alex Certify 22 ವರ್ಷಗಳ ಬಳಿಕ ಅಪರೂಪದ ಮೀನು ಮತ್ತೊಮ್ಮೆ ಪತ್ತೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

22 ವರ್ಷಗಳ ಬಳಿಕ ಅಪರೂಪದ ಮೀನು ಮತ್ತೊಮ್ಮೆ ಪತ್ತೆ…!

ಮೆಲ್ಬೋರ್ನ್: 22 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬಲು ಅಪರೂಪದ ವಾಕಿಂಗ್ ಹ್ಯಾಂಡ್‌ಫಿಶ್ ಆಸ್ಟ್ರೇಲಿಯಾದ ಟ್ಯಾಸ್ಮೆನಿಯನ್ ಕರಾವಳಿಯಲ್ಲಿ ಕಂಡುಬಂದಿದೆ.

ಗುಲಾಬಿ ಹ್ಯಾಂಡ್‌ಫಿಶ್ ಅನ್ನು 1999ರಲ್ಲಿ ಟ್ಯಾಸ್ಮೆನಿಯಾದಲ್ಲಿ ಈಜುಗಾರನೊಬ್ಬ ಕೊನೆಯದಾಗಿ ಗುರುತಿಸಿದ್ದ. ಈ ವರ್ಷದ ಆರಂಭದಲ್ಲಿ ಟ್ಯಾಸ್ಮನ್ ಫ್ರಾಕ್ಚರ್ ಮೆರೈನ್ ಪಾರ್ಕ್‌ನಲ್ಲಿ ತೆಗೆದ ಆಳವಾದ ಸಮುದ್ರದ ಕ್ಯಾಮೆರಾ ರೆಕಾರ್ಡಿಂಗ್‌ನಲ್ಲಿ ಅಪರೂಪದ ಮೀನುಗಳನ್ನು ಅವರು ಗುರುತಿಸಿದ್ದಾರೆ. ಹ್ಯಾಂಡ್‌ಫಿಶ್ ಅನ್ನು ಇತ್ತೀಚೆಗೆ ಅಳಿವಿನಂಚಿನಲ್ಲಿರುವ ಜೀವಿ ಎಂಬ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ.

ಈ ಜಾತಿಯ ಮೀನುಗಳು ಹೆಚ್ಚು ಗಾತ್ರದ ಕೈಗಳನ್ನು ಹೊಂದಿರುತ್ತವೆ. ಅವುಗಳ ಮೇಲೆ ಈ ಮೀನುಗಳು ಸಮುದ್ರತಳದ ಉದ್ದಕ್ಕೂ ನಡೆಯುವ ಹಾಗೂ ಈಜುವ ಸಾಮರ್ಥ್ಯವನ್ನು ಹೊಂದಿವೆ.

ಟ್ಯಾಸ್ಮೆನಿಯಾ ವಿಶ್ವವಿದ್ಯಾನಿಲಯದ ಅಂಟಾರ್ಕ್ಟಿಕ್ ಮತ್ತು ಸಾಗರ ಅಧ್ಯಯನಗಳ ಸಂಸ್ಥೆಯಿಂದ ಪ್ರೊಫೆಸರ್ ನೆವಿಲ್ಲೆ ಬ್ಯಾರೆಟ್ ಮತ್ತು ಅವರ ತಂಡವು ಹವಳ, ನಳ್ಳಿ ಮತ್ತು ಮೀನು ಪ್ರಭೇದಗಳನ್ನು ಸಮೀಕ್ಷೆ ಮಾಡಲು ಬೈಟೆಡ್ ಕ್ಯಾಮರಾವನ್ನು ಸಮುದ್ರದಾಳದಲ್ಲಿ ಇರಿಸಿದೆ. ಈ ವೇಳೆ ಪಿಂಕ್ ಹ್ಯಾಂಡ್‌ಫಿಶ್ ಪತ್ತೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...