alex Certify ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ​: ತುಟ್ಟಿ ಭತ್ಯೆ ಹೆಚ್ಚಳ ಕುರಿತು ಶೀಘ್ರದಲ್ಲೇ ಶುಭ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ​: ತುಟ್ಟಿ ಭತ್ಯೆ ಹೆಚ್ಚಳ ಕುರಿತು ಶೀಘ್ರದಲ್ಲೇ ಶುಭ ಸುದ್ದಿ

ಕೇಂದ್ರ ಸರ್ಕಾರದ ನೌಕರರಿಗೆ ತುಟ್ಟಿ ಭತ್ಯೆ ವಿಚಾರದಲ್ಲಿ ಸಾಕಷ್ಟು ಏರಿಳಿತಗಳು ಕಂಡು ಬರುತ್ತಲೇ ಇದೆ. ಇದೀಗ ಈ ವಿಚಾರವಾಗಿ ಇನ್ನೊಂದು ಮಹತ್ವದ ಮಾಹಿತಿ ಲಭ್ಯವಾಗಿದೆ.

ಕೇಂದ್ರ ಸರ್ಕಾರದ ನೌಕರರು ಹಾಗೂ ಪಿಂಚಣಿದಾರರ ತುಟ್ಟಿ ಭತ್ಯೆ ಹಾಗೂ ಪ್ರಿಯ ಪರಿಹಾರವನ್ನ ಶೀಘ್ರದಲ್ಲೇ ಮರುಸ್ಥಾಪಿಸಲಿದೆ ಎನ್ನಲಾಗಿದೆ.

ಕೇಂದ್ರ ಸರ್ಕಾರವು ಇದೇ ವಾರದಲ್ಲಿಯೇ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಲಾಗ್ತಿದೆ.

ಈ ಮೊದಲು ಕೇಂದ್ರ ಸರ್ಕಾರವು ಸೆಪ್ಟೆಂಬರ್​ ತಿಂಗಳಿನಿಂದ ತುಟ್ಟಿ ಭತ್ಯೆಯನ್ನ ಮರುಸ್ಥಾಪನೆ ಮಾಡೋದಾಗಿ ಹೇಳಿತ್ತು.

ಇದು ಜುಲೈ ತಿಂಗಳಿನಲ್ಲಿಯೇ ಆಗಬೇಕಿತ್ತು. ಆದರೆ ಜೂನ್​ 26ರಂದು ನಡೆದ ಸಭೆಯಲ್ಲಿ ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹಾಗೂ ಪಿಂಚಣಿದಾರರ ಪ್ರಿಯ ಪರಿಹಾರವನ್ನ ಸೆಪ್ಟೆಂಬರ್​​ನಲ್ಲಿ ಮರುಸ್ಥಾಪಿಸುವ ನಿರ್ಧಾರವನ್ನ ಕೈಗೊಳ್ಳಲಾಗಿತ್ತು ಎಂದು ಜೆಸಿಎಂ ರಾಷ್ಟ್ರೀಯ ಮಂಡಳಿ ಸಿಬ್ಬಂದಿ ವಿಭಾಗದ ಕಾರ್ಯದರ್ಶಿ ಶಿವ ಗೋಪಾಲ್​ ಮಿಶ್ರಾ ಹೇಳಿದ್ದಾರೆ.

ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರು ಜುಲೈ 2019ರಿಂದ ಅನ್ವಯವಾಗುವಂತೆ 17 ಪ್ರತಿಶತ ತುಟ್ಟಿ ಭತ್ಯೆಯನ್ನ ಪಡೆಯುತ್ತಿದ್ದಾರೆ. ಕೊರೊನಾದಿಂರಾಗಿ ಕೇಂದ್ರ ಸರ್ಕಾರವು ಕಳೆದ ವರ್ಷ ತುಟ್ಟಿ ಭತ್ಯೆಯಲ್ಲಿ ಯಾವುದೇ ಏರಿಕೆ ಮಾಡಿರಲಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...