alex Certify ಮನೆ, ಅಂಗಡಿ, ಕಾರ್ ನಲ್ಲೇ ಶವಗಳು ಪತ್ತೆ: ಅಮೆರಿಕದಲ್ಲಿ ಮತ್ತೆ ಶೂಟೌಟ್ ಗೆ 6 ಜನ ಬಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ, ಅಂಗಡಿ, ಕಾರ್ ನಲ್ಲೇ ಶವಗಳು ಪತ್ತೆ: ಅಮೆರಿಕದಲ್ಲಿ ಮತ್ತೆ ಶೂಟೌಟ್ ಗೆ 6 ಜನ ಬಲಿ

ಅಮೆರಿಕದ ಮಿಸ್ಸಿಸ್ಸಿಪ್ಪಿ ರಾಜ್ಯದ ಸಣ್ಣ ಗ್ರಾಮೀಣ ಪಟ್ಟಣದಲ್ಲಿ ಶುಕ್ರವಾರ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಅರ್ಕಾಬುಟ್ಲಾದ ಹಲವಾರು ಸ್ಥಳಗಳಲ್ಲಿ ಜನ ಕೊಲ್ಲಲ್ಪಟ್ಟಿದ್ದಾರೆ. ಮೂವರು ಎರಡು ಮನೆಗಳಲ್ಲಿ ಶವವಾಗಿ ಕಂಡುಬಂದರೆ, ಇತರರು ಅಂಗಡಿಯೊಳಗೆ, ಕಾರ್ ನಲ್ಲಿ ಮತ್ತು ರಸ್ತೆಯಲ್ಲಿ ಪತ್ತೆಯಾಗಿದ್ದಾರೆ. ಏಕೈಕ ಶಂಕಿತನನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

ಟೇಟ್ ಕೌಂಟಿ ಶೆರಿಫ್ ಕಚೇರಿಯು ಆರೋಪಿಯನ್ನು 52 ವರ್ಷದ ಸ್ಥಳೀಯ ನಿವಾಸಿ ಎಂದು ಗುರುತಿಸಿದೆ. ಮೆಂಫಿಸ್ ಮೂಲದ ಟಿವಿ ಸ್ಟೇಷನ್ ಆಕ್ಷನ್ ನ್ಯೂಸ್ 5 ಆಪಾದಿತ ಶೂಟರ್ ಅನ್ನು ರಿಚರ್ಡ್ ಡೇಲ್ ಕ್ರಂ ಎಂದು ಗುರುತಿಸಿದೆ.

ಮಿಸ್ಸಿಸ್ಸಿಪ್ಪಿ ಗವರ್ನರ್ ಟೇಟ್ ರೀವ್ಸ್ ಶುಕ್ರವಾರ ಟ್ವೀಟ್ ಮಾಡಿ, ಅವನ ಉದ್ದೇಶ ಇನ್ನೂ ತಿಳಿದಿಲ್ಲ. ಒಬ್ಬನೇ ಕೃತ್ಯವೆಸಗಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ರಾಜ್ಯ ತನಿಖಾ ಸಂಸ್ಥೆಯು ತನಿಖೆಗೆ ಪೊಲೀಸರಿಗೆ ಸಹಾಯ ಮಾಡುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...