alex Certify ಕನಸಿನ ಮನೆ ಖರೀದಿಗಾಗಿ 4 ವರ್ಷಗಳಲ್ಲಿ 61 ಲಕ್ಷ ರೂ. ಕೂಡಿಟ್ಟ ಯುವತಿ…! ಇದಕ್ಕಾಗಿ ಈಕೆ ಏನೆಲ್ಲಾ ಮಾಡಿದ್ದಾಳೆ ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕನಸಿನ ಮನೆ ಖರೀದಿಗಾಗಿ 4 ವರ್ಷಗಳಲ್ಲಿ 61 ಲಕ್ಷ ರೂ. ಕೂಡಿಟ್ಟ ಯುವತಿ…! ಇದಕ್ಕಾಗಿ ಈಕೆ ಏನೆಲ್ಲಾ ಮಾಡಿದ್ದಾಳೆ ಗೊತ್ತಾ…?

ಸಿಯೋಲ್: ಈ ಯುವತಿಗೆ ಇನ್ನೂ 24ರ ಹರೆಯ. ಆದರೆ, ಮನೆ ಖರೀದಿಸುವ ಕನಸಿಗಾಗಿ ಕೇವಲ 4 ವರ್ಷಗಳ ಅವಧಿಯಲ್ಲಿ ಬರೋಬ್ಬರಿ 61 ಲಕ್ಷ ರೂ. ಉಳಿತಾಯ ಮಾಡಿದ್ದಾಳೆ. ಅಲ್ಲದೆ, ತಿಂಗಳಿಗೆ 1.25 ಲಕ್ಷ ರೂ. ಗಳಿಸುತ್ತಿದ್ದಾಳೆ.

ದ. ಕೊರಿಯಾದ ಜಿ ಹಯಾನ್ ಕ್ವಾಕ್ ಹಣ ಉಳಿತಾಯಕ್ಕೆ ಒಂದು ಉತ್ತಮ ನಿದರ್ಶನವಾಗಿದ್ದಾಳೆ. ದ. ಕೊರಿಯಾದಲ್ಲಿ ಮನೆಗಳು ತುಂಬ ದುಬಾರಿ. ಹೀಗಾಗಿ, ಹೇಗಾದರೂ ಮಾಡಿ, ಹಣವುಳಿಸಿ ಒಂದು ಮನೆ ಖರೀದಿಸಲು ಆಕೆ ನಿರ್ಧರಿಸಿದ್ದಳು. ತನ್ನ ವೇತನದ ಬಹುಪಾಲನ್ನು ಉಳಿತಾಯ ಮಾಡಲು ಆರಂಭಿಸಿದಳು. ಮನೆಗೆ ಠೇವಣಿಯ ಹಣವನ್ನು ಮೊದಲಿಗೇ ಕೊಟ್ಟುಬಿಟ್ಟಳು.

BIG NEWS: ಗಡುವು ಮುಗಿದರೂ ಮಸೀದಿಗಳ ಮೈಕ್ ತೆರವುಗೊಳಿಸದ ಸರ್ಕಾರ; ಮೇ 9ರಿಂದ ದೇವಾಲಯಗಳಲ್ಲಿ ಮಂತ್ರಘೋಷ ಆರಂಭ; ತಡೆಯಲು ಮುಂದಾದರೆ ಸಂಘರ್ಷದ ಎಚ್ಚರಿಕೆ ಕೊಟ್ಟ ಮುತಾಲಿಕ್

ಆಹಾರಕ್ಕಾಗಿ ಕೇವಲ 450 ರೂ.ಗಳನ್ನು ವ್ಯಯಿಸುತ್ತಿದ್ದಳಂತೆ. ದಿನದ ಮೂರೂ ಹೊತ್ತು ನೂಡಲ್ಸ್ ತಿಂದು ಬದುಕಲು ಸಾಧ್ಯವೇ? ಊಹಿಸುವುದೂ ಕಷ್ಟ. ಆಕೆ ಆರೋಗ್ಯಕರ ಆಹಾರವನ್ನೇ ಸೇವಿಸುತ್ತಿದ್ದಳು, ಆದರೆ, ಕಡಿಮೆ ವೆಚ್ಚದಲ್ಲಿ. ವೆಬ್‌ಸೈಟ್‌ನಲ್ಲಿ ಬರುವ ಸ್ಪರ್ಧೆಗಳು, ಕ್ವಿಜ್‌ಗಳಲ್ಲಿ ಪಾಲ್ಗೊಂಡುಹಲವು ಬಹುಮಾನಗಳು, ಆಫರ್‌ಗಳನ್ನು, ಡಿಸ್ಕೌಂಟ್ ಹಾಗೂ ಕೂಪನ್‌ಗಳನ್ನು ಗೆದ್ದು, ಆಹಾರ ಖರೀದಿಗೆ ಅವುಗಳನ್ನೇ ಬಳಸುತ್ತಿದ್ದಳು.

ಆಹಾರ ಒಂದೋ ಉಚಿತವಾಗಿ, ಇಲ್ಲವೇ ತುಂಬ ಕಡಿಮೆ ಬೆಲೆಯಲ್ಲಿ ಸಿಗುತ್ತಿತ್ತು.‌ ಜಿ ಹಯಾನ್ ಕ್ವಾಕ್ ತುಂಬ ಶ್ರಮಜೀವಿ. ಕಚೇರಿಗೆ ತೆರಳಲು ನಿತ್ಯ 2 ತಾಸು ನಡೆದೇ ಹೋಗುತ್ತಿದ್ದಳು. ಪ್ರಯಾಣ ವೆಚ್ಚವಂತೂ ಉಳಿತಾಯವಾಯಿತು. ಮನೆಯಲ್ಲೇ ಮಾಡಿದ ಚಹಾ, ನಲ್ಲಿ ನೀರನ್ನೇ ಕುಡಿಯುತ್ತಿದ್ದಳು. ನೀರನ್ನು ಖರೀದಿಸುವ ಖರ್ಚು ಹೀಗೆ ಉಳಿಯಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...