alex Certify ಏಕಕಾಲದಲ್ಲಿ ಮೂವರೊಂದಿಗೆ ಪ್ರೀತಿ….! ಯುವಕನಿಗೆ ಪ್ರಿಯತಮೆಯರು ಮಾಡಿದ್ದೇನು ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏಕಕಾಲದಲ್ಲಿ ಮೂವರೊಂದಿಗೆ ಪ್ರೀತಿ….! ಯುವಕನಿಗೆ ಪ್ರಿಯತಮೆಯರು ಮಾಡಿದ್ದೇನು ಗೊತ್ತಾ..?

ಇಲ್ಲೊಬ್ಬ ನೀನೇ ನನ್ನ ಚಿನ್ನ-ರನ್ನ ಅಂದಿದ್ದು ಒಬ್ಬಳನ್ನಲ್ಲ..! ಮೂವರು ಯುವತಿಯರಿಗೆ ಗಾಳ ಹಾಕಿ ತನ್ನ ಬಲೆಗೆ ಬೀಳಿಸಿಕೊಂಡ.. ನಿಜ ಗೊತ್ತಾದಾಗ ಯುವತಿಯರು ಮಾಡಿದ್ದೇನು ಗೊತ್ತಾ..?

ಹೌದು, ಒಂದೇ ಸಮಯದಲ್ಲಿ ಮೂವರು ಯುವತಿಯರನ್ನು ವ್ಯಕ್ತಿಯೊಬ್ಬ ಪ್ರೀತಿಸಿದ ವಿಚಾರ ತಿಳಿದಾಗ ಯುವತಿಯರು ಶಾಕ್ ಆಗಿರುವಂತಹ ಘಟನೆ ನಡೆದಿದೆ. ಮೋಸ ಮಾಡಿದ ಪ್ರಿಯತಮನನ್ನು ಒದ್ದು ಹೊರಹಾಕಿ, ಮೋಸ ಹೋದ ಯುವತಿಯರು ಗೆಳತಿಯಾರಾದರು. ಹಾಗಂತ ಇವರೇನು ಅಳುತ್ತಾ ಕೂರುವ ಜಾಯಮಾನದವರಲ್ಲ. ನೋವು ಮರೆಯೋಕೆ ಈ ಮೂವರು ಸೇರಿ ದೇಶ ಸುತ್ತಲು ಬಸ್ ಖರೀದಿ ಮಾಡಿದ್ದಾರೆ.

ಹೌದು, ಬೇರೊಬ್ಬ ಯುವತಿಯೊಂದಿಗಿದ್ದ ಪ್ರಿಯತಮನ ಫೋಟೋ ನೋಡಿ ಟಾಬರ್ ಎಂಬಾಕೆ ಆಘಾತಕ್ಕೊಳಗಾಗಿದ್ದಳು. ಟಾಬರ್ ಆತನನ್ನೇ ಮದುವೆಯಾಗಬೇಕೆಂದು ನಿರ್ಧರಿಸಿದ್ದಳು. ಆದರೆ ಪ್ರಿಯತಮ ತನಗೆ ಮೋಸ ಮಾಡುತ್ತಿದ್ದಾನೆ ಎಂದು ತಿಳಿದಾಗ ಅಕ್ಷರಶಃ ಆಕೆ ಕುಸಿದು ಬಿದ್ದಿದ್ದಳು.

ಬೆಳೆ ವಿಮೆಗೂ ನಾಮಿನಿ ಕಡ್ಡಾಯ: ಬಿ.ಸಿ. ಪಾಟೀಲ್

ಅಲ್ಲದೆ ತನ್ನ ಪ್ರಿಯತಮ ಬೇರೆ ಯಾವೆಲ್ಲಾ ಯುವತಿಯರ ಜತೆ ಪ್ರೇಮ ಹೊಂದಿದ್ದಾನೆ ಎಂಬ ಬಗ್ಗೆ ಮಾಹಿತಿ ಪಡೆದುಕೊಂಡಳು. ತಾನಿಂದು ಹೊಸ ಸ್ನೇಹಿತರನ್ನ ಪರಿಚಯ ಮಾಡಿಕೊಡುವುದಾಗಿ ಹೇಳಿ ಮೊಬೈಲ್ ನಲ್ಲಿ ಫೋಟೋ ತೋರಿಸಿದಾಗ ಆತನ ಮುಖ ಕಪ್ಪಿಟ್ಟಿತು. ಬೆಪ್ಪಾದ ಯುವಕ ವಿವರಣೆ ನೀಡಲು ಪ್ರಯತ್ನಿಸಿದ್ದಾನೆ. ಆದರೆ ಮೊದಲೇ ಕೋಪಗೊಂಡಿದ್ದ ಮೂವರು ಯುವತಿಯರು ಆತನನ್ನು ಹೊರಗೆ ಹಾಕಿದರು. ಬಳಿಕ ಇವರು ಮೂವರು ಮಾತ್ರವಲ್ಲದೆ ಒಟ್ಟು ಆರು ಮಂದಿಗೆ ಮೋಸ ಮಾಡಿದ್ದಾನೆ ಎಂಬುದು ತಿಳಿದು ಬಂತು.

ಪ್ರಿಯತಮ ಮೋಸ ಮಾಡಿದ್ದರಿಂದ ದುಃಖಕ್ಕೊಳಗಾದ ಕಿಂಗ್, ರಾಬರ್ಟ್ ಹಾಗೂ ಟ್ಯಾಬರ್ ಸ್ನೇಹಿತೆಯರಾದರು. ಇವರು ತಮ್ಮ ಪ್ರಿಯತಮ ಮಾಡಿರುವಂತಹ ಮೋಸ ಮರೆಯೋಕೆ ದೇಶ ಪರ್ಯಟನೆ ಮಾಡಲು ನಿರ್ಧರಿಸುತ್ತಾರೆ. ಅದಕ್ಕಾಗಿ ಒಂದು ಬಸ್ ಖರೀದಿ ಕೂಡ ಮಾಡುತ್ತಾರೆ. ಬಸ್ ಮೂಲಕ ಪ್ರವಾಸ ಕೈಗೊಂಡ ಯುವತಿಯರು, ನದಿ-ಸರೋವರ, ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಈಗಾಗಲೇ ಪ್ರವಾಸದಲ್ಲಿರುವ ಯುವತಿಯರು ನವೆಂಬರ್ ನಲ್ಲಿ ತಮ್ಮ ಮನೆಗಳಿಗೆ ಮರಳಲು ನಿರ್ಧರಿಸಿದ್ದಾರಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...