alex Certify ಶಾಕಿಂಗ್ ನ್ಯೂಸ್: ಗೋಪಾಷ್ಟಮಿ ಮೊದಲೇ ಘೋರ ದುರಂತ, ಗೋಶಾಲೆಯಲ್ಲಿ ವಿಷಾಹಾರ ಸೇವಿಸಿ 78 ಹಸುಗಳು ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್ ನ್ಯೂಸ್: ಗೋಪಾಷ್ಟಮಿ ಮೊದಲೇ ಘೋರ ದುರಂತ, ಗೋಶಾಲೆಯಲ್ಲಿ ವಿಷಾಹಾರ ಸೇವಿಸಿ 78 ಹಸುಗಳು ಸಾವು

ರಾಜಸ್ಥಾನದ ಚುರು ಜಿಲ್ಲೆಯಲ್ಲಿ ಸರ್ಕಾರಿ ಅನುದಾನದಿಂದ ನಡೆಯುತ್ತಿರುವ ಗೋಶಾಲೆಯಲ್ಲಿ ವಿಷಾಹಾರ ಸೇವಿಸಿದ 78 ಹಸುಗಳು ಸಾವನ್ನಪ್ಪಿವೆ.

ಶುಕ್ರವಾರ ರಾತ್ರಿಯಿಂದ ಹಸುಗಳು ಸಾವನ್ನಪ್ಪುತ್ತಿದ್ದು, ಮತ್ತೆ ಕೆಲವು ಗಂಭೀರ ಸ್ಥಿತಿಗೆ ತಲುಪಿವೆ ಎಂದು ರಾಜಸ್ಥಾನದ ಪಶುಸಂಗೋಪನಾ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಸರ್ಕಾರದ ಅನುದಾನದೊಂದಿಗೆ ಚುರು ಜಿಲ್ಲೆಯಲ್ಲಿ ಈ ಗೋಶಾಲೆ ನಡೆಯುತ್ತಿದ್ದು, ವಿಷಾಹಾರ ಸೇವಿಸಿ ಹಸುಗಳು ಮೃತಪಟ್ಟಿವೆ ಎಂದು ಪಶುಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕ ಡಾ. ಜಗದೀಶ್ ಮಾಹಿತಿ ನೀಡಿದ್ದಾರೆ.

ಸರದರ್ಶಹರದ ಬಿಲ್ಯಬಾಸ್ ಪ್ರದೇಶದ ರಾಂಪುರ ಗ್ರಾಮದಲ್ಲಿರುವ ಗೋಶಾಲೆಯಲ್ಲಿ ಘಟನೆ ನಡೆದಿದೆ. ಪಶು ಸಂಗೋಪನಾ ಇಲಾಖೆಯ ವೈದ್ಯರು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಮೇವಿನ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಶ್ರೀಕೃಷ್ಣನಿಗೆ ಅರ್ಪಿತವಾದ ಗೋಪಾಷ್ಟಮಿ ಹಬ್ಬದ ಮೊದಲೇ ಇಂತಹ ಆಘಾತಕಾರರಿ ಘಟನೆ ನಡೆದಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...