alex Certify ಚಿಕ್ಕಮಗಳೂರಿನಲ್ಲಿ 40 ಕೆಜಿ ಟೊಮೆಟೊ ಕಳ್ಳತನ : ದೂರು ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿಕ್ಕಮಗಳೂರಿನಲ್ಲಿ 40 ಕೆಜಿ ಟೊಮೆಟೊ ಕಳ್ಳತನ : ದೂರು ದಾಖಲು

ಚಿಕ್ಕಮಗಳೂರು : ಕರ್ನಟಕ ಸೇರಿದಂತೆ ದೇಶಾದ್ಯಂತ ಟೊಮೆಟೊ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಕೆಲವೊಂದು ಭಾಗದಲ್ಲಿ ಇದೀಗ ಟೊಮೆಟೊ ಬೆಲೆ 150 ರೂ. ಗಡಿ ದಾಟಿದೆ. ಈ ನಡುವೆ ಕಳ್ಳರ ಹಾವಾಳಿಯೂ ಹೆಚ್ಚಾಗಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ 40 ಕೆಜಿ ಟೊಮೆಟೊ ಕಳ್ಳತನವಾಗಿರುವ ಘಟನೆ ನಡೆದಿದೆ.

ಆಲ್ದೂರು ಪಟ್ಟಣದ ನದೀಂ ಎಂಬವರ ತರಕಾರಿ ಅಂಗಡಿಯಲ್ಲಿದ್ದ 40 ಕೆ.ಜಿ. ಟೊಮೆಟೋ  ಇದ್ದ 2 ಟ್ರೇ ಕಳ್ಳತನವಾಗಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಘಟನೆ ಜಿಲ್ಲೆಯ ಆಲ್ದೂರಿನಲ್ಲಿ ನಡೆದಿದೆ.

ಸೋಮವಾರ ರಾತ್ರಿ ಕಳ್ಳರು ಅಂಗಡಿಗೆ ನುಗ್ಗಿ ಟೊಮೆಟೊ ಕಳ್ಳತನ ಮಾಡಿದ್ದು, ಮಂಗಳವಾರ ಬೆಳಗ್ಗೆ ನದೀಂ ಅಂಗಡಿಗೆ ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಆಲ್ದೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...