alex Certify ಕೋಟ್ಯಾಂತರ ರೂ. ಮೌಲ್ಯದ ಆಸ್ತಿಯನ್ನು ಬಡ ರಿಕ್ಷಾ ಚಾಲಕನಿಗೆ ದಾನ ಮಾಡಿದ 63 ವರ್ಷದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋಟ್ಯಾಂತರ ರೂ. ಮೌಲ್ಯದ ಆಸ್ತಿಯನ್ನು ಬಡ ರಿಕ್ಷಾ ಚಾಲಕನಿಗೆ ದಾನ ಮಾಡಿದ 63 ವರ್ಷದ ಮಹಿಳೆ

ತನ್ನ ಗಂಡ ಮತ್ತು ಮಗಳನ್ನು ಕಳೆದುಕೊಂಡ 63 ವರ್ಷದ ಮಹಿಳೆ 6 ತಿಂಗಳೊಳಗೆ ತನ್ನ ಆಸ್ತಿಯನ್ನು ರಿಕ್ಷಾ ಎಳೆಯುವವನಿಗೆ ದಾನ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ಒಡಿಶಾದ ಕಟಕ್‌ನಲ್ಲಿ ಮಿನಾತಿ ಪಟ್ನಾಯಕ್ ನಗರದ ಸುತಾಹತ್ ಪ್ರದೇಶದಲ್ಲಿನ ತನ್ನ ಮೂರು ಅಂತಸ್ತಿನ ಮನೆಯನ್ನು ದಾನ ಮಾಡಿದ್ದಾರೆ. ಅಲ್ಲದೆ, ಬಡ ರಿಕ್ಷಾ ಚಾಲಕ ಬುಧ ಸಮಲ್‌ಗೆ ಚಿನ್ನಾಭರಣಗಳು ಮತ್ತು ತನ್ನ ಎಲ್ಲಾ ಆಸ್ತಿಯನ್ನು ಸಹ‌ ನೀಡಿದ್ದಾರೆ.

ರಿಕ್ಷಾ ಚಾಲಕನಿಗೆ ಸ್ವಯಂಪ್ರೇರಣೆಯಿಂದ ಎಲ್ಲಾ ಆಸ್ತಿಯನ್ನು ದಾನ ಮಾಡುತ್ತಿದ್ದೇನೆ ಎಂದು ನ್ಯಾಯಾಲಯದ ದಾಖಲೆ ಪತ್ರದಲ್ಲಿ ಸಹಿ ಹಾಕಿದ್ದು, ಈ ಮಾಹಿತಿ ನಗರದಾದ್ಯಂತ ಹರಡುತ್ತಿದ್ದಂತೆ ಸಮಾಜದ ವಿವಿಧ ವರ್ಗದ ಜನರು ಆಕೆಯನ್ನು ಶ್ಲಾಘಿಸಿದ್ದಾರೆ.

ಆರು ತಿಂಗಳ ಹಿಂದಷ್ಟೇ ಮಿನಾತಿ ತನ್ನ ಪತಿಯನ್ನು ಕೋವಿಡ್-19 ಕಾರಣಕ್ಕೆ ಕಳೆದುಕೊಂಡಿದ್ದರು. ನಂತರ, ಹಾರ್ಟ್ ಅಟ್ಯಾಕ್ ಕಾರಣಕ್ಕೆ ತನ್ನ ಮಗಳು ಕೋಮಲ ಅನ್ನು ಕಳೆದುಕೊಂಡರು. ಈ ವೇಳೆ ಮಿನಾತಿಯ ಸಂಬಂಧಿಕರು ಸಹ ಜತೆಗೆ ನಿಲ್ಲಲಿಲ್ಲ. ಈ ದುರಂತ ಘಟನೆ ನಂತರ, ಆಕೆ ತನ್ನ ಎಲ್ಲಾ ಆಸ್ತಿಯನ್ನು ದಾನ ಮಾಡಲು ನಿರ್ಧರಿಸಿದರು.

ನಾನು ಮುಖ್ಯಮಂತ್ರಿಯಾಗಬೇಕೆಂದು ರಾಹುಲ್ ಗಾಂಧಿಗೆ ಹೇಳಿದ್ದೆ: ಪರಮೇಶ್ವರ್

ಸ್ಥಳೀಯ ಮಾಹಿತಿ ಪ್ರಕಾರ ರಿಕ್ಷಾ ಚಾಲಕ ಬುಧ ಸಮಲ್, ಮಿನಾತಿಯ ಬಳಿ ದೃಢವಾಗಿ ನಿಂತು ಆಕೆಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯ ಮಾಡಿದ್ದನು. ಮಿನಾತಿಯನ್ನು ಆಸ್ಪತ್ರೆಗೆ ಕರೆದೊಯ್ಯುವುದು ಸೇರಿ ಇತರ ಎಲ್ಲಾ ಸಮಸ್ಯೆಗಳನ್ನು ನೋಡಿಕೊಳ್ಳುತ್ತಿದ್ದನು. ಇದೀಗ ಮಿನಾತಿ ಬಡ ಕುಟುಂಬಕ್ಕೆ ತನ್ನ ಕೃತಜ್ಞತೆಯನ್ನು ಮರುಪಾವತಿಸುವಂತೆ ಮಾಡಿದೆ.

ನನ್ನ ಎಲ್ಲಾ ಸಂಬಂಧಿಕರಿಗೆ ಸಾಕಷ್ಟು ಆಸ್ತಿ ಇದೆ. ಜೊತೆಗೆ ನಾನು ಯಾವಾಗಲೂ ಬಡ ಕುಟುಂಬಕ್ಕೆ ದಾನ ಮಾಡಲು ಬಯಸುತ್ತೇನೆ. ನನ್ನ ಸಾವಿನ ನಂತರ ಯಾರೂ ಕಿರುಕುಳ ನೀಡದಂತೆ ನಾನು ಬುಧ ಸಮಲ್ ಕುಟುಂಬಕ್ಕೆ ಕಾನೂನುಬದ್ಧವಾಗಿ ಎಲ್ಲವನ್ನೂ ದಾನ ಮಾಡಲು ನಿರ್ಧರಿಸಿದೆ ಎಂದು ಮಿನಾತಿ ಹೇಳಿದ್ದಾರೆ.

ಆಕೆಯ ಸಹೋದರಿಯರು ರಿಕ್ಷಾ ಚಾಲಕನಿಗೆ ತನ್ನ ಆಸ್ತಿ ದಾನ ಮಾಡುವ ನಿರ್ಧಾರವನ್ನು ವಿರೋಧಿಸಿದ್ದರಂತೆ. ನನ್ನ ಮಗಳ ಸಾವಿನ ನಂತರ ಯಾರೂ ನನಗೆ ಕರೆ ಮಾಡಲಿಲ್ಲ ಅಥವಾ ನನ್ನ ಕರೆಗಳಿಗೆ ಪ್ರತಿಕ್ರಿಯಿಸಲಿಲ್ಲ. ಕಳೆದ 25 ವರ್ಷಗಳಿಂದ ಬುಧ ಸಮಲ್ ಮತ್ತು ಅವರ ಕುಟುಂಬ ನನ್ನ ಬೆಂಬಲಕ್ಕೆ ನಿಂತಿದೆ ಎಂದು ಮಿನಾತಿ ಹೇಳಿಕೊಂಡಿದ್ದಾರೆ. ಅಕೆ ಬದುಕಿರುವವರೆಗೂ ನಾವು ನೋಡಿಕೊಳ್ಳುತ್ತೇನೆ ಎಂದು ಬುಧ ಸಮಲ್ ಕೂಡ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...