alex Certify ಕುಡಿದ ಅಮಲಿನಲ್ಲಿ ಪತಿಯಿಂದ ಪತ್ನಿಗೆ ನಿತ್ಯ ಹಿಂಸೆ; ದೌರ್ಜನ್ಯ ನೋಡಲಾರದೆ ಠಾಣೆ ಮೆಟ್ಟಿಲೇರಿದ ಏಳು ವರ್ಷದ ಪೋರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಡಿದ ಅಮಲಿನಲ್ಲಿ ಪತಿಯಿಂದ ಪತ್ನಿಗೆ ನಿತ್ಯ ಹಿಂಸೆ; ದೌರ್ಜನ್ಯ ನೋಡಲಾರದೆ ಠಾಣೆ ಮೆಟ್ಟಿಲೇರಿದ ಏಳು ವರ್ಷದ ಪೋರ

ವ್ಯಕ್ತಿಯೊಬ್ಬ ಪ್ರತಿ ದಿನ ಮದ್ಯಪಾನ ಮಾಡಿಕೊಂಡು ದಿನನಿತ್ಯ ಪತ್ನಿಯನ್ನು ಮನಬಂದಂತೆ ಥಳಿಸುತ್ತಿದ್ದು, ತಾಯಿಯ ಮೇಲೆ ನಡೆಯುತ್ತಿದ್ದ ದೌರ್ಜನ್ಯವನ್ನು ನೋಡಲಾರದೆ ದಂಪತಿಯ ಏಳು ವರ್ಷದ ಮಗ ಪೊಲೀಸರಿಗೆ ಮೊರೆ ಹೋಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಪ್ರಕರಣದ ವಿವರ: ತೆಲಂಗಾಣದ ಶ್ರೀ ಸಿಲ್ಲಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮುಸ್ತಾಬಾದ್ ನಿವಾಸಿ ಬಾಲಕೃಷ್ಣ ಎಂಬಾತ ವಿಪರೀತ ಮದ್ಯ ಸೇವನೆ ಮಾಡುತ್ತಿದ್ದ. ಅಲ್ಲದೆ ಕುಡಿತದ ಅಮಲಿನಲ್ಲಿ ತನ್ನ ಪತ್ನಿಯ ಮೇಲೆ ದಿನನಿತ್ಯ ಹಲ್ಲೆ ಮಾಡುತ್ತಿದ್ದು, ಇದನ್ನು ನೋಡಿ ನೋಡಿ ಮೂರನೇ ತರಗತಿಯಲ್ಲಿ ಓದುತ್ತಿದ್ದ ಏಳು ವರ್ಷದ ಬಾಲಕ ಭರತ್ ರೋಸತ್ತು ಹೋಗಿದ್ದ.

ಒಮ್ಮೊಮ್ಮೆ ತನಗೂ ಹಾಗು ತನ್ನ ಸಹೋದರಿ ಶಿವಾನಿಗೂ ತಂದೆ ಹೊಡೆಯುತ್ತಿದ್ದ ಕಾರಣ ಅದಕ್ಕೆ ಏನಾದರೂ ಪರಿಹಾರ ಕಂಡುಕೊಳ್ಳಲು ಚಿಂತಿಸಿದ್ದ. ಹೀಗಾಗಿ ಬಾಲಕ ಒಂದು ದಿನ ಯಾರಿಗೂ ಹೇಳದೆ ಕೇಳದೆ ಸಮೀಪದ ಪೊಲೀಸ್ ಠಾಣೆಗೆ ತೆರಳಿ ತನ್ನ ಮುಗ್ಧ ಭಾಷೆಯಲ್ಲಿ ಇರುವ ವಿಷಯವನ್ನೆಲ್ಲ ಹೇಳಿದ್ದಾನೆ.

ಠಾಣೆಯ ಸಬ್ ಇನ್ಸ್ಪೆಕ್ಟರ್ ವೆಂಕಟೇಶ್ವರಲು ಬಾಲಕನ ಕಥೆಯನ್ನೆಲ್ಲಾ ತಾಳ್ಮೆಯಿಂದ ಕೇಳಿಸಿಕೊಂಡು ಆತನ ತಂದೆ ಬಾಲಕೃಷ್ಣನನ್ನು ಠಾಣೆಗೆ ಕರೆಸಿಕೊಂಡಿದ್ದಾರೆ. ಇನ್ನೊಮ್ಮೆ ಈ ರೀತಿ ಮಾಡಿದರೆ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಹೇಳಿದ್ದು, ಇದೀಗ ತನ್ನ ತಪ್ಪೊಪ್ಪಿಕೊಂಡಿರುವ ಬಾಲಕೃಷ್ಣ ಒಳ್ಳೆ ರೀತಿಯಲ್ಲಿ ಇರುವುದಾಗಿ ಹೇಳಿದ್ದಾನಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...