alex Certify ಶಾಕಿಂಗ್​: ಮದ್ಯಪಾನ ಸೇವಿಸಿದ್ದ 24 ಮಂದಿ ನಿಗೂಢ ಸಾವು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್​: ಮದ್ಯಪಾನ ಸೇವಿಸಿದ್ದ 24 ಮಂದಿ ನಿಗೂಢ ಸಾವು..!

ಮದ್ಯ ಸೇವನೆ ಮಾಡಿದ ಬಳಿಕ 24ಕ್ಕೂ ಅಧಿಕ ಮಂದಿ ನಿಗೂಢವಾಗಿ ಸಾವನ್ನಪ್ಪಿದ ಘಟನೆಯು ಬಿಹಾರದ ಗೋಪಾಲಗಂಜ್​ ಹಾಗೂ ಪಶ್ಚಿಮ ಚಂಪಾರಣ್​​ನಲ್ಲಿ ನಡೆದಿದೆ.24 ಮಂದಿ ಸಾವನ್ನಪ್ಪಿದ್ದು ಮಾತ್ರವಲ್ಲದೇ ಇನ್ನೂ ಅನೇಕರು ಅನಾರೋಗ್ಯಕ್ಕೀಡಾಗಿದ್ದಾರೆ.

ಗುರುವಾರ ಈ ಘಟನೆ ಸಂಭವಿಸಿದ್ದು ತೆಲ್ಹುವಾ ಗ್ರಾಮದಲ್ಲಿ ಮದ್ಯ ಸೇವನೆ ಮಾಡುತ್ತಿದ್ದಂತೆಯೇ 8 ಮಂದಿ ಸಾವನ್ನಪ್ಪಿದ್ದಾರೆ. ಇದಾದ ಬಳಿಕ ಇನ್ನೂ 16 ಮಂದಿ ಸಾವನ್ನಪ್ಪಿದ್ದರು ಸಾವಿನ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಇಲ್ಲಿಯವರೆಗೂ ಈ ಘಟನೆಗೆ ನಿಖರ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಅಂದಹಾಗೆ ಈ ರೀತಿ ಮದ್ಯ ಕುಡಿದು ಸಾವನ್ನಪ್ಪಿದ ಪೈಕಿ ಕಳೆದ 10 ದಿನಗಳಲ್ಲಿ ಉತ್ತರ ಬಿಹಾರದಲ್ಲಿ ನಡೆದ ಮೂರನೇ ಘಟನೆ ಇದಾಗಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಬಿಹಾರದ ಸಚಿವ ಜನಕ್​ ರಾಮ್​ ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ರು. ಮದ್ಯಪಾನ ಸೇವಿಸಿ ಸಾವನ್ನಪ್ಪಿದವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದೇನೆ. ಇದು ಎನ್​ಡಿಎ ಸರ್ಕಾರಕ್ಕೆ ಮಸಿ ಬಳಿಯಲು ಮಾಡಿದ ಕುತಂತ್ರವಾಗಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿದ ಗೋಪಾಲಗಂಜ್​ ಪೊಲೀಸ್​ ಅಧಿಕಾರಿ ಆನಂದ ಕುಮಾರ್, ಮುಹಾಮ್ಮದ್ಪುರ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ನಿಗೂಢ ಸಾವು ಸಂಭವಿಸುತ್ತಿದೆ. ಈ ಎಲ್ಲಾ ಸಾವಿಗೆ ನಿಖರ ಕಾರಣ ಏನು ಎಂಬುದು ತನಿಖೆಯಿಂದಷ್ಟೇ ತಿಳಿಯಬೇಕಿದೆ. ಪೊಲೀಸರು ಮೂರು ವಿಶೇಷ ತಂಡವನ್ನ ರಚಿಸಿ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...