alex Certify BREAKING : ‘ರಾಕ್ ಲೈನ್ ವೆಂಕಟೇಶ್’ ತಮ್ಮನ ಮನೆಗೆ ಕನ್ನ : 5 ಕೆಜಿ ಚಿನ್ನ, 6 ಲಕ್ಷ ನಗದು ದೋಚಿದ ಖದೀಮರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ‘ರಾಕ್ ಲೈನ್ ವೆಂಕಟೇಶ್’ ತಮ್ಮನ ಮನೆಗೆ ಕನ್ನ : 5 ಕೆಜಿ ಚಿನ್ನ, 6 ಲಕ್ಷ ನಗದು ದೋಚಿದ ಖದೀಮರು

ಬೆಂಗಳೂರು : ನಟ ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸಹೋದರನ ಮನೆಯಲ್ಲಿ ಕಳ್ಳತನ ನಡೆದಿದ್ದು, 5 ಕೆಜಿ ಚಿನ್ನ ಹಾಗೂ 6 ಲಕ್ಷ ನಗದು ಕಳ್ಳತನವಾಗಿದೆ ಎಂದು ತಿಳಿದು ಬಂದಿದೆ.

ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ರಾಕ್ ಲೈನ್ ವೆಂಕಟೇಶ್ ಸಹೋದರ ಭ್ರಮರೇಶ್ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆಯವರು ಯುರೋಪ್ ಪ್ರವಾಸದಿಂದ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಮನೆ ಕಿಟಕಿ ಒಡೆದು ಮನೆಗೆ ನುಗ್ಗಿದ ಖದೀಮರು ಚಿನ್ನ ಹಾಗೂ ಹಣ ದೋಚಿದ್ದಾರೆ.

ಈ ಸಂಬಂಧ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ ಪೊಲೀಸರು ಖದೀಮರ ಪತ್ತೆಗೆ ಬಲೆ ಬೀಸಿದ್ದಾರೆ. ಹುಲಿ ಉಗುರು ಪ್ರಕರಣ ಸಂಬಂಧ ಇತ್ತೀಚೆಗೆಷ್ಟೇ ರಾಕ್ ಲೈನ್ ವೆಂಕಟೇಶ್ ನಿವಾಸದಲ್ಲಿ ಅರಣ್ಯಾಧಿಕಾರಿಗಳು ಶೋಧ ನಡೆಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...