alex Certify ತೂಕದಲ್ಲಿ ಗಣನೀಯ ಇಳಿಕೆ; 7,000 ಕಿ.ಮೀ. ಕ್ರಮಿಸಿ ಗುರಿಯನ್ನು ಹೊಡೆದುರುಳಿಸುತ್ತೆ Agni-V | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೂಕದಲ್ಲಿ ಗಣನೀಯ ಇಳಿಕೆ; 7,000 ಕಿ.ಮೀ. ಕ್ರಮಿಸಿ ಗುರಿಯನ್ನು ಹೊಡೆದುರುಳಿಸುತ್ತೆ Agni-V

ಕಳೆದ ವರ್ಷದ ಅಕ್ಟೋಬರ್ ನಲ್ಲಿ ಒಡಿಸ್ಸಾದ ಎಪಿಜೆ ಅಬ್ದುಲ್ ಕಲಾಂ ದ್ವೀಪದಲ್ಲಿ ಪರೀಕ್ಷೆ ನಡೆಸಲಾದ Agin-V ಕ್ಷಿಪಣಿಯಲ್ಲಿ ಮತ್ತಷ್ಟು ಬದಲಾವಣೆಗಳನ್ನು ಮಾಡಲಾಗಿದ್ದು, ತೂಕದಲ್ಲಿ ಶೇಕಡ 20ರಷ್ಟು ಇಳಿಕೆ ಮಾಡಲಾಗಿದೆ. ಹೀಗಾಗಿ ಇದು ಈಗ ಏಳು ಸಾವಿರ ಕಿಲೋಮೀಟರ್ ಕ್ರಮಿಸಿ, ಗುರಿಯನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.

ಕ್ಷಿಪಣಿಯಲ್ಲಿ ಬಳಸಲಾದ ಸ್ಟೀಲ್ ಬದಲಿಗೆ ಈಗ ಪರ್ಯಾಯ ಲೋಹವನ್ನು ಬಳಕೆ ಮಾಡಲಾಗಿದ್ದು, ಹೀಗಾಗಿ ಕ್ಷಿಪಣಿಯ ತೂಕ ಕಡಿಮೆಯಾಗಿದೆ. ಈ ಮೊದಲು ಇದು 5000 ಕಿ.ಮೀ. ಕ್ರಮಿಸುವ ಸಾಮರ್ಥ್ಯ ಹೊಂದಿದ್ದು, ಈಗ ತೂಕ ಇಳಿಕೆಯಾಗಿರುವ ಕಾರಣ ಏಳು ಸಾವಿರ ಕಿಲೋಮೀಟರ್ ಕ್ರಮಿಸುತ್ತದೆ ಎಂದು ಹೇಳಲಾಗಿದೆ.

ಭಾರತ ಈಗಾಗಲೇ ಅಗ್ನಿ ಸರಣಿಯ ಹಲವು ಕ್ಷಿಪಣಿಗಳನ್ನು ಹೊಂದಿದ್ದು, ಭಾರತದ ರಕ್ಷಣಾ ಸಾಮರ್ಥ್ಯ ಚೀನಾ ಹಾಗೂ ಪಾಕಿಸ್ತಾನವನ್ನು ಮೀರಿಸುವತ್ತ ಹೆಜ್ಜೆ ಇಟ್ಟಿದೆ. 40 ಟನ್ ತೂಕ ಹೊಂದಿರುವ Agni-III 3000 ಕಿಲೋಮೀಟರ್ ಕ್ರಮಿಸುವ ಸಾಮರ್ಥ್ಯ ಹೊಂದಿದ್ದರೆ, 20 ಟನ್ ಗಿಂತ ಕೊಂಚ ಜಾಸ್ತಿ ತೂಕ ಹೊಂದಿರುವ Agni-IV 3,000 ಕಿ.ಮೀ. ಕ್ಕಿಂತ ಅಧಿಕ ದೂರವನ್ನು ಕ್ರಮಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...