alex Certify 3 ನಾಗರಹಾವುಗಳ ಮುಖಾಮುಖಿ ಭೇಟಿ……! ಮಹತ್ವದ ಸಭೆ ನಡೆಸುತ್ತಿವೆ ಎಂದು ನೆಟ್ಟಿಗರ ಹಾಸ್ಯ ಚಟಾಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

3 ನಾಗರಹಾವುಗಳ ಮುಖಾಮುಖಿ ಭೇಟಿ……! ಮಹತ್ವದ ಸಭೆ ನಡೆಸುತ್ತಿವೆ ಎಂದು ನೆಟ್ಟಿಗರ ಹಾಸ್ಯ ಚಟಾಕಿ

Viral Video: 3 King Cobras Engage in Intense Face Off. Netizens Say Important Meeting Chal Rahiನಾಗರಹಾವು ಅಂದ್ರೆ ಹಲವರಲ್ಲಿ ಭಯನೂ ಇದೆ, ಅಷ್ಟೇ ಭಕ್ತಿಯೂ ಇದೆ. ನಾಗರಹಾವನ್ನು ದೇವರೆಂದೇ ಪೂಜೆ ಮಾಡಲಾಗುತ್ತದೆ. ಆದರೆ, ಎಲ್ಲಾದ್ರೂ ನಾಗರಹಾವನ್ನು ಕಂಡ್ರೆ ಮಾತ್ರ ಎದೆ ಬಡಿತ ಜೋರಾಗಿ ಹೊಡೆದುಕೊಳ್ಳುತ್ತದೆ. ಅಂಥಾದ್ರಲ್ಲಿ ಮೂರು ನಾಗರಹಾವುಗಳ ಪರಸ್ಪರ ಮುಖಾಮುಖಿಯ ದೃಶ್ಯವನ್ನು ನೀವು ಎಂದಾದ್ರೂ ನೋಡಿದ್ದೀರಾ..? ಇಂಥಾ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಾಡಿನಲ್ಲಿ ಮೂರು ಬುಸ್ ಬುಸ್ ನಾಗಪ್ಪಂದಿರು ಮುಖಾಮುಖಿಯಾಗಿದ್ದಾರೆ. ನೋಡಲು ಕಾಳಿಂಗ ಸರ್ಪದಂತೆ ಕಾಣುವ ಈ ಹಾವುಗಳ ವಿಡಿಯೋ ನೋಡಿದ್ರೆ, ಉರಗ ಪ್ರೇಮಿಗಳಿಗೆ ಖುಷಿಯಾಗದೆ ಇರಲಾರದು. ಎರಡು ನಾಗರಹಾವುಗಳು ಪರಸ್ಪರ ಮುಖಾಮುಖಿಯಾಗಿದ್ದರೆ, ಇನ್ನೊಂದು ಹಾವು ಈ ಎರಡೂ ಹಾವುಗಳನ್ನು ವೀಕ್ಷಿಸುತ್ತಿದೆ. ಇವುಗಳು ನೋಡುತ್ತಿರುವ ರೀತಿ ನೋಡಿದ್ರೆ, ನೇರವಾಗಿ ದಾಳಿ ಮಾಡಬಹುದಾ..? ಅಥವಾ ಬೇಡವಾ ಎಂಬ ಬಗ್ಗೆ ನಿರ್ಧರಿಸುತ್ತಿರುವಂತೆ ಕಾಣುತ್ತಿದೆ.

ಮೂರು ಹಾವುಗಳು ಪರಸ್ಪರ ಮುಖಾಮುಖಿಯಾಗಿರುವ ಅಚ್ಚರಿಯ ದೃಶ್ಯವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ ಸಾವಿರಾರು ಲೈಕ್ಸ್ ಗಳು ಬಂದಿದ್ದು, ವೈರಲ್ ಆಗಿದೆ. ವಿಡಿಯೋವನ್ನು ವೀಕ್ಷಿಸಿದ ನೆಟ್ಟಿಗರು, ಉಲ್ಲಾಸದ ಕಮೆಂಟ್ ಗಳನ್ನು ಮಾಡಿದ್ದಾರೆ. ನಗುವ ಎಮೋಜಿಗಳೊಂದಿಗೆ ಕಮೆಂಟ್ ವಿಭಾಗವನ್ನು ತುಂಬಿದ್ದಾರೆ. ಹಾವುಗಳು ಮಹತ್ವದ ಸಭೆ ನಡೆಸುತ್ತಿವೆ ಅಂತೆಲ್ಲಾ ಪ್ರತಿಕ್ರಿಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...