿಂದ ಮೂರು ದಿನಗಳ ಹಿಂದೆಯೇ ಇದು ಮೃತಪಟ್ಟಿರಬಹುದೆಂದು ಹೇಳಲಾಗಿದೆ. ಮರಣೋತ್ತರ ಪರೀಕ್ಷೆಯ ಸಂದರ್ಭದಲ್ಲಿ ಈ ಆನೆಗೆ 60 ವರ್ಷ ಎಂದು ಅಂದಾಜಿಸಲಾಗಿದೆ.

ಆನೆಯ ದೇಹದ ಮೇಲೆ ಯಾವುದೇ ಗಾಯಗಳ ಗುರುತು, ಕಾದಾಟದಿಂದ ಅಥವಾ ವಿಷಪ್ರಾಶನದಿಂದ ಮೃತಪಟ್ಟಿಲ್ಲವೆಂಬ ಅಂಶ ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದ್ದು, ಹೀಗಾಗಿ ‘ಭೋಗೇಶ್ವರ’ ವಯೋಸಹಜ ಕಾರಣಗಳಿಂದ ಮೃತಪಟ್ಟಿರಬಹುದು ಎಂದು ಹೇಳಲಾಗಿದೆ.

ಕಬಿನಿ ಭೋಗೇಶ್ವರ ಆನೆ ನಿಧನ: ಪ್ರಾಣಿಪ್ರಿಯರಿಂದ ಸಂತಾಪ | Vartha Bharati- ವಾರ್ತಾ  ಭಾರತಿ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...