alex Certify SHOCKING: ಸರಸಕ್ಕೆಂದು ಮನೆಗೆ ಬಂದ ಪ್ರಿಯಕರನ ಮರ್ಮಾಂಗ ಕತ್ತರಿಸಿದ ಪ್ರಿಯತಮೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಸರಸಕ್ಕೆಂದು ಮನೆಗೆ ಬಂದ ಪ್ರಿಯಕರನ ಮರ್ಮಾಂಗ ಕತ್ತರಿಸಿದ ಪ್ರಿಯತಮೆ

ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ವಿವಾಹೇತರ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬನ ಮರ್ಮಾಂಗ ಕತ್ತರಿಸಿದ ಘಟನೆ ನಡೆದಿದೆ. ಪ್ರಿಯತಮೆಯೇ ಕೃತ್ಯವೆಸಗಿದ್ದಾಳೆ.

ಪ್ರಕಾಶಂ ಜಿಲ್ಲೆಯ ಕೊಂಡಪಿ ಮಂಡಲದ ಮುಗಚೆಂತಲದಲ್ಲಿ 60 ವರ್ಷದ ವ್ಯಕ್ತಿಯ ಮರ್ಮಾಂಗವನ್ನೇ 55 ವರ್ಷದ ಮಹಿಳೆ ಕತ್ತರಿಸಿದ್ದಾಳೆ. ಇವರ ನಡುವೆ ವಿವಾಹೇತರ ಅಕ್ರಮ ಸಂಬಂಧ ಬೆಳೆದಿತ್ತು. 10 ವರ್ಷಗಳಿಂದ ಇವರ ನಡುವೆ ಅಕ್ರಮ ಸಂಬಂಧವಿತ್ತು. ವ್ಯಕ್ತಿಯು ತನ್ನ ಗೆಳತಿಯ ಮನೆಗೆ ಹೋದಾಗ ಆಕೆ ಬ್ಲೇಡ್ ನಿಂದ ಮರ್ಮಾಂಗ ಕತ್ತರಿಸಿದ್ದಾಳೆ.

ತೀವ್ರ ಗಾಯಗೊಂಡಿದ್ದ ವ್ಯಕ್ತಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರ ನಡುವೆ ನಡೆದ ಜಗಳದ ವೇಳೆ ಮಹಿಳೆ ಕೃತ್ಯವೆಸಗಿದ್ದಾಳೆ. ಗಾಯಾಳುವಿನ ಸ್ಥಿತಿ ಚಿಂತಾಜನಕವಾಗಿದ್ದು, ಆಂಧ್ರಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...