ತನ್ನ ಕರುಳುಗಳನ್ನು ಹರಿದುಕೊಂಡಿದ್ದ ಐದು ಅಡಿ ಉದ್ದದ ಹಾವೊಂದನ್ನು ಚೆನ್ನೈನ ಗಿಂಡಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪಶುವೈದ್ಯರು ಚಿಕಿತ್ಸೆ ನೀಡಿ ಬದುಕುಳಿಸಿದ್ದಾರೆ.
ನಗರದಲ್ಲಿ ಕಳೆದ 10 ದಿನಗಳಿಂದ ಭಾರೀ ಮಳೆಯಾಗುತ್ತಿರುವ ನಡುವೆ ಮನೆಗಳಿಗೆ ಹಾವುಗಳು ಅಕಸ್ಮಾತ್ ಆಗಿ ಬಂದಿರುವ ಪ್ರಕರಣಗಳ ತಲಾಶೆಯಲ್ಲಿರುವ ಗಿಂಡಿ ಅರಣ್ಯ ಇಲಾಖೆಯ ಕಣ್ಣಿಗೆ ಇಲ್ಲಿನ ಲೂಕಾಸ್ ಪ್ರದೇಶದಲ್ಲಿ ಜೆಸಿಬಿ ಯಂತ್ರವೊಂದರಲ್ಲಿ ಹಾವೊಂದು ಸಿಲುಕಿ ನರಳುತ್ತಿರುವುದು ಕಂಡಿದೆ. ತನ್ನ ದೇಹ ಅರ್ಧಕ್ಕೆ ಕಡಿದುಕೊಂಡಿಂತೆ ಕಾಣುತ್ತಿದ್ದ ಈ ಹಾವು ಕರುಳು ಹರಿದುಹೋಗಿ ಜೀವ ಉಳಿಸಿಕೊಳ್ಳಲು ಪರದಾಡುತ್ತಿತ್ತು.
ಆನ್ಲೈನ್ ಕ್ಲಾಸ್ ನಲ್ಲಿ ಅಚಾತುರ್ಯ: ಅಶ್ಲೀಲ ವೀಡಿಯೋ ಪ್ರಸಾರ; ಮಕ್ಕಳು, ಶಿಕ್ಷಕರಿಗೆ ಮುಜುಗರ
ಈ ವೇಳೆ ಯಾವುದೇ ವಿಳಂಬ ಮಾಡದ ಗಿಂಡಿ ಅರಣ್ಯ ಇಲಾಖೆ ಅಧಿಕಾರಿಗಳು ವೈದ್ಯರ ನೆರವಿನಿಂದ ಹಾವಿಗೆ ಶಸ್ತ್ರ ಚಿಕಿತ್ಸೆ ಮಾಡಿ, ಅದರ ಕರುಳನ್ನು ದೇಹದ ಒಳಗೆ ಮತ್ತೆ ಸೇರಿಸುವ ಯತ್ನಕ್ಕೆ ಮುಂದಾಗಿದ್ದಾರೆ. 45 ನಿಮಿಷಗಳ ಕಾಲ ನಡೆದ ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.
ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಹಾವನ್ನು ಸದ್ಯದ ಮಟ್ಟಿಗೆ ಗಾಜಿನ ಡಬ್ಬಿಯೊಂದರಲ್ಲಿ ಇಡಲಾಗಿದೆ. ಈ ಹಾವು ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕ ಅದನ್ನು ಕಾಡಿಗೆ ಬಿಡಲಾಗುವುದು.