alex Certify ʼಮೊಬೈಲ್​ ಬ್ಯಾಟರಿʼ ದೀರ್ಘಕಾಲದವರೆಗೆ ಬಾಳಿಕೆ ಬರಲು ಈ ಟಿಪ್ಸ್​ ಫಾಲೋ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮೊಬೈಲ್​ ಬ್ಯಾಟರಿʼ ದೀರ್ಘಕಾಲದವರೆಗೆ ಬಾಳಿಕೆ ಬರಲು ಈ ಟಿಪ್ಸ್​ ಫಾಲೋ ಮಾಡಿ

ಒಂದು ಸ್ಮಾರ್ಟ್​ಫೋನ್​ ಸರಿಯಾಗಿ ಕಾರ್ಯನಿರ್ವಹಿಸಬೇಕು ಎಂದರೆ ಬ್ಯಾಟರಿಯ ಕಾರ್ಯದಕ್ಷತೆ ಸರಿಯಾಗಿ ಇರುವುದು ತುಂಬಾನೇ ಮುಖ್ಯ. ಡಿಸ್​ಪ್ಲೇ ಅಥವಾ ಪ್ರೊಸೆಸರ್​ಗಳಷ್ಟೇ ಬ್ಯಾಟರಿ ಕೂಡ ಮಹತ್ವ ಪಡೆದಿದೆ. ಆದರೆ ನೀವು ಕೊಂಚ ಎಡವಿದರೂ ಸಹ ಬ್ಯಾಟರಿ ತನ್ನ ಕಾರ್ಯಕ್ಷಮತೆಯನ್ನು ಕಳೆದುಕೊಂಡು ಬಿಡುತ್ತದೆ. ಹೀಗಾಗಿ ಬ್ಯಾಟರಿ ಸರಿಯಾಗಿ ಕೆಲಸ ಮಾಡಬೇಕು ಎಂದರೆ ನೀವು ಕೆಲವೊಂದು ಸಲಹೆಗಳನ್ನು ಪಾಲಿಸಬೇಕು.

80 ಪ್ರತಿಶತಕ್ಕಿಂತ ಹೆಚ್ಚು ಚಾರ್ಜ್ ಮಾಡಬೇಡಿ :

ನೀವು ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್​ ಮಾಡೋದ್ರಿಂದ ಬ್ಯಾಟರಿಯ ಮೇಲೆ ಒತ್ತಡ ಬೀಳುತ್ತದೆ, ಹೀಗಾಗಿ 80 ಪರ್ಸೆಂಟ್​ ಚಾರ್ಜ್​ ಆಗುತ್ತಿದ್ದಂತೆಯೇ ಬ್ಯಾಟರಿ ಚಾರ್ಜ್ ಮಾಡೋದನ್ನು ನಿಲ್ಲಿಸುವುದು ಉತ್ತಮ. ಐಫೋನ್​ ಹಾಗೂ ಎಸಸ್​ ಕಂಪನಿಯ ಮೊಬೈಲ್​ಗಳು 80 ಪರ್ಸೆಂಟ್ ಜಾರ್ಜ್ ಆಗುತ್ತಿದ್ದಂತೆಯೇ ತನ್ನಿಂದ ತಾನೇ ಆಫ್​ ಆಗುವ ವೈಶಿಷ್ಟ್ಯವನ್ನು ಹೊಂದಿವೆ,

20 ಪರ್ಸೆಂಟ್​ಕ್ಕಿಂತ ಕಮ್ಮಿ ಚಾರ್ಜ್​ನಲ್ಲಿ ಮೊಬೈಲ್​ ಬಳಸಬೇಡಿ :

ಬ್ಯಾಟರಿ ಫುಲ್​ ಚಾರ್ಜ್ ಮಾಡುವುದು ಎಷ್ಟು ತಪ್ಪೋ ಅದೇ ರೀತಿ ಬ್ಯಾಟರಿ ಲೋ ಆದಾಗಲೂ ಬ್ಯಾಟರಿ ಮೇಲೆ ಒತ್ತಡ ಬೀಳುತ್ತದೆ. ಹೀಗಾಗಿ ಮೊಬೈಲ್​ 20 ಪ್ರತಿಶತ ಚಾರ್ಜ್​ಗೆ ಬರುತ್ತಿದ್ದಂತೆಯೇ 80 ಪ್ರತಿಶತ ಚಾರ್ಜ್​ ಆಗುವವರೆಗೆ ಚಾರ್ಜ್ ಮಾಡಿ.

ಮೊಬೈಲ್​ ಓವರ್ ಹೀಟ್​ ಆಗಲು ಬಿಡಬೇಡಿ

ಮೊಬೈಲ್​ ಓವರ್​ಹೀಟ್​ ಮಾಡುವುದು ಕೂಡ ಬ್ಯಾಟರಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮೊಬೈಲ್​ನಲ್ಲಿ ಅತಿಯಾಗಿ ಗೇಮ್​ ಆಡುವಾಗ ಮೊಬೈಲ್​ ಹೀಟ್​ ಆಗುತ್ತದೆ. ಕೂಡಲೇ ಗೇಮ್ ಆಡುವುದನ್ನು ನಿಲ್ಲಿಸಿ. ಮೊಬೈಲ್​ ಕೂಲ್​ ಆಗುವವರೆಗೂ ಬಳಕೆ ಮಾಡಬೇಡಿ.

ಸಾಫ್ಟ್​ವೇರ್​ ಅಪ್​ಡೇಟ್​ ಮಾಡಿ :

ಯಾವಾಗಲೂ ಅಪ್​ಡೇಟ್​ಗಳು ಬಂದಾಗ ಸಾಫ್ಟ್​ವೇರ್ ಅಪ್​ಡೇಟ್​ ಮಾಡಿಬಿಡಿ. ಆದರೆ ಮೊಬೈಲ್​ ಅಪ್​ಡೇಟ್​ ಮಾಡುವಾಗ ಮೊಬೈಲ್​ ಚಾರ್ಜ್​ 50 ಪರ್ಸೆಂಟ್​ಕ್ಕಿಂತ ಮೇಲಿರುವಂತೆ ನೋಡಿಕೊಳ್ಳಿ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...