ಲೌರೆನ್ ನಿಕೋಲ್ ಜೋನ್ಸ್ ಎಂಬಾಕೆ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು ಈಕೆಗೆ ಫೋಟೋ ಆಲ್ಬಂಗಳಲ್ಲಿ ತನ್ನ ಕುಟುಂಬಸ್ಥರ ಮುಖವೇ ನೆನಪು ಹೋಗುತ್ತದೆಯಂತೆ.
ಈಕೆಯ ಪರಿಸ್ಥಿತಿ ಎಷ್ಟು ಸೂಕ್ಷ್ಮವಾಗಿದೆಯೆಂದರೆ ಒಮ್ಮೊಮ್ಮೆ ಆಕೆಗೆ ತನ್ನ ಮದುವೆ ಆಲ್ಬಂನಲ್ಲಿ ತನ್ನ ಮುಖವೇ ಗುರುತು ಸಿಗೋದಿಲ್ಲವಂತೆ.
33 ವರ್ಷದ ಲೌರೆನ್ ಮುಖ ಕುರುಡು ಎಂಬ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಈ ಸಮಸ್ಯೆ ಉಳ್ಳವರು ತಮ್ಮ ಪರಿಚಯಸ್ಥರ ಮುಖವನ್ನೇ ಮರೆತು ಬಿಡ್ತಾರೆ. ಒಮ್ಮೊಮ್ಮೆ ತಮ್ಮ ಮುಖವನ್ನೇ ತಾವು ಮರೆಯುವುದುಂಟು..!
ಇನ್ನು ಈ ವಿಚಾರವಾಗಿ ಮಾತನಾಡಿರುವ ಲೌರೆನ್, ನನ್ನ ಮದುವೆ ಆಲ್ಬಂನಲ್ಲೇ ನನ್ನನ್ನ ನನಗೆ ಗುರುತಿಸಲು ಸಾಧ್ಯವಾಗಲಿಲ್ಲ. ನಾನು ಮದುವೆಗೆ ಧರಿಸಿದ್ದ ಗೌನ್ ನೆನಪಿದ್ದರಿಂದ ನನಗೆ ಅದು ನಾನೇ ಎಂದು ತಿಳಿಯಿತು ಎಂದಿದ್ದಾಳೆ.
ಈ ಸಮಸ್ಯೆ ಎಷ್ಟರ ಮಟ್ಟಿಗೆ ತೀವ್ರವಾಗಿದೆಯೆಂದರೆ ಆಕೆಗೆ ತನ್ನ ಸ್ನೇಹಿತೆಯ ಮುಖವೂ ಮರೆತು ಹೋಗಿಬಿಡುತ್ತೆ. ಸೆಲೆಬ್ರಿಟಿಗಳ ಮುಖವನ್ನೂ ಲೌರೆನ್ ಮರೆತುಬಿಡ್ತಾರಂತೆ.