alex Certify ಮಳೆಗಾಲದಲ್ಲಿ ಇರುವೆಗಳ ಹಾವಳಿಯಿಂದ ಪಾರಾಗೋದು ಹೇಗೆ..? ಇಲ್ಲಿದೆ ಸಿಂಪಲ್​ ಟಿಪ್ಸ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಳೆಗಾಲದಲ್ಲಿ ಇರುವೆಗಳ ಹಾವಳಿಯಿಂದ ಪಾರಾಗೋದು ಹೇಗೆ..? ಇಲ್ಲಿದೆ ಸಿಂಪಲ್​ ಟಿಪ್ಸ್​

ಮಳೆಗಾಲ ಬಂತು ಅಂದ್ರೆ ಸಾಕು ಇರುವೆಗಳ ಹಾವಳಿ ಜೋರಾಗಿರುತ್ತೆ. ಹಾಗಾದ್ರೆ ಮಳೆಗಾಲದಲ್ಲಿ ಇರುವೆಗಳನ್ನು ಹೋಗಲಾಡಿಸಲು ಏನು ಮಾಡಬಹುದು ಎಂಬ ಟಿಪ್ಸ್ ಇಲ್ಲಿದೆ ಓದಿ.

ಮಳೆಗಾಲದ ಸಮಯದಲ್ಲಿ ಇರುವೆಗಳು ತಣ್ಣನೆಯ ಸ್ಥಳಗಳನ್ನು ಹುಡುಕುತ್ತವೆ. ಇದಕ್ಕಾಗಿ ಅಡಿಗೆ ಕೋಣೆ ಮತ್ತು ವಾಶ್‌ರೂಮ್‌ನಂತಹ ಸ್ಥಳಗಳಲ್ಲಿ ಹೆಚ್ಚಾಗಿರುತ್ತದೆ. ನಿಮ್ಮ ಮನೆಯಲ್ಲಿಯು ಸಹ ಇದೇ ರೀತಿ ಇರುವೆಗಳಿಂದ ಕಿರಿಕಿರಿಯಾಗಿದ್ದರೆ ಅವುಗಳನ್ನು ದೂರವಿರಿಸಲು ಇಲ್ಲಿ ಕೆಲವು ಸುಲಭ ಸಲಹೆಗಳಿವೆ.

ನಿಮ್ಮ ಮನೆಯನ್ನು ಇರುವೆ ಮುಕ್ತ ವಲಯವನ್ನಾಗಿ ಮಾಡಲು ಇರುವ ಮನೆಮದ್ದುಗಳು ಯಾವುವು ಎಂಬ ವಿವರಗಳು ಇಲ್ಲಿದೆ.

ಸೀಮೆಸುಣ್ಣ- ಸೀಮೆಸುಣ್ಣವು ಕ್ಯಾಲ್ಸಿಯಂ ಕಾರ್ಬೋನೇಟ್ ಅನ್ನು ಹೊಂದಿರುತ್ತದೆ. ಇದು ಇರುವೆಗಳು ಹತ್ತಿರ ಬಾರದಂತೆ ಮಾಡಲು ಸಹಾಯ ಮಾಡುತ್ತದೆ. ಇರುವೆಗಳು ಎಂಟ್ರಿಯಾಗುತ್ತಿರುವ ಜಾಗದಲ್ಲಿ ಸ್ವಲ್ಪ ಸೀಮೆಸುಣ್ಣದ ಪುಡಿಯನ್ನು ಸಿಂಪಡಿಸಿ ಅಥವಾ ರೇಖೆಯನ್ನು ಎಳೆಯಿರಿ.

ನಿಂಬೆ ರಸ- ಇರುವೆಗಳು ಬರುವ ಸ್ಥಳಗಳಲ್ಲಿ ನಿಂಬೆ ರಸವನ್ನು ಹಿಂಡಿ ಅಥವಾ ಸ್ವಲ್ಪ ನಿಂಬೆ ಸಿಪ್ಪೆಗಳನ್ನು ಇಟ್ಟುಬಿಡಿ. ಇರುವೆಗಳು ನಿಂಬೆಯ ವಾಸನೆಯನ್ನು ಇಷ್ಟಪಡದ ಕಾರಣ ನೀವು ನಿಂಬೆ ನೀರಿನಿಂದ ನೆಲವನ್ನು ಒರೆಸಬಹುದು. ಈ ಮೂಲಕವೂ ಇರುವೆ ಬಾರದಂತೆ ನೋಡಿಕೊಳ್ಳಬಹುದು.

ಇರುವೆಗಳು ಸಕ್ಕರೆಯನ್ನು ಇಷ್ಟಪಡುತ್ತದೆ ಆದರೆ ಕಾಳುಮೆಣಸನ್ನು ದ್ವೇಷಿಸುತ್ತವೆ. ಹೀಗಾಗಿ ನಿಮ್ಮ ಮನೆಯಲ್ಲಿ ಇರುವೆ ಬರುವ ಜಾಗದಲ್ಲಿ ಸ್ವಲ್ಪ ಕಾಳುಮೆಣಸಿನ ಹುಡಿಯನ್ನು ಸಿಂಪಡಿಸಿ.

ಬಿಳಿ ವಿನೆಗರ್- ಬಿಳಿ ವಿನೆಗರ್ ಗೆ ನೀರನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ. ಇರುವೆಗಳು ಬರುವ ಸ್ಥಳಗಳಲ್ಲಿ ಪ್ರತಿದಿನ ಈ ದ್ರಾವಣವನ್ನು ಸಿಂಪಡಿಸಿ.

ಪುದೀನಾ- ಪುದೀನಾ ಒಂದು ಕೀಟ ನಿವಾರಕವಾಗಿದೆ. ಏಕೆಂದರೆ ಇದರ ಪರಿಮಳವನ್ನು ಇರುವೆಗಳಿಗೆ ಸಹಿಸಿಕೊಳ್ಳಲು ಸಾಧ್ಯವಾಗೋದಿಲ್ಲ. ಇರುವೆಗಳು ಲಗ್ಗೆಯಿಡುವ ಸ್ಥಳಗಳಲ್ಲಿ ದಿನಕ್ಕೆ ಎರಡು ಬಾರಿ ಸಿಂಪಡಿಸಿ.

ಉಪ್ಪು- ಇನ್ನು ನೈಸರ್ಗಿಕವಾಗಿ ಇರುವೆಗಳು ಬಾರದಂತೆ ಮಾಡಲು ಉಪ್ಪು ಅತ್ಯುತ್ತಮ ಮತ್ತು ಅಗ್ಗದ ಮಾರ್ಗವಾಗಿದೆ. ನೀವು ನೀರನ್ನು ಕುದಿಸಿ ಮತ್ತು ಅದಕ್ಕೆ ಉಪ್ಪನ್ನು ಸೇರಿಸಿ. ನಂತರ ಅಗತ್ಯವಿರುವ ಕಡೆ ಸಿಂಪಡಿಸಿದ್ರೆ ಇರುವೆ ಬರೋದೆ ಇಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...