alex Certify 24 ವರ್ಷದ ಯುವಕನೊಂದಿಗೆ ವೈವಾಹಿಕ ಬದುಕಿಗೆ ಕಾಲಿಟ್ಟ 61 ರ ವೃದ್ದೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

24 ವರ್ಷದ ಯುವಕನೊಂದಿಗೆ ವೈವಾಹಿಕ ಬದುಕಿಗೆ ಕಾಲಿಟ್ಟ 61 ರ ವೃದ್ದೆ…!

61 ವರ್ಷದ ವೃದ್ಧೆ ತನ್ನ 24 ವರ್ಷದ ಬಾಯ್​ಫ್ರೆಂಡ್​ ಜೊತೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ.

24 ವರ್ಷದ ಖರನ್​ ಮೆಕೇನ್​ ಹಾಗೂ 61 ವರ್ಷದ ಚೆರಿಲ್​ ಮೆಕ್​​ಗ್ರೆಗರ್​​ ಸೆಪ್ಟೆಂಬರ್​ 3ರಂದು ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ಇವರು ಅಮೆರಿಕ ನಿವಾಸಿಗಳಾಗಿದ್ದಾರೆ.

ಅನೇಕರು ಇವರನ್ನು ಅಜ್ಜಿ – ಮೊಮ್ಮಗ ಎಂದು ಜರಿದರೂ ಸಹ ನಮ್ಮ ಪ್ರೀತಿ ಅಗಾಧವಾಗಿದೆ ಎಂದು ಈ ದಂಪತಿ ಹೇಳಿದ್ದಾರೆ.

ಟಿಕ್​ಟಾಕ್​ ಖಾತೆಯಲ್ಲಿ ಈ ದಂಪತಿ ತಮ್ಮ ಮದುವೆ ಲೈವ್​ ವಿಡಿಯೋ ಪ್ರಸಾರ ಮಾಡಿತ್ತು. 61 ವರ್ಷ ವಯಸ್ಸಿನ ಮಧುಮಗಳು ಶ್ವೇತ ವರ್ಣದ ಧಿರಿಸಿನಲ್ಲಿದ್ದರೆ ಖರನ್​ ಕಂದು ಬಣ್ಣದ ಸೂಟನ್ನು ಧರಿಸಿದ್ದರು. ಮದುವೆಯ ದಿನ ನಾವು ಟಿಕ್​ಟಾಕ್​ನಲ್ಲಿ ಲೈವ್​ ಬಂದಿದ್ದೆವು. ನಮ್ಮ ಮದುವೆ ಟೆನ್ನೆಸಿಯಲ್ಲಿ ನಡೆದಿತ್ತು ಎಂದು ಖರನ್​ ಹೇಳಿದರು.

ಖರನ್​ ಕೇವಲ 15 ವರ್ಷ ಪ್ರಾಯದವನಾಗಿದ್ದಾಗ ಈ ಜೋಡಿ 2012ರಲ್ಲಿ ಒಬ್ಬರನ್ನೊಬ್ಬರು ಭೇಟಿಯಾಗಿದ್ದರು. ಚೆರಿಲ್ ಪುತ್ರ ನಡೆಸುವ ಫಾಸ್ಟ್​ ಫುಡ್​ ರೆಸ್ಟಾರೆಂಟ್​ನಲ್ಲಿ ಇವರು ಜೊತೆಯಾಗಿ ಕೆಲಸ ಮಾಡುತ್ತಿದ್ದರು. ಬಹಳ ವರ್ಷಗಳ ಕಾಲ ಇವರ ನಡುವೆ ಸಂಪರ್ಕ ಕಡಿತವಾಗಿತ್ತು. ಬಳಿಕ ಇವರು ಕಳೆದ ವರ್ಷ ನವೆಂಬರ್ 4ರಂದು ಮತ್ತೆ ಒಬ್ಬರನ್ನೊಬ್ಬರು ಭೇಟಿಯಾದರು. ಜುಲೈ 31ರಂದು ಖರನ್​ ಉಂಗುರವನ್ನು ನೀಡುವ ಮೂಲಕ ಪ್ರೇಮ ನಿವೇದನೆ ಮಾಡಿದ್ದನು.

ಚೆರಿಲ್​ರನ್ನು ವಿವಾಹವಾಗಲು ನನ್ನ ಬಳಿ ಹಲವು ಕಾರಣಗಳಿದ್ದವು. ಆಕೆ ಸುಂದರಿ, ಪ್ರಾಮಾಣಿಕ ಹಾಗೂ ಸಹಾನುಭೂತಿಯುಳ್ಳ ಮಹಿಳೆ ಆಗಿದ್ದಾರೆ. ನಾನು ಪ್ರೇಮ ನಿವೇದನೆ ಮಾಡಿದಾಗ ಚೆರಿಲ್​ಗೆ ನಂಬಲು ಸಾಧ್ಯವಾಗಿರಲಿಲ್ಲ. ನನಗೆ ಇದು ಮೊದಲ ಮದುವೆಯಾಗಿದೆ.ಆದರೆ ಚೆರಿಲ್​ ಈ ಹಿಂದೆ ಕೂಡ ಮದುವೆ ಆಗಿದ್ದರು ಎಂದು ಹೇಳಿದ್ದಾನೆ.

ಚೆರಿಲ್​ರ ಏಳು ಮಕ್ಕಳಲ್ಲಿ ಮೂವರು ಈ ಸಂಬಂಧಕ್ಕೆ ಒಪ್ಪಿಗೆ ನೀಡಿದ್ದಾರೆ. ಖರನ್​ ಕುಟುಂಬಸ್ಥರಿಗೆ ಈ ಮದುವೆ ಒಪ್ಪಿಗೆ ಇದೆ ಎನ್ನಲಾಗಿದೆ. ಇದೆಲ್ಲದರ ನಡುವೆ ಈ ದಂಪತಿ ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಿದೆ. ಅನೇಕರು ಒಳ್ಳೆಯ ಹೇಳಿಕೆಗಳನ್ನೇ ನೀಡಿದರೆ ಇನ್ನು ಕೆಲವರು ಖರನ್,​ ಚೆರಿಲ್​ರ ಹಣ ದುರ್ಬಳಕೆ ಮಾಡಲು ಪ್ಲಾನ್​ ಮಾಡಿದ್ದಾನೆ ಎಂಬೆಲ್ಲ ಮಾತನ್ನು ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...