alex Certify 28 ಪತ್ನಿಯರು, 35 ಮಕ್ಕಳು, 126 ಮೊಮ್ಮಕ್ಕಳ ಸಮ್ಮುಖದಲ್ಲಿ 37ನೇ ಪತ್ನಿಯ ವರಿಸಿದ ವೃದ್ಧ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

28 ಪತ್ನಿಯರು, 35 ಮಕ್ಕಳು, 126 ಮೊಮ್ಮಕ್ಕಳ ಸಮ್ಮುಖದಲ್ಲಿ 37ನೇ ಪತ್ನಿಯ ವರಿಸಿದ ವೃದ್ಧ..!

ಹಿಂದೆ ರಾಜ-ಮಹಾರಾಜರು ಹತ್ತಾರು ಮಂದಿಯನ್ನು ವಿವಾಹವಾಗಿರುವ ಬಗ್ಗೆ ಇತಿಹಾಸ ಮುಖಾಂತರ ಓದಿ ತಿಳಿದುಕೊಂಡಿದ್ದೇವೆ. ಆದರೀಗ ಬಹುಪತ್ನಿತ್ವ ಬಹಳ ವಿರಳವಾಗಿದ್ದು, ಏಕಪತ್ನಿ ವ್ರತಸ್ಥರೇ ಹೆಚ್ಚಾಗಿದ್ದಾರೆ. ಅಂಥಾದ್ರಲ್ಲಿ ಇಲ್ಲೊಬ್ಬ ಭೂಪ 37ನೇ ಮದುವೆಯಾಗಿ ಸುದ್ದಿಯಾಗಿದ್ದಾನೆ.

ಹೌದು, ಬಹಳ ವಿರಳ ಸನ್ನಿವೇಶಗಳಲ್ಲಿ 2ನೇ ಮದುವೆ, 3ನೇ ಮದುವೆ ಬಗ್ಗೆ ಕೇಳಿರ್ತೀರಾ. ಆದರೆ, ಇಲ್ಲೊಬ್ಬ ವೃದ್ಧ ತನ್ನ 28 ಪತ್ನಿಯರು, 35 ಮಕ್ಕಳು ಹಾಗೂ 126 ಮೊಮ್ಮಕ್ಕಳ ಸಮ್ಮುಖದಲ್ಲಿ 37ನೇ ಪತ್ನಿಯನ್ನು ವಿವಾಹವಾಗಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ರೂಪಿನ್ ಶರ್ಮಾ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಯಾವಾಗ ಮತ್ತು ಎಲ್ಲಿ ಚಿತ್ರೀಕರಿಸಲಾಗಿದೆ ಎಂಬುದು ತಿಳಿದಿಲ್ಲ. ಕಳೆದ ವರ್ಷ ಜೂನ್‌ನಲ್ಲಿ ವೈರಲ್ ಆಗಿದ್ದ ವಿಡಿಯೋ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋಗೆ ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಎಂತಹ ಅದೃಷ್ಟವಂತ ಈತ……. ಇಲ್ಲಿ ಒಬ್ಬಾಕೆಯನ್ನೇ ನಿಭಾಯಿಸುವುದು ಕಷ್ಟವಿರುವಾಗ ಈತ ಇಷ್ಟೊಂದು ಮದುವೆಯಾಗಿದ್ದು ಅದ್ಭುತವೇ ಸರಿ ಅಂತೆಲ್ಲಾ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

— Rupin Sharma (@rupin1992) June 6, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...