alex Certify WAR BREAKING: ಕೀವ್ ಟಿವಿ ಟವರ್ ಮೇಲೆ ಬಾಂಬ್ ದಾಳಿ; ಐವರ ದುರ್ಮರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

WAR BREAKING: ಕೀವ್ ಟಿವಿ ಟವರ್ ಮೇಲೆ ಬಾಂಬ್ ದಾಳಿ; ಐವರ ದುರ್ಮರಣ

ಕೀವ್: ಉಕ್ರೇನ್ ನಲ್ಲಿ ರಷ್ಯಾ ಯುದ್ಧ 7ನೇ ದಿನಕ್ಕೆ ಕಾಲಿಟ್ಟಿದೆ. ಕೀವ್ ನ ಭದ್ರತಾ ಸೇವೆ, ಇನ್ ಫಾರ್ಮೇಷನ್ ಸೆಂಟರ್ ಗಳ ಮೇಲೆ ದಾಳಿ ನಡೆಸುವ ಎಚ್ಚರಿಕೆ ನೀಡಿದ್ದ ರಷ್ಯಾ ಸೇನೆ ಇದೀಗ ಟಿವಿ ಟವರ್ ಮೇಲೆ ಬಾಂಬ್ ದಾಳಿ ನಡೆಸಿದೆ.

ಕೀವ್ ನಲ್ಲಿರುವ ಟಿವಿ ಟವರ್ ಮೇಲೆ ರಷ್ಯಾ ದಾಳಿ ನಡೆಸಿದ್ದು, ಐವರು ಸಾವನ್ನಪ್ಪಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ದಾಳಿ ಬೆನ್ನಲ್ಲೇ ಉಕ್ರೇನಾದ್ಯಂತ ಟಿವಿ ಚಾನಲ್ ಗಳ ಪ್ರಸಾರ ಸ್ಥಗಿತಗೊಂದಿದೆ.

ಯುದ್ಧದ ಬಗ್ಗೆ ಮಾಹಿತಿ ಸಿಗದಂತೆ ಮಾಡುವ ಉದ್ದೇಶದಿಂದ ಉಕ್ರೇನ್ ರಾಜಧಾನಿಯಲ್ಲಿನ ಇನ್ ಫರ್ಮೇಷನ್ ಹಾಗೂ ಸೈಕಲಾಜಿಕಲ್ ಸೆಂಟರ್ ಹಾಗೂ ಸೇನಾ ನೆಲೆಗಳ ಮೇಲೆ ಆಕ್ರಮಣ ನಡೆಸಿದೆ.

ಇನ್ನು ಖಾರ್ಕಿವ್ ನಗರದ ಮೇಲೆ ರಾಕೆಟ್ ದಾಳಿ ಮುಂದುವರೆಸಿರುವ ರಷ್ಯಾ ಅಟ್ಟಹಾಸಕ್ಕೆ 11 ನಾಗರಿಕರು ಬಲಿಯಾಗಿದ್ದಾರೆ. ಕೀವ್ ಹಾಗೂ ಖಾರ್ಕಿವ್ ನಲ್ಲಿ ಬಾಂಬ್ ದಾಳಿ ತೀವ್ರಗೊಳಿಸಿರುವ ರಷ್ಯಾ ಕಟ್ಟಡಗಳನ್ನು ಛಿದ್ರ ಛಿದ್ರಗೊಳಿಸುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...