alex Certify ಪಿಂಚಣಿದಾರರಿಗೆ ಬಿಗ್​ ರಿಲೀಫ್​: ಪಿಂಚಣಿ ವಿಚಾರದಲ್ಲಿ ಹೊಸ ಸೌಲಭ್ಯ ಜಾರಿಗೆ ತಂದ ಕೇಂದ್ರ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಂಚಣಿದಾರರಿಗೆ ಬಿಗ್​ ರಿಲೀಫ್​: ಪಿಂಚಣಿ ವಿಚಾರದಲ್ಲಿ ಹೊಸ ಸೌಲಭ್ಯ ಜಾರಿಗೆ ತಂದ ಕೇಂದ್ರ ಸರ್ಕಾರ

7th Pay Commission: 60 lakh pensioners to get pension slips via WhatsApp,  email | Personal Finance News | Zee Newsಜುಲೈ 1ನೇ ತಾರೀಖಿನಿಂದ ಮತ್ತೆ ಆರಂಭವಾಗಲಿರುವ ಆತ್ಮೀಯ ಭತ್ಯೆ (ಡಿಎ)ಗಾಗಿ ಲಕ್ಷಾಂತರ ಮಂದಿ ಕೇಂದ್ರ ಸರ್ಕಾರ ಪಿಂಚಣಿದಾರರು ಎದುರು ನೋಡುತ್ತಿದ್ದಾರೆ. ಈ ನಡುವೆ ಪಿಂಚಣಿದಾರರಿಗೆ 7ನೇ ವೇತನ ಆಯೋಗ ಇನ್ನೊಂದು ಗುಡ್​ ನ್ಯೂಸ್​ ನೀಡಿದೆ.

ಪಿಂಚಣಿ ನೀಡುವ ಬ್ಯಾಂಕ್​ಗಳಿಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದ್ದು ಇದರ ಅನ್ವಯ ಪಿಂಚಣಿ ಸ್ಲಿಪ್​ಗಳು ಇನ್ಮೇಲೆ ಪಿಂಚಣಿದಾರರಿಗೆ ಎಸ್​ಎಂಎಸ್​, ವಾಟ್ಸಾಪ್​ ಹಾಗೂ ಇ ಮೇಲ್​ ಮೂಲಕವೇ ಸಿಗಲಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ 60 ಲಕ್ಷ ಪಿಂಚಣಿದಾರರಿಗೆ ರಿಲೀಫ್​ ಸಿಕ್ಕಂತಾಗಿದೆ.

ವೃದ್ಧಾಪ್ಯದಲ್ಲಿ ಪಿಂಚಣಿದಾರರಿಗೆ ಕಷ್ಟ ಕೊಡಬಾರದು ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.

ಕೇಂದ್ರ ಸರ್ಕಾರ ನೀಡಿರುವ ನಿರ್ದೇಶನದ ಪ್ರಕಾರ ಸಂಬಂಧಪಟ್ಟ ಬ್ಯಾಂಕ್​ಗಳು ಸಂಪೂರ್ಣ ವಿವರಣೆಗಳನ್ನೊಳಗೊಂಡ ಪಿಂಚಣಿ ಸ್ಲಿಪ್​ನ್ನು ನೋಂದಾಯಿತ ಮೊಬೈಲ್​​ ಸಂಖ್ಯೆಗೆ ಎಸ್​ಎಂಎಸ್​ ಇಲ್ಲವೇ ಇ ಮೇಲ್​​​ ಕಳಿಸುವಂತೆ ಸೂಚಿಸಿದೆ. ಅಲ್ಲದೇ ವಾಟ್ಸಾಪ್​ಗಳ ಮೂಲಕವೂ ಅವರಿಗೆ ಪಿಂಚಣಿ ಸ್ಲಿಪ್​ನ್ನು ನೀಡಿ ಎಂದು ಹೇಳಿದೆ.

ಕೇಂದ್ರ ಸರ್ಕಾರದ ಈ ಮಹತ್ವದ ನಿರ್ಧಾರದಿಂದಾಗಿ ಪಿಂಚಣಿದಾರರು ಇನ್ಮೇಲೆ ಬ್ಯಾಂಕ್​ಗೆ ತೆರಳದೇ ಮನೆಯಲ್ಲೇ ಕೂತು ತಮ್ಮ ಡಿಆರ್​ ಹಾಗೂ ಡಿಎ ಸೇರಿದಂತೆ ಪಿಂಚಣಿಯ ಸಂಪೂರ್ಣ ಮಾಹಿತಿಯನ್ನ ಪಡೆಯಬಹುದಾಗಿದೆ. ಅಲ್ಲದೇ ವೃದ್ಧ ಪಿಂಚಣಿದಾರರಿಗೆ ಇದರಿಂದಾಗಿ ಮನೆಯಿಂದ ಹೊರ ಹೋಗುವ ಅನಿವಾರ್ಯತೆಯೂ ಕಡಿಮೆ ಆದಂತಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...