alex Certify ಹಡಗಿನಲ್ಲಿ ಅಗ್ನಿ ದುರಂತ: ಕನಿಷ್ಠ 32 ಜನ ಸಾವು…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಡಗಿನಲ್ಲಿ ಅಗ್ನಿ ದುರಂತ: ಕನಿಷ್ಠ 32 ಜನ ಸಾವು…..!

ಹಡಗಿನಲ್ಲಿ ಅಗ್ನಿ ದುರಂತ ಸಂಭವಿಸಿದ ಪರಿಣಾಮ ಅದರಲ್ಲಿದ್ದ ಹಲವರು ಸಜೀವವಾಗಿ ದಹನವಾಗಿದ್ದು, ಸದ್ಯ ಕನಿಷ್ಠ 32 ಜನರ ದೇಹವನ್ನು ಹೊರ ತೆಗೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಘಟನೆ ಬಾಂಗ್ಲಾದೇಶದ ಜಕಾಕತಿ ಟೌನ್ ಹತ್ತಿರದ ನದಿಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ್ದು, ಓಬಿಜಾನ್ 10 ಎಂಬ ಮೂರು ಅಂತಸ್ತಿನ ಹಡಗಿನಲ್ಲಿ ಈ ದುರ್ಘಟನೆ ನಡೆದಿದೆ.

ಕೂಡಲೇ ಹಲವರು ನೀರಿಗೆ ಹಾರಿ ಪ್ರಾಣ ಬಿಟ್ಟಿದ್ದರೆ, ಹಲವರು ಬೆಂಕಿಗೆ ಆಹುತಿಯಾಗಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಳವಾಗಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.

ಹಡಗುಗಳಲ್ಲಿ ಸರಿಯಾದ ನಿರ್ವಹಣೆ ಹಾಗೂ ಸುರಕ್ಷತಾ ಸೌಕರ್ಯಗಳನ್ನು ಅಳವಡಿಸಿಕೊಳ್ಳದ ಹಿನ್ನೆಲೆಯಲ್ಲಿ ಇಂತಹ ಘಟನೆಗಳು ನಡೆಯುತ್ತವೆ. ಅಲ್ಲದೇ, ನದಿಗಳ ತಗ್ಗು ಪ್ರದೇಶ ಡೆಲ್ಟಾ ವ್ಯಾಪ್ತಿಯಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿವೆ ಎಂದು ಹೇಳಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...