alex Certify 2 ಸಾವಿರ ವರ್ಷಗಳಷ್ಟು ಹಳೆಯದಾಗಿರುವ ಚಿನ್ನದ ಉಂಗುರ ಹರಾಜಿಗೆ ಸಿದ್ಧ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2 ಸಾವಿರ ವರ್ಷಗಳಷ್ಟು ಹಳೆಯದಾಗಿರುವ ಚಿನ್ನದ ಉಂಗುರ ಹರಾಜಿಗೆ ಸಿದ್ಧ…!

ಲಂಡನ್​: ಕೊರಿಯೆಲ್ಟೌವಿ ಬುಡಕಟ್ಟಿನ ಮುಖ್ಯಸ್ಥನೊಬ್ಬ ಧರಿಸಿದ್ದರು ಎನ್ನಲಾದ ಸುಮಾರು ಎರಡು ಸಾವಿರ ವರ್ಷಗಳಷ್ಟು ಹಳೆಯದಾಗಿರುವ ಚಿನ್ನದ ಉಂಗುರವೊಂದು ಇದೀಗ ಹರಾಜಿಗೆ ಇಡಲಾಗಿದೆ. ಸುಮಾರು 3 ದಶಕಗಳ ಕಾಲ ಈ ಉಂಗುರವು ಸಂಗ್ರಹಕಾರರ ಬೀರುವಿನಲ್ಲಿತ್ತು. ಇಂಗ್ಲೆಂಡ್​ನಲ್ಲಿ ಮೂವತ್ತು ವರ್ಷಗಳಿಂದ ಇದ್ದ ಈ ಉಂಗುರವನ್ನು ಈಗ ಹೊರ ತೆಗೆಯಲಾಗಿದೆ.

1994ರಲ್ಲಿ ಉತ್ತರ ಯಾರ್ಕ್‌ಷೈರ್‌ನಲ್ಲಿ ಈ ಉಂಗುರ ಪತ್ತೆಯಾಗಿತ್ತು. ಮಿಡ್‌ಲ್ಯಾಂಡ್ಸ್ ಮತ್ತು ಯಾರ್ಕ್‌ಷೈರ್‌ನ ಕೆಲವು ಭಾಗಗಳನ್ನು ಆಳಿದ ಕೊರಿಯೆಲ್ಟೌವಿ ಬುಡಕಟ್ಟಿನ ಮುಖ್ಯಸ್ಥ ಇದನ್ನು ಧರಿಸಿದ್ದ ಎನ್ನಲಾಗಿದೆ. ರೋಮನ್ ಆಕ್ರಮಣಕ್ಕೂ ಮುನ್ನ ಅಂದರೆ ಕ್ರಿ.ಪೂ. 100ರಲ್ಲಿದ್ದ ಈ ಉಂಗುರವನ್ನು 90 ರ ದಶಕದಲ್ಲಿ ಕ್ನಾರೆಸ್‌ಬರೋದಲ್ಲಿ ಲೋಹದ ಶೋಧಕರಿಂದ ಮೊದಲು ಕಂಡುಹಿಡಿಯಲಾಗಿತ್ತು. ವ್ಯಕ್ತಿಯೊಬ್ಬ ಇದನ್ನು ಕೆಲವು ನೂರು ಪೌಂಡ್‌ಗಳಿಗೆ ಖರೀದಿಸಿದ್ದ. ನಂತರ ಇದು ಮೂರು ದಶಕಗಳ ಹಾಗೆಯೇ ಇಟ್ಟುಕೊಂಡಿದ್ದ ಆತ ಈಗ ಅದನ್ನು ಹರಾಜಿಗೆ ಇಡಲು ಮುಂದಾಗಿದ್ದಾನೆ.

ಮಾಲೀಕರು ಆರಂಭದಲ್ಲಿ ಉಂಗುರವನ್ನು ರೋಮನ್ ಅಥವಾ ಆಂಗ್ಲೋ-ಸ್ಯಾಕ್ಸನ್ ಎಂದು ಭಾವಿಸಿದ್ದರು. ಆದಾಗ್ಯೂ, ಬ್ರಿಟಿಷ್ ಮ್ಯೂಸಿಯಂ ತಜ್ಞರು ಇದು 2 ಸಾವಿರ ವರ್ಷಗಳಷ್ಟು ಹಳೆಯದು ಎಂದು ಹೇಳಿದಾಗ ಮಾಲೀಕ ದಿಗ್ಭ್ರಮೆಗೊಂಡಿದ್ದಾನೆ.

“ಇದು ನಿಜವಾಗಿಯೂ ಸಾಕಷ್ಟು ನಿಗೂಢ ವಿಷಯವಾಗಿದೆ. ಅದನ್ನು ಯಾರು ಹೊಂದಿದ್ದಾರೆಂದು ನಮಗೆ ಖಚಿತವಾಗಿ ತಿಳಿದಿಲ್ಲ, ಬಹುಶಃ ಪ್ರಬಲ ಸೆಲ್ಟಿಕ್ ಮುಖ್ಯಸ್ಥರದ್ದು ಇದು ಇದ್ದಿರಬಹುದು ” ಎಂದು ಉಂಗುರದ ಮಾಲೀಕ ಹೇಳಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...