alex Certify 200 ಕೋಟಿ ರೂ. ಸುಲಿಗೆ ಪ್ರಕರಣ; ತನಿಖಾ ಸಂಸ್ಥೆ ಎದುರು ಹಾಜರಾದ ನಟಿ ಜಾಕ್ವೆಲಿನ್! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

200 ಕೋಟಿ ರೂ. ಸುಲಿಗೆ ಪ್ರಕರಣ; ತನಿಖಾ ಸಂಸ್ಥೆ ಎದುರು ಹಾಜರಾದ ನಟಿ ಜಾಕ್ವೆಲಿನ್!

ಮುಂಬೈ: ನಟಿ ಜಾಕ್ವೆಲಿನ್ 200 ಕೋಟಿ ರೂ. ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಿದ್ದಾರೆ.

ಸುಕೇಶ್ ಚಂದ್ರಶೇಖರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ವಿಚಾರಣೆಗೆ ಒಳಗಾಗಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿತ್ತು.

ಸುಕೇಶ್ ಚಂದ್ರಶೇಖರ್ ಮೇಲೆ ಸೆಲೆಬ್ರಿಟಿ ಹಾಗೂ ಶ್ರೀಮಂತರನ್ನು ಹೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಆರೋಪವಿದೆ. ಅಲ್ಲದೇ, ಜೈಲಿನಲ್ಲಿದ್ದುಕೊಂಡೇ ಉದ್ಯಮಿಯೊಬ್ಬರ ಪತ್ನಿಯಿಂದ 200 ಕೋಟಿ ರೂ. ಹಣ ಸುಲಿಗೆ ಮಾಡಿದ್ದ ಆರೋಪವೂ ಇದೆ. ಆದರೆ, ಈ ವ್ಯಕ್ತಿಯೊಂದಿಗೆ ಜಾಕ್ವೆಲಿನ್ ವ್ಯವಹಾರ ಇಟ್ಟುಕೊಂಡಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಮೋಟಾರ್​ ಸೈಕಲ್​ ಏರಿ ಹುಚ್ಚಾಟ ಮೆರೆದವನಿಗೆ ಬಿತ್ತು ಭಾರೀ ದಂಡ….!

ಅಲ್ಲದೇ, ನಟಿಗೆ 10 ಕೋಟಿಗೂ ಅಧಿಕ ಮೌಲ್ಯದ ಉಡುಗೊರೆಗಳನ್ನು ಸುಕೇಶ್ ನೀಡಿದ್ದ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ತನಿಖಾ ಸಂಸ್ಥೆ ದೆಹಲಿ ನ್ಯಾಯಾಲಯಕ್ಕೆ ಸುಕೇಶ್ ಸೇರಿದಂತೆ ಹಲವರ ಮೇಲೆ ಜಾರ್ಜ್ ಶೀಟ್ ಸಲ್ಲಿಸಿದೆ.

ಇತ್ತೀಚೆಗಷ್ಟೇ ದುಬೈಗೆ ಹಾರಲು ಸಜ್ಜಾಗಿದ್ದ ನಟಿ ಜಾಕ್ವೆಲಿನ್ ಅವರನ್ನು ವಿಮಾನ ನಿಲ್ದಾಣದಲ್ಲಿಯೇ ಅಧಿಕಾರಿಗಳು ತಡೆದು ವಿಚಾರಣೆಗೊಳಪಡಿಸಿ ಬಿಟ್ಟಿದ್ದರು. ಅಲ್ಲದೇ, ಮತ್ತೆ ವಿಚಾರಣೆಗೆ ಹಾಜರಾಗುವಂತೆ ದೆಹಲಿ ಪೊಲೀಸರು ತಿಳಿಸಿದ್ದರು. ಅದೇ ರೀತಿ ಇಂದು ಅವರು ವಿಚಾರಣೆಗೆ ಹಾಜರಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...