alex Certify ಐಪಿಎಲ್ ಮ್ಯಾಚ್‌ ನಡುವೆಯೇ ಫುಡ್ ಡೆಲಿವರಿ; ಅಪಾರ್ಟ್ಮೆಂಟ್‌ ಒಂದರ ಫೋಟೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಪಿಎಲ್ ಮ್ಯಾಚ್‌ ನಡುವೆಯೇ ಫುಡ್ ಡೆಲಿವರಿ; ಅಪಾರ್ಟ್ಮೆಂಟ್‌ ಒಂದರ ಫೋಟೋ ವೈರಲ್

ಕ್ರಿಕೆಟ್ ಜಗತ್ತಿನ ದಿಗ್ಗಜರೆಲ್ಲರೂ ಐಪಿಎಲ್‌ನಲ್ಲಿ ಭಾಗಿಯಾಗಲು ಭಾರತಕ್ಕೆ ಬಂದಿರುವ ಈ ಸಮಯದಲ್ಲಿ ದೇಶವಾಸಿಗಳಲ್ಲಿ ಕ್ರಿಕೆಟ್ ಜ್ವರ ವಿಪರೀತವಾಗಿಬಿಟ್ಟಿದೆ. ಅದೆಷ್ಟೇ ಅವಸರದ ಕೆಲಸವಿದ್ದರೂ ಸಹ ಮೊಬೈಲ್/ಟಿವಿ ಪರದೆ ಮೇಲೆ ಸ್ಕೋರ್‌ ಆದರೂ ನೋಡಬೇಕೆನ್ನುವ ಕಾತರ ಕ್ರಿಕೆಟ್ ಅಭಿಮಾನಿಗಳದ್ದು.

ಎಲಿವೇಟರ್‌ ಒಂದರಲ್ಲಿ ಸ್ವಿಗ್ಗಿ ಡೆಲಿವರಿ ಸಿಬ್ಬಂದಿ ಆಹಾರದ ಪೊಟ್ಟಣಗಳನ್ನು ಹಿಡಿದು ನಿಂತಿರುವ ಚಿತ್ರವೊಂದು ಟ್ವಿಟರ್‌ನಲ್ಲಿ ವೈರಲ್ ಆಗಿದೆ. ಈ ದೃಶ್ಯವನ್ನ ಕಂಡ ಟ್ವಿಟರ್‌ ಬಳಕೆದಾರರೊಬ್ಬರು ತಮ್ಮ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆ ಹಿಡಿದಿದ್ದಾರೆ. ತಂತಮ್ಮ ಆರ್ಡರ್‌ಗಳನ್ನು ಆಯಾಯಾ ಮಹಡಿಗಳಿಗೆ ತಲುಪಿಸಲು ಹೊರಟು ನಿಂತಿದ್ದಾರೆ ಈ ಡೆಲಿವರಿ ಏಜೆಂಟರ್‌ಗಳು.

“ಐಪಿಎಲ್ ಮ್ಯಾಚ್ ಅದೆಷ್ಟು ಆಸಕ್ತಿಕರವಾಗಿದೆ ಎಂಬುದು ಕಟ್ಟಡದಲ್ಲಿರುವ ಸ್ವಿಗ್ಗಿ ಹುಡುಗರು ಸಂಖ್ಯೆಗೆ ಅನುಗುಣವಾಗಿದೆ,” ಎಂದು ಶುಭ್ ಹೆಸರಿನ ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

“ಬಹುಶಃ ಮಧ್ಯದಲ್ಲಿರುವ ಹುಡುಗ ಸ್ಕೋರ್‌ ಚೆಕ್ ಮಾಡುತ್ತಿರಬಹುದು,” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...