alex Certify ಉದ್ಯೋಗಿಗಳಿಗೆ ಹೊಸ ವರ್ಷಕ್ಕೆ ಸಿಗಲಿದೆಯಾ ಬಂಪರ್‌…? ಇಲ್ಲಿದೆ ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗಿಗಳಿಗೆ ಹೊಸ ವರ್ಷಕ್ಕೆ ಸಿಗಲಿದೆಯಾ ಬಂಪರ್‌…? ಇಲ್ಲಿದೆ ಮುಖ್ಯ ಮಾಹಿತಿ

ಕೇಂದ್ರ ಸರ್ಕಾರಿ ನೌಕರರಿಗೆ ಈ ವರ್ಷ ಮತ್ತೊಂದು ಸಿಹಿ ಸುದ್ದಿ ಕಿವಿಗೆ ಬೀಳುವ ಸಾಧ್ಯತೆ ಇದೆ. ಸುದ್ದಿಗಳ ಪ್ರಕಾರ, ಸರ್ಕಾರಿ ನೌಕರರ ಗೃಹ ಬಾಡಿಗೆ ಭತ್ಯೆಯಲ್ಲಿ ಹೆಚ್ಚಳ ಮಾಡುವ ಘೋಷಣೆಯನ್ನು ಜನವರಿ 2022ರಂದು ನರೇಂದ್ರ ಮೋದಿ ಸರ್ಕಾರ ಮಾಡುವ ಸಾಧ್ಯತೆ ಇದೆ.

ಈ ಉಪಾಯ ಅನುಸರಿಸಿದ್ರೆ ʼಖಜಾನೆʼ ತುಂಬಿಸುತ್ತೆ ರೊಟ್ಟಿ

ಕೇಂದ್ರ ಈ ನಿರ್ಧಾರಕ್ಕೆ ಬಂದಲ್ಲಿ ಭಾರತೀಯ ರೈಲ್ವೇಯ 11.56 ಲಕ್ಷಕ್ಕೂ ಹೆಚ್ಚಿನ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.

ಏಳನೇ ವೇತನ ಆಯೋಗದ ಶಿಫಾರಸಿನಂತೆ ಗೃಹ ಬಾಡಿಗೆ ಭತ್ಯೆ (ಎಚ್‌ಆರ್‌ಎ) ಹೆಚ್ಚಿಸಲು ಆಗ್ರಹಿಸಿ ಭಾರತೀಯ ರೈಲ್ವೇ ತಾಂತ್ರಿಕ ಸಿಬ್ಬಂದಿ ಸಂಘಟನೆ ಹಾಗೂ ರಾಷ್ಟ್ರೀಯ ರೈಲ್ವೇ ಸಿಬ್ಬಂದಿ ಪ್ರತಿಷ್ಠಾನದ ಸದಸ್ಯರು ಆಗ್ರಹಿಸುತ್ತಿದ್ದು, ಜನವರಿ 1, 2021ರಿಂದ ಅನ್ವಯವಾಗುವಂತೆ ಎಚ್‌ಆರ್‌ಎರ್‌ಎನಲ್ಲಿ ಏರಿಕೆ ಮಾಡಲು ಕೇಂದ್ರ ಸರ್ಕಾರವನ್ನು ಕೋರುತ್ತಿವೆ.

ಹೊಸ ಅವತಾರದಲ್ಲಿ ಬಂದಿದೆ ಸುಜುಕಿ ಎರ್ಟಿಗಾ

ಎಕ್ಸ್‌, ವೈ, ಜ಼ಡ್ ನಗರಗಳಲ್ಲಿ ವಾಸಿಸುವ ನೌಕರರಿಗೆ ಕ್ರಮವಾಗಿ ವೇತನದ 24%, 16% ಹಾಗೂ 8%ನಷ್ಟು ಮೊತ್ತವನ್ನು ಎಚ್‌ಆರ್‌ಎ ರೂಪದಲ್ಲಿ ನೀಡಲಾಗುವುದು. ಈ ಸ್ತರಗಳ ನಗರಗಳಿಗೆ ಅನ್ವಯವಾಗುವ ಎಚ್‌ಎಸ್‌ಎಗಳು ಕ್ರಮವಾಗಿ 5,400 ರೂ, 3,600 ರೂ. ಹಾಗೂ 1,800 ರೂ.ಗಳಿಗಿಂತ ಕಡಿಮೆ ಇರುವಂತಿಲ್ಲ.ತುಟ್ಟಿ ಭತ್ಯೆಯು 50% ಹಾಗೂ 100% ತಲುಪಿದಲ್ಲಿ ಎಚ್‌ಆರ್‌ಎನಲ್ಲಿ ಹೆಚ್ಚಳ ಮಾಡಲು ಏಳನೇ ವೇತನ ಆಯೋಗ ಶಿಫಾರಸು ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...