alex Certify 3ನೇ ಅಲೆಯಲ್ಲಿಯೂ ಮಕ್ಕಳು ಸೇಫ್ – ಅಧ್ಯಯನದಲ್ಲಿ ಸಮಾಧಾನಕರ ಸಂಗತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

3ನೇ ಅಲೆಯಲ್ಲಿಯೂ ಮಕ್ಕಳು ಸೇಫ್ – ಅಧ್ಯಯನದಲ್ಲಿ ಸಮಾಧಾನಕರ ಸಂಗತಿ ಬಹಿರಂಗ

ಬೆಂಗಳೂರು: ರಾಜ್ಯ ಸೇರಿದಂತೆ ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಮೂರನೇ ಅಲೆ ಹೆಚ್ಚು ಭಯ ಸೃಷ್ಟಿಸುತ್ತಿದೆ. ಈ ಸಂದರ್ಭದಲ್ಲಿ ಅಧ್ಯಯನವೊಂದು ಸಮಾಧಾನಕರ ಸಂಗತಿಯೊಂದನ್ನು ಹೊರ ಹಾಕಿದೆ.

ಮೂರನೇ ಅಲೆಯ ಸಂದರ್ಭದಲ್ಲಿ ಮಕ್ಕಳೇ ಹೆಚ್ಚಾಗಿ ಟಾರ್ಗೆಟ್ ಆಗುತ್ತಾರೆ ಎಂದು ಇಲ್ಲಿಯವರೆಗೂ ತಜ್ಞರು ಅಂದಾಜಿಸಿದ್ದರು. ಆದರೆ, ಈ ಅಲೆಯಲ್ಲಿ ಅಂತಹ ಸನ್ನಿವೇಶ ಸೃಷ್ಟಿಯಾಗಿಲ್ಲ. ವಯಸ್ಕರನ್ನು ನೋಡಿದರೆ, ಸೋಂಕಿಗೆ ಒಳಗಾಗುವವರಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಿದೆ ಎಂದು ರಾಜ್ಯ ಕೋವಿಡ್ ವಾರ್ ರೂಮ್‌ ವಿಶ್ಲೇಷಣೆ ತಿಳಿಸಿದೆ.

ಮೊದಲ ಅಲೆ ಆರಂಭವಾದಾಗಿನಿಂದಲೂ ಇಲ್ಲಿಯವರೆಗೆ ರಾಜ್ಯದಲ್ಲಿ 9 ವರ್ಷದೊಳಗಿನ 97,490 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ. 10 ರಿಂದ 18 ವರ್ಷದೊಳಗಿನ 2,49,661 ಮಕ್ಕಳಲ್ಲಿ ವೈರಸ್ ಕಾಣಿಸಿಕೊಂಡಿದ್ದು, ಈ ವಯೋಮಾನದ 94 ಮಕ್ಕಳು ಬಲಿಯಾಗಿದ್ದಾರೆ. ಇನ್ನೂ 9 ವರ್ಷದೊಳಗಿನ 67 ಮಕ್ಕಳು ಸಾವನ್ನಪ್ಪಿದ್ದಾರೆ.

ಜನವರಿಯಲ್ಲಿ 18 ವರ್ಷದೊಳಗಿನ ಮಕ್ಕಳ ಪಾಸಿಟಿವಿಟಿ ದರ ಶೇ. 2.71ರಷ್ಟಿದೆ. ಇದೇ ದರ ಡಿಸೆಂಬರ್ ನಲ್ಲಿ 0.22ರಷ್ಟಿತ್ತು. ಎರಡನೇ ಅಲೆಯ ಸಂದರ್ಭದಲ್ಲಿ ನೋಡುವುದಾದರೆ 2021ರ ಏಪ್ರಿಲ್ ನಲ್ಲಿ ಶೇ. 8.82ರಷ್ಟು ಹಾಗೂ ಕಳೆದ ವರ್ಷದ ಮೇನಲ್ಲಿ 24.61ರಷ್ಟಿತ್ತು. ಜನವರಿ ತಿಂಗಳಲ್ಲಿ ವಯಸ್ಕರ ಪಾಸಿಟಿವಿಟಿ ದರ ಶೇ.7.75ರಷ್ಟಿದೆ. ಹೀಗಾಗಿ ಮೂರನೇ ಅಲೆಯಲ್ಲಿ ಮಕ್ಕಳಿಗಿಂತ ವಯಸ್ಕರನ್ನೇ ಸೋಂಕು ಹೆಚ್ಚಾಗಿ ಕಾಡುತ್ತಿದೆ ಎಂದು ಅಧ್ಯಯನ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...