alex Certify ದಿನದ ಮಟ್ಟಿಗೆ ಬ್ರಿಟಿಷ್ ಹೈ-ಕಮಿಷನರ್‌ ಆದ 20ರ ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಿನದ ಮಟ್ಟಿಗೆ ಬ್ರಿಟಿಷ್ ಹೈ-ಕಮಿಷನರ್‌ ಆದ 20ರ ಯುವತಿ

ರಾಜಸ್ಥಾನದ 20 ವರ್ಷ ವಯಸ್ಸಿನ ಅದಿತಿ ಮಹೇಶ್ವರಿ ಒಂದು ದಿನದ ಮಟ್ಟಿಗೆ ಭಾರತಕ್ಕೆ ಬ್ರಿಟನ್‌ನ ಹೈ ಕಮಿಷನರ್‌ ಆಗಿದ್ದಾರೆ.

ದೆಹಲಿಯ ಮಿರಾಂಡಾ ಹೌಸ್ ಕಾಲೇಜಿನಲ್ಲಿ ದೈಹಿಕ ವಿಜ್ಞಾನದಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಅದಿತಿ, ’ಹೈ ಕಮಿಷನರ್‌ ಆಫ್ ದಿ ಡೇ’ ಸ್ಪರ್ಧೆಯಲ್ಲಿ ಗೆದ್ದ ಪರಿಣಾಮ ಈ ಅವಕಾಶ ಆಕೆಗೆ ಒಲಿದು ಬಂದಿದೆ.

ನಿಮ್ಮ ಕಣ್ಣಂಚನ್ನು ತೇವಗೊಳಿಸುತ್ತೆ 11 ವರ್ಷಗಳ ಬಳಿಕ ಭೇಟಿಯಾದ ತಂದೆ – ಮಗನ ವಿಡಿಯೋ

2017ರಿಂದಲೂ ಅಕ್ಟೋಬರ್‌ 11ರಂದು ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆಯಂದು ಪ್ರತಿ ವರ್ಷ ಈ ಸ್ಫರ್ಧೆಯನ್ನು ಬ್ರಿಟಿಷ್ ರಾಯಭಾರ ಕಚೇರಿ ಹಮ್ಮಿಕೊಂಡು ಬರುತ್ತಿದೆ.

ಭಾರತೀಯ ಆಡಳಿತ ಸೇವೆಗಳ ಆಕಾಂಕ್ಷಿಯಾದ ಅದಿತಿ, ರಾಯಭಾರ ಕಚೇರಿಯಿಂದ ಈ ಹುದ್ದೆಗೆ ಆಯ್ಕೆಯಾದ ಐದನೇ ಭಾರತೀಯರಾಗಿದ್ದಾರೆ.

ರಾಜ್ಯದಲ್ಲಿ ಇಂದಿನಿಂದ ಆನ್ ಲೈನ್ ಗ್ಯಾಂಬ್ಲಿಂಗ್ ನಿಷೇಧ

ಭಾರತಕ್ಕೆ ಬ್ರಿಟನ್‌ನ ಅಗ್ರ ರಾಯಭಾರಿಯಾಗಿ ಕೆಲಸ ಮಾಡಿದ ಒಂದು ದಿನದಲ್ಲಿ ಬಹಳಷ್ಟು ದೊಡ್ಡ ವಿಷಯಗಳನ್ನು ಹತ್ತಿರದಿಂದ ಗಮನಿಸಿದ ಅದಿತಿ, ಅಭಿವೃದ್ಧಿ ಸಂಬಂಧ ಭಾರತ-ಬ್ರಿಟನ್‌ ಎನರ್ಜಿ ಒಪ್ಪಂದದ ಕುರಿತು ಸಚಿವರಾದ ರಾಜ್ ಕುಮಾರ್‌ ಸಿಂಗ್ ಹಾಗೂ ಕ್ವಾಸಿ ಕ್ವಾರ್ಟೆಂಗ್ ಜೊತೆಗೆ ಹತ್ತಿರದಿಂದ ಸಮಾಲೋಚನೆಗಳನ್ನು ಗಮನಿಸಿದ್ದಾರೆ.

ಇದೇ ವೇಳೆ, ಗ್ಲಾಸ್ಗೌನಲ್ಲಿ ಮುಂದಿನ ತಿಂಗಳು ಆಯೋಜಿಸಲಾದ ಸಿಓಪಿ26 ಹವಾಮಾನ ಬದಲಾವಣೆಯ ವೇಳೆ ಜಾಗತಿಕ ನಾಯಕರು ಬಳಸಲಿರುವ ಐ-ಪೇಸ್-ಜಾಗ್ವಾರ್‌‌ನ ಶೂನ್ಯ ಮಾಲಿನ್ಯಕಾರಕ ಹೊರಸೂಸುವಿಕೆಯ ವಿದ್ಯುತ್‌ ಚಾಲಿತ ಎಸ್‌ಯುವಿಯ ಡೆಮೋವನ್ನೂ ಸಹ ಅದಿತಿ ಇದೇ ವೇಳೆ ಕಂಡುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...