alex Certify 25 ಅಡಿ ಎತ್ತರದ ಗ್ರಿಲ್​ನಲ್ಲಿ ಸಿಲುಕಿದ್ದ ಪುಟ್ಟ ಬಾಲಕಿಯನ್ನು ರಕ್ಷಿಸಿದ ಸಿಐಎಸ್​ಎಫ್​ ಸಿಬ್ಬಂದಿ: ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

25 ಅಡಿ ಎತ್ತರದ ಗ್ರಿಲ್​ನಲ್ಲಿ ಸಿಲುಕಿದ್ದ ಪುಟ್ಟ ಬಾಲಕಿಯನ್ನು ರಕ್ಷಿಸಿದ ಸಿಐಎಸ್​ಎಫ್​ ಸಿಬ್ಬಂದಿ: ವಿಡಿಯೋ ವೈರಲ್​

25 ಅಡಿ ಎತ್ತರದ ಗ್ರಿಲ್​ನಲ್ಲಿ ಸಿಲುಕಿಕೊಂಡಿದ್ದ ಪುಟ್ಟ ಬಾಲಕಿಯನ್ನು ಸಿಐಎಸ್​ಎಫ್​ ಯೋಧ ರಕ್ಷಿಸಿದ ಘಟನೆ ದೆಹಲಿಯ ನಿರ್ಮಾಣ್​ ವಿಹಾರ್​ ಮೆಟ್ರೋ ನಿಲ್ದಾಣದಲ್ಲಿ ಭಾನುವಾರ ಸಂಜೆ ಸಂಭವಿಸಿದೆ.

ಭಾನುವಾರ ಸಂಜೆ ಆರು ಗಂಟೆ ಸುಮಾರಿಗೆ 25 ಅಡಿಯ ಎತ್ತರದ ಗ್ರಿಲ್​ನಲ್ಲಿ 8 ವರ್ಷದ ಬಾಲಕಿ ಸಿಲುಕಿಕೊಂಡಿದ್ದಾಳೆ ಎಂಬ ಮಾಹಿತಿಯನ್ನು ಸಿಐಎಸ್​ಎಫ್​ ಪಡೆಗೆ ನೀಡಲಾಯ್ತು. ಮೆಟ್ರೋ ನಿಲ್ದಾಣದಲ್ಲಿ ಆಟವಾಡುತ್ತಿದ್ದ ವೇಳೆಯಲ್ಲಿ ಬಾಲಕಿ ಈ ಅಪಾಯಕ್ಕೆ ಸಿಲುಕಿದ್ದಳು. ಕೂಡಲೇ ಸ್ಥಳಕ್ಕಾಗಮಿಸಿದ ಸಿಐಎಸ್​ಎಫ್​ ಯೋಧರು ಬಾಲಕಿಯ ರಕ್ಷಣೆಗೆ ಮುಂದಾಗಿದ್ದಾರೆ.

ಬಾಲಕಿ ಸಿಲುಕಿಕೊಂಡಿದ್ದ ಸ್ಥಳವನ್ನು ತಲುಪುವಲ್ಲಿ ಯಶಸ್ವಿಯಾದ ಸಿಐಎಸ್​ಎಫ್​ ಯೋಧ ಆಕೆಯನ್ನು ಸುರಕ್ಷಿತವಾಗಿ ತಾಯಿಯ ಮಡಿಲಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...