alex Certify 20 ವರ್ಷದ ಮನೆ ಕೆಲಸದವನೊಂದಿಗೆ ಪ್ರೀತಿಯಲ್ಲಿ ಬಿದ್ದ 50 ವರ್ಷದ ಮಹಿಳೆ; ಮುಂದೇನಾಯ್ತು ಗೊತ್ತಾ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

20 ವರ್ಷದ ಮನೆ ಕೆಲಸದವನೊಂದಿಗೆ ಪ್ರೀತಿಯಲ್ಲಿ ಬಿದ್ದ 50 ವರ್ಷದ ಮಹಿಳೆ; ಮುಂದೇನಾಯ್ತು ಗೊತ್ತಾ?

ಪ್ರೀತಿಗೆ ವಯಸ್ಸು, ಲಿಂಗ ಅಥವಾ ಸ್ಥಾನಮಾನ ಮುಖ್ಯವಲ್ಲ ಎಂಬುದಕ್ಕೆ ಅನೇಕ ಉದಾಹರಣೆ ಕಂಡುಬರುತ್ತದೆ. ಈಗ ಅಂತದ್ದೊಂದು ಅಚ್ಚರಿಯ ತಾಜಾ ಉದಾಹರಣೆ ಕಂಡುಬಂದಿದೆ.

ಪಾಕಿಸ್ತಾನದಲ್ಲಿ 50 ವರ್ಷದ ಮಹಿಳೆಯೊಬ್ಬರು 20 ವರ್ಷದ ತನ್ನ ಮನೆ ಕೆಲಸದವನನ್ನು ಪ್ರೀತಿಸಿದ್ದು, ಈಗ ಮದುವೆಯಾಗಿದ್ದಾರೆ. ಒಬ್ಬಂಟಿಯಾಗಿ ವಾಸಿಸುತ್ತಿದ್ದ ಇಸ್ಲಾಮಾಬಾದ್​ನ ನಾಜಿಯಾ ಮನೆ ಕೆಲಸಕ್ಕೆ ಬರುತ್ತಿದ್ದ ಸುಫಿಯಾನ್​ನನ್ನು ಪ್ರೀತಿಸುತ್ತಿದ್ದರು.

ಆರಂಭದಲ್ಲಿ ಆಕೆ ಸೂಫಿಯಾನ್​ನನ್ನು ತಿಂಗಳಿಗೆ 18,000 ರೂ.ಗಳ ಸಂಬಳಕ್ಕೆ ನೇಮಿಸಿಕೊಂಡಿದ್ದರು. ಬಳಿಕ ಸುಫಿಯಾನ್​ಗಾಗಿ ಬೆನ್ನು ಬಿದ್ದು ಮದುವೆಯಾದರು.

ಇಸ್ಲಾಮಾಬಾದ್​ ನಿವಾಸಿ ಯೂಟ್ಯೂಬರ್​ ಸೆೈಯದ್​ ಬಸಿದ್​ ಅಲಿ ಜೊತೆಗಿನ ಸಂದರ್ಶನದ ವೇಳೆ ಸುಫಿಯಾನ್​ ಪ್ರೇಮಕಥೆ ಬಹಿರಂಗವಾಗಿದೆ. ತಾನು ಮನೆಯಲ್ಲಿ ಒಬ್ಬಂಟಿಯಾಗಿ ಇದ್ದೆ, ಇದರಿಂದಾಗಿ ಮನೆಗೆಲಸದ ಎಲ್ಲಾ ಸಹಾಯದ ಅಗತ್ಯವಿತ್ತು. ಸುಫಿಯಾನ್​ನನ್ನು ನೇಮಿಸಿಕೊಂಡ ಬಳಿಕ ಸುಫಿಯಾನ್​ನ ಅಭ್ಯಾಸಗಳು, ನಡವಳಿಕೆ ಮತ್ತು ಕಾಲಾನಂತರದಲ್ಲಿ ನಿಧಾನವಾಗಿ ಇಷ್ಟಪಟ್ಟೆ ಎಂದು ಆಕೆ ಬಹಿರಂಗಪಡಿಸಿದರು.

ಸೂಫಿಯಾನ್​ ಸುತ್ತಲಿನ ಪ್ರತಿಯೊಬ್ಬರನ್ನು ಗೌರವಿಸುತ್ತಾನೆ. ಅವನ ಸರಳತೆ ತನ್ನ ಹೃದಯವನ್ನು ಗೆದ್ದಿತು ಎಂದು ಪ್ರೀತಿಯ ಹಿಂದಿನ ಕಾರಣ ವಿವರಿಸಿದ್ದಾರೆ. ಸುಫಿಯಾನ್​ ನನ್ನ ಪ್ರಸ್ತಾಪವನ್ನು ಕೇಳಿದ ನಂತರ ಮೂರ್ಛೆ ಹೋದ ಬಳಿಕ ಐ ಲವ್​ ಯೂ ಟೂ ಎಂದು ಪ್ರತಿಕ್ರಿಯಿಸಿದ ಎಂದು ಅಂದಿನ ಸಂದರ್ಭವನ್ನೂ ಆಕೆ ನೆನಪಿಸಿಕೊಂಡಿದ್ದಾರೆ.

ಈ ದಂಪತಿ ಒಬ್ಬರನ್ನೊಬ್ಬರು ಸಲ್ಮಾನ್​ ಖಾನ್​ ಮತ್ತು ಕತ್ರಿನಾ ಕೈಫ್​ಗೆ ಹೋಲಿಸಿಕೊಳ್ಳುತ್ತಾರೆ. ಜ್ವರ ಬಂದಾಗ ಔಷಧಿ ತರುವುದರಿಂದ ಹಿಡಿದು ದಿನನಿತ್ಯದ ಅಡುಗೆ ಮುಂತಾದ ಕೆಲಸಗಳನ್ನು ಸೂಫಿಯಾನ್​ ಚೆನ್ನಾಗಿ ಮಾಡುತ್ತಾನೆ. ಇದೇ ವೇಳೆ ಸುಫಿಯಾನ್​ ನಾಜಿಯಾಳನ್ನು ಕತ್ರಿನಾ ಕೈಫ್​ಗೆ ಹೋಲಿಸಿದ್ದಾನೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...