alex Certify ಹವಾಮಾನ ಅಭಿಯಾನಕ್ಕಾಗಿ 6 ವರ್ಷದ ಭಾರತೀಯ ಮೂಲದ ಬಾಲಕಿಗೆ ಯುಕೆ ಪಿಎಂ ಪ್ರಶಸ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹವಾಮಾನ ಅಭಿಯಾನಕ್ಕಾಗಿ 6 ವರ್ಷದ ಭಾರತೀಯ ಮೂಲದ ಬಾಲಕಿಗೆ ಯುಕೆ ಪಿಎಂ ಪ್ರಶಸ್ತಿ

ಅರಣ್ಯ ನಾಶ ಮತ್ತು ಹವಾಮಾನ ಬದಲಾವಣೆ ಸಮಸ್ಯೆಗಳ ಕುರಿತು ಭಾರತೀಯ ಮೂಲದ ಆರು ವರ್ಷದ ಬಾಲಕಿ ಜಾಗೃತಿ ಮೂಡಿಸಿದ್ದಾಳೆ. ಹೀಗಾಗಿ, ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ದೈನಂದಿನ ಪಾಯಿಂಟ್ಸ್ ಆಫ್ ಲೈಟ್ ಪ್ರಶಸ್ತಿಗೆ ಭಾಜನಳಾಗಿದ್ದಾಳೆ.

BREAKING NEWS: ಇವತ್ತೂ ಲಘು ಭೂಕಂಪ, ಆತಂಕದಿಂದ ಹೊರಗೆ ಓಡಿದ ಜನ

ಅಲಿಷಾ ಗಾಧಿಯಾ ಅವರು, ಯುಕೆ ಮೂಲದ ಲಾಭರಹಿತ ಕೂಲ್ ಅರ್ಥ್‌ನ ಹವಾಮಾನ ಕಾರ್ಯಕರ್ತೆ ಮತ್ತು ಮಿನಿ ರಾಯಭಾರಿಯಾಗಿದ್ದಾರೆ. ಇದರಿಂದ ಸಂಸ್ಥೆಯ ಜಿಬಿಪಿ 3,000 ಕ್ಕಿಂತ ಹೆಚ್ಚಾಗಿದೆ. ಇದು ಅರಣ್ಯ ನಾಶವನ್ನು ನಿಲ್ಲಿಸಲು ಮತ್ತು ವ್ಯವಹಾರಗಳನ್ನು ಹೆಚ್ಚು ಸಮರ್ಥನೀಯವಾಗಿ ಸೃಷ್ಟಿಸಲು ಕೆಲಸ ಮಾಡುತ್ತದೆ.

ಅವಳು ತನ್ನ ಶಾಲೆಯಲ್ಲಿ ಹವಾಮಾನ ಬದಲಾವಣೆ ಕ್ಲಬ್ ಅನ್ನು ಸ್ಥಾಪಿಸಿದ್ದಾಳೆ. ಇತರರನ್ನು ಪರಿಸರವನ್ನು ಸಂರಕ್ಷಿಸುವಂತೆ ಪ್ರೋತ್ಸಾಹಿಸುತ್ತಾಳೆ. ಹಾಗೂ ಕಸ ತೆಗೆಯುವುದು ಮತ್ತು ಮರಗಳನ್ನು ನೆಡುವುದು ಮುಂತಾದ ಚಟುವಟಿಕೆಗಳನ್ನು ಮಾಡುತ್ತಿದ್ದಾಳೆ.

ಸಂಜೆ ಸ್ನ್ಯಾಕ್ಸ್ ಗೆ ಮಾಡಿ ರುಚಿಕರ ಬ್ರೆಡ್ ಸ್ಯಾಂಡ್ ವಿಚ್

ಈ ಬಗ್ಗೆ ಮಾತನಾಡಿದ ಗಾಧಿಯಾ, ಪ್ರಶಸ್ತಿಯನ್ನು ಗೆದ್ದಿರುವುದಕ್ಕೆ ನಾನು ನಿಜವಾಗಿಯೂ ಉತ್ಸುಕಳಾಗಿದ್ದು, ಸಂತೋಷದಿಂದ್ದೇನೆ. ನನಗೆ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಪ್ರಶಸ್ತಿ ನೀಡಿದ್ದು ಹಾಗೂ ನನಗೆ ಪತ್ರ ಬರೆದಿರುವುದಕ್ಕೆ ಕೃತಜ್ಞಳಾಗಿದ್ದೇನೆ. ನಾನು ಇಂತಹ ಪ್ರಶಸ್ತಿಯನ್ನು ಸ್ವೀಕರಿಸುತ್ತೇನೆ ಅಂತಾ ಎಂದಿಗೂ ಭಾವಿಸಿರಲಿಲ್ಲ ಎಂದು ತನ್ನ ಮುಗ್ದ ನುಡಿಗಳಲ್ಲಿ ಹೇಳಿದ್ದಾಳೆ.

ನಟ ಸೋನು ಸೂದ್ ​ಗಾಗಿ ಮತ್ತೊಂದು ದೇಗುಲ ನಿರ್ಮಾಣ

“ಹವಾಮಾನ ಬದಲಾವಣೆಯು ನಿಜವಾಗಿಯೂ ಒಂದು ಪ್ರಮುಖ ಸಮಸ್ಯೆಯಾಗಿದೆ ಮತ್ತು ಜಾಗೃತಿಯನ್ನು ಮೂಡಿಸುವ ಮೂಲಕ ಈ ಸಮಸ್ಯೆಯನ್ನು ನಿಭಾಯಿಸಬಹುದು ಎಂದು ನಾನು ಭಾವಿಸುತ್ತೇನೆ. ನನ್ನ ಶಿಕ್ಷಕರಾದ ಶ್ರೀಮತಿ ಹೀಟ್ಲಿ ಮತ್ತು ಶ್ರೀಮತಿ ವಂಡಂಡ್ ಸೇರಿದಂತೆ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ನನ್ನನ್ನು ಯುವ ರಾಯಭಾರಿಯನ್ನಾಗಿ ಮಾಡಿದ್ದಕ್ಕಾಗಿ ಕೂಲ್ ಅರ್ಥ್‌ಗೆ ಧನ್ಯವಾದಗಳು” ಎಂದು ಪುಟ್ಟ ಬಾಲಕಿ ತಿಳಿಸಿದ್ದಾಳೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...