alex Certify ಚಾರ್ಲ್ಸ್ – ಡಯಾನ ವಿವಾಹ ಸಂದರ್ಭದಲ್ಲಿನ 41 ವರ್ಷಗಳ ಹಿಂದಿನ ಕೇಕ್ ಹರಾಜು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಾರ್ಲ್ಸ್ – ಡಯಾನ ವಿವಾಹ ಸಂದರ್ಭದಲ್ಲಿನ 41 ವರ್ಷಗಳ ಹಿಂದಿನ ಕೇಕ್ ಹರಾಜು…!

41 ವರ್ಷಗಳ ಹಿಂದೆ ರಾಜಕುಮಾರಿ ಡಯಾನ ಮತ್ತು ಕಿಂಗ್ ಚಾರ್ಲ್ಸ್ ರಾಜಮನೆತದ ವಿವಾಹ ಸಂದರ್ಭದಲ್ಲಿ ತಯಾರಿಸಲಾಗಿದ್ದ ಕೇಕ್ ತುಂಡೊಂದನ್ನು ಹರಾಜು ಮಾಡಲಾಗುತ್ತಿದ್ದು, ಇದು ಲಕ್ಷಾಂತರ ರೂಪಾಯಿಗಳಿಗೆ ಬಿಕರಿಯಾಗಬಹುದು ಎಂದು ಅಂದಾಜಿಸಲಾಗಿದೆ.

1981 ರಲ್ಲಿ ನಡೆದಿದ್ದ ಈ ವಿವಾಹ ಸಂದರ್ಭದಲ್ಲಿ 3000ಕ್ಕೂ ಅಧಿಕ ಗಣ್ಯರು ಪಾಲ್ಗೊಂಡಿದ್ದು, ಕಳೆದ ವರ್ಷ ವಿಧಿವಶರಾದ ನಿಗೆಲ್ ರಿಕೆಟ್ಸ್ ಎಂಬ ಅತಿಥಿ 41 ವರ್ಷಗಳಿಂದ ಈ ಕೇಕ್ ತುಂಡನ್ನು ಜತನದಿಂದ ಕಾಪಾಡಿಕೊಂಡು ಬಂದಿದ್ದರು. ಇದೀಗ ಅವರ ಕುಟುಂಬ ಸಂಸ್ಥೆಯೊಂದರ ಸಹಯೋಗದಲ್ಲಿ ಹರಾಜು ಮಾಡುತ್ತಿದೆ.

ವಿವಾಹ ಸಂದರ್ಭದಲ್ಲಿ ನೀಡಲಾಗಿದ್ದ ಮೂಲ ಪೆಟ್ಟಿಗೆಯಲ್ಲಿ ಈ ಕೇಕ್ ತುಂಡನ್ನು ಪ್ಯಾಕ್ ಮಾಡಲಾಗಿದ್ದು, ಅದರ ಮೇಲೆ ರಾಜಮನೆತನದ ಸಿಬ್ಬಂದಿಯ ಕೈಬರಹದ ಧನ್ಯವಾದ ಟಿಪ್ಪಣಿ ಸಹ ಇದೆ. ಇತ್ತೀಚೆಗಷ್ಟೇ ರಾಣಿ ಎಲಿಜಬೆತ್ ಅವರ ಟೀ ಬ್ಯಾಗ್ ಬರೋಬ್ಬರಿ 9.5 ಲಕ್ಷ ರೂಪಾಯಿಗಳಿಗೆ ಮಾರಾಟವಾಗಿ ಅಚ್ಚರಿ ಮೂಡಿಸಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...