alex Certify ಸ್ಮಾರ್ಟ್ ಫೋನ್ ಇಲ್ಲದ್ದಕ್ಕೆ ಸಿಗಲಿಲ್ಲ ಎಂಟ್ರಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಮಾರ್ಟ್ ಫೋನ್ ಇಲ್ಲದ್ದಕ್ಕೆ ಸಿಗಲಿಲ್ಲ ಎಂಟ್ರಿ….!

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಇಲ್ಲದ ಮಂದಿಯೇ ಇಲ್ಲ ಎಂಬಂತಾಗಿದೆ. ಈ ಡಿವೈಸ್‌ನ ಬಳಕೆಯಿಂದ ಲಕ್ಷಾಂತರ ಮಂದಿಯ ಜೀವನ ಸರಳವಾಗಿದ್ದರೆ ಇನ್ನಷ್ಟು ಜನ ಈಗಲೂ ಸರಳ ಫೋನ್‌ಗಳನ್ನು ಬಳಸಲು ಇಚ್ಛಿಸುತ್ತಾರೆ.

ಸ್ಮಾರ್ಟ್‌ಫೋನ್‌ ಹೊಂದುವುದು ಕಡ್ಡಾಯವಲ್ಲದೇ ಇದ್ದರೂ ಸಹ ಕೆಲವೊಂದು ಕಚೇರಿಗಳು ಹಾಗೂ ಔಟ್‌ಲೆಟ್‌ಗಳಲ್ಲಿ ಸ್ಮಾರ್ಟ್‌‌ಫೋನ್ ಬಳಕೆ ಕಡ್ಡಾಯವಾಗಿದೆ.

ಇದೇ ಕಾರಣಕ್ಕೆ ಬ್ರಿಟನ್‌ನ ಚೆಲ್ಟೆನ್‌ಹ್ಯಾಮ್‌ ಹೈ ಸ್ಟ್ರೀಟ್‌‌ನಲ್ಲಿರುವ ಮ್ಯಾಕ್‌ಡೊನಾಲ್ಡ್ಸ್‌ ಔಟ್‌ಲೆಟ್ ಒಂದು ಭಾರೀ ಟೀಕೆಗೆ ಗ್ರಾಸವಾಗಿದೆ. ಚೆಕ್‌-ಇನ್ ಆಗಲು ತಮ್ಮ ಬಳಿ ಸ್ಮಾರ್ಟ್‌ಫೋನ್‌ ಇಲ್ಲದೇ ಇರುವ ಕಾರಣದಿಂದ 65 ವರ್ಷದ ವ್ಯಕ್ತಿಯೊಬ್ಬರನ್ನು ಈ ಸ್ಟೋರ್‌ ಒಳಗೆ ಸೇರಿಸಲಾಗಿಲ್ಲ.

ಲಸಿಕೆ ಪಡೆದವರಿಗೆ ಭರ್ಜರಿ ಕೊಡುಗೆ, ಉಚಿತ ಮೊಬೈಲ್ ರೀಚಾರ್ಜ್ ಆಫರ್ ನೀಡಿದ ಬಿಜೆಪಿ ಶಾಸಕ

43 ವರ್ಷದ ವಿಕಿ ವೇಕೆಲಾಮ್ ತಮ್ಮ ತಂದೆ ಕಾಲಿನ್‌ರನ್ನು ರೆಸ್ಟೋರೆಂಟ್‌ಗೆ ಕರೆದೊಯ್ದು ಅವರಿಗೆ ಮ್ಯಾಕ್‌ಮಫಿನ್ ಟ್ರೀಟ್‌ ಕೊಡಿಸಲು ಮುಂದಾಗಿದ್ದರು. ಆದರೆ ಕಾಲಿನ್ ಅವರು ಸ್ಕ್ಯಾನಿಂಗ್ ಟ್ರ‍್ಯಾಕ್ ದಾಟಿ ಬರಲು ಸಾಧ್ಯವಾಗದ ಕಾರಣ ಅವರಿಗೆ ಮೀಲ್ ಪಡೆಯಲು ಆಗಲಿಲ್ಲ.

BIG BREAKING: ರಾಜ್ಯದಲ್ಲಿಂದು 5983 ಮಂದಿಗೆ ಸೋಂಕು –ತಿಂಗಳ ನಂತರ ಸಕ್ರಿಯ ಪ್ರಕರಣ 1.5 ಲಕ್ಷಕ್ಕಿಂತ ಕಡಿಮೆ

ತಮ್ಮ ತಂದೆಯನ್ನು ಒಳಗೆ ಬಿಡಲು ಎಷ್ಟೇ ಕೇಳಿಕೊಂಡರೂ ಸ್ಟೋರ್‌ ಸಿಬ್ಬಂದಿ ಆಕೆಯ ಮಾತಿಗೆ ಸಮ್ಮತ ಸೂಚಿಸದೇ ಇದ್ದ ಕಾರಣ ಹೈಸ್ಟ್ರೀಟ್‌ನ ಬೆಂಚೊಂದರ ಮೇಲೆ ಕುಳಿತು ತಮ್ಮ ಮೀಲ್ ಸವಿದಿದ್ದಾಗಿ ವಿಕಿ ತಿಳಿಸಿದ್ದಾರೆ.

ವಿಕಿಯ ಅಸಮಾಧಾನದ ಮಾತುಗಳನ್ನು ಆಲಿಸಿದ ಸ್ಟೋರ್‌, ತನ್ನ ಕಡೆಯಿಂದ ನಿಜಕ್ಕೂ ಪ್ರಮಾದವಾಗಿದೆ ಎಂದು ಅದಕ್ಕಾಗಿ ಕ್ಷಮೆಯಾಚಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...