alex Certify 50 ವರ್ಷದ ವಿಚ್ಛೇದಿತೆಗೆ 25 ವರ್ಷದ ಯುವಕನೊಂದಿಗೆ ಪ್ರೀತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

50 ವರ್ಷದ ವಿಚ್ಛೇದಿತೆಗೆ 25 ವರ್ಷದ ಯುವಕನೊಂದಿಗೆ ಪ್ರೀತಿ….!

ಆನ್​ಲೈನ್​ನಲ್ಲಿ ಡೇಟಿಂಗ್​ ಮಾಡುವವರು ಅಥವಾ ಪಾರ್ಟ್​ನರ್​ ಹುಡುಕುವವರು ಕೆಲವು ನಿದಿರ್ಷ್ಟ ಮಾನದಂಡದ ಮೇಲೆ ಹುಡುಕಾಟ ನಡೆಸುತ್ತಿರುತ್ತಾರೆ. ಅಪರೂಪಕ್ಕೆ ಕೆಲವು ವೈಚಿತ್ರವೂ ನಡೆದು ಹೋಗುತ್ತದೆ. ಇದಕ್ಕೊಂದು ಉದಾಹರಣೆ ಎಂದರೆ, ಇಬ್ಬರು ಮಕ್ಕಳನ್ನು ಹೊಂದಿರುವ 50 ವರ್ಷದ ವಿಚ್ಛೇದಿತ ಮಹಿಳೆ 25 ವರ್ಷದ ಯುವಕನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ.

48 ವರ್ಷದ ರಾಚೆಲ್​ ಕೌಡೆಲ್​ ವಿಚ್ಛೇದನ ಪಡೆದ ಬಳಿಕ ಆನ್​ಲೈನ್​ನಲ್ಲಿ ಸಂಗಾತಿಯನ್ನು ಹುಡುಕುತ್ತಿರುವಾಗ, ತನ್ನ ವಯಸ್ಸಿನ ಆದ್ಯತೆಯ ಸೆಟ್ಟಿಂಗ್​ಗಳನ್ನು ಬದಲಾಯಿಸಲು ಮರೆತಿದ್ದರು. ಇದರ ಪರಿಣಾಮ ನಂತರ ತನಗಿಂತ 23 ವರ್ಷ ಚಿಕ್ಕ ಹುಡುಗನ ಪ್ರೀತಿಯ ಬಲೆಗೆ ಸಿಲುಕಿದ್ದರು.

2020ರ ಸೆಪ್ಟೆಂಬರ್​ನಲ್ಲಿ ಇಬ್ಬರ ಮಕ್ಕಳ ತಾಯಿ ವಿಚ್ಛೇದನ ಪಡೆದಿದ್ದರು. ನಂತರ ಅವರು ಡೇಟಿಂಗ್​ ಅಪ್ಲಿಕೇಶನ್​ಗಳಲ್ಲಿ ಸಂಗಾತಿ ಹುಡುಕಲು ಪ್ರಯತ್ನಿಸಲು ನಿರ್ಧರಿಸಿದರು. ಕೆಲವು ಕೆಟ್ಟ ಪ್ರಯತ್ನಗಳ ನಂತರ ಅಲೆಕ್ಸ್​ ಮೈಕೆಲ್​ ಎಂಬಾತನನ್ನು ಕಂಡಿದ್ದು, ಈ ವೇಳೆ ಆತನಿಗೆ 23 ವರ್ಷ.

ಇಬ್ಬರೂ ಚಾಟ್​ ಮಾಡಲು ಪ್ರಾರಂಭಿಸಿದರು. ಆತನ ಕಣ್ಣಿನ ಸೌಂದರ್ಯಕ್ಕೆ ಆಕೆ ಮಾರುಹೋದಳು. ಬಳಿಕ ವಯಸ್ಸಿನ ಪ್ರಶ್ನೆ ಉದ್ಭವಿಸಿದೆ. ಮೂಲತಃ ಟೆಕ್ಸಾಸ್​ನ ಅಲೆಕ್ಸ್​ ತನ್ನ ವಯಸ್ಸನ್ನು 23 ಎಂದು ಮೊದಲು ಬಹಿರಂಗಪಡಿಸಿದಾಗ, ಆಕೆ ಆಶ್ಚರ್ಯಚಕಿತರಾಗಿ, ತುಂಬ ಚಿಕ್ಕದಾಯಿತೆಂದರೂ, ಬಳಿಕ ಅದು ಪರಿಗಣಿಸಲಿಲ್ಲ.

ಅವರ ಮಾತುಕತೆ ಮುಂದುವರಿದಂತೆ ಇಬ್ಬರಲ್ಲಿ ಬಹಳಷ್ಟು ಸಾಮ್ಯತೆ ಇದೆ ಎಂದು ಆಕೆ ಕಂಡುಕೊಂಡಳು. ಫಾರ್ಮಾಸ್ಯುಟಿಕಲ್​ ಕಂಪನಿಗಳಿಗೆ ವೆಬ್​ಸೆೈಟ್​ ರಚನೆಕಾರರಾಗಿರುವ ಅಲೆಕ್ಸ್​, ಡೇಟಿಂಗ್​ ಅಪ್ಲಿಕೇಶನ್​ ಟಿಂಡರ್​ನಲ್ಲಿ ತನ್ನ ಆದ್ಯತೆಯನ್ನು ಬದಲಾಯಿಸಿದಾಗ ಮತ್ತು ಅವಳೊಂದಿಗೆ ಹೊಂದಾಣಿಕೆ ಮಾಡಿಕೊಂಡಾಗ ವಯಸ್ಸಿನ ಅಂತರದ ವಿಚಾರ ಅನಿರೀಕ್ಷಿತವಾಗಿ ಎದುರಾಯಿತು ಎಂದು ಬಹಿರಂಗಪಡಿಸಿದ್ದಾರೆ.

ಓ ಗಾಡ್​, ಆಕೆ ತನ್ನ ವಯಸ್ಸಿಗೆ ತಕ್ಕಂತೆ ಕಾಣುತ್ತಾಳೆ, ಅವಳು ನಲವತ್ತರ ಹರೆಯದವರಂತೆ ಕಾಣುತ್ತಿಲ್ಲ. ಅವಳು ತುಂಬಾ ಕೂಲ್​, ಕೇವಲ ಸುಂದರವಾದ ಮುಖಕ್ಕಿಂತ ಹೆಚ್ಚು ಎಂದು ಆತ ಕಾಮೆಂಟ್​ ಮಾಡಿದ್ದಾನೆ.

ರಾಚೆಲ್​ ಈ ವಿಷಯದಲ್ಲಿ ಇನ್ನಷ್ಟು ನಂಬಿಕೆ ತಂದುಕೊಳ್ಳಲು ನಿರ್ಧರಿಸಿ ಅಲೆಕ್ಸ್​ ಅನ್ನು ಭೇಟಿ ಮಾಡಲು ನ್ಯೂಯಾರ್ಕ್​ಗೆ ಪ್ರಯಾಣ ಬೆಳೆಸಿದರು. ಅವರಿಬ್ಬರೂ 2020ರ ಕೊನೆಯಲ್ಲಿ ಮಿಯಾಮಿ ಮತ್ತು ಆಸ್ಟಿನ್​ಗೆ ಪ್ರಯಾಣಿಸಿದರು. ಒಟ್ಟಿಗೆ ಸಮಯ ಕಳೆದ ನಂತರ ಡಿಸೆಂಬರ್​ 2020 ರಲ್ಲಿ ಅಧಿಕೃತವಾಗಿ ಡೇಟಿಂಗ್​ ಪ್ರಾರಂಭಿಸಿದರು. ರಾಚೆಲ್​ ಅವರ ಕುಟುಂಬವು ಇವರಿಬ್ಬರ ಸಂಬಂಧವನ್ನು ಒಪ್ಪಿಕೊಂಡಿದೆ, ಅಲೆಕ್ಸ್​ ಅವರ ಕುಟುಂಬವು ವಯಸ್ಸಿನ ಅಂತರವನ್ನು ಒಪ್ಪುವುದಿಲ್ಲ ಮತ್ತು ಅವರನ್ನು ಬೆಂಬಲಿಸುವುದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...