alex Certify Viral Video: ʼಚುರಾಕೆ ದಿಲ್​ ಮೇರಾʼ ಹಾಡಿಗೆ ಎರಡು ವರ್ಷದ ಪುಟಾಣಿಯಿಂದ ನಾರ್ವೇಯನ್​ ಸ್ಟೈಲ್​ ನೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video: ʼಚುರಾಕೆ ದಿಲ್​ ಮೇರಾʼ ಹಾಡಿಗೆ ಎರಡು ವರ್ಷದ ಪುಟಾಣಿಯಿಂದ ನಾರ್ವೇಯನ್​ ಸ್ಟೈಲ್​ ನೃತ್ಯ

ನಾರ್ವೇಯನ್ ನೃತ್ಯ ತಂಡ, ಕ್ವಿಕ್ ಸ್ಟೈಲ್ ಬಗ್ಗೆ ಹೆಚ್ಚಿನವರು ಕೇಳಿರಬಹುದು. ವಿವಿಧ ರೀತಿಯ ಹಾಡುಗಳಿಗೆ ತಮ್ಮದೇ ಆದ ಕೋರಿಯೋಗ್ರಫಿ ಮಾಡುವ ಈ ತಂಡ ಜಗತ್ಪ್ರಸಿದ್ಧಿಯನ್ನು ಹೊಂದಿದೆ. ಕೆಲವೊಮ್ಮೆ ಹುಚ್ಚುಚ್ಚಾಗಿ ನರ್ತಿಸಿದರೂ ಅದು ವೈರಲ್​ ಆಗಿ ಜನರು ಅದನ್ನೇ ಫಾಲೋ ಮಾಡುತ್ತಾರೆ.

ಈ ತಂಡ ಇದೀಗ ಚುರಾ ಕೆ ದಿಲ್​ ಮೇರಾ ಹಾಡಿಗೆ ಸ್ಟೆಪ್​ ಹಾಕಿದ್ದು ಅದು ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ಹೆಜ್ಜೆಗಳನ್ನು ನೋಡಿ ಜನರು ತಾವೂ ಅದೇ ರೀತಿ ಮಾಡುತ್ತಿದ್ದಾರೆ. ಆದರೆ ಎರಡು ವರ್ಷದ ಪುಟ್ಟ ಬಾಲಕ ಥೇಟ್​ ಈ ತಂಡವನ್ನೇ ಅನುಸರಿಸಿ ಈ ಹಾಡಿಗೆ ಅವರು ಮಾಡಿದಂತೆಯೇ ನರ್ತಿಸಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದ್ದಾನೆ.

ಅಸ್ಮಾ ಖವಾರ್ ಖವಾಜಾ ಎಂಬುವವರು ಈ ಬಾಲಕನ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಟಿ.ವಿ ಎದುರು ನಿಂತಿರುವ ಬಾಲಕ, ಅವರ ನೃತ್ಯವನ್ನು ನೋಡದೇ ಅವರು ಮಾಡುವ ಸ್ಟೈಲ್​ನಲ್ಲಿಯೇ ಡಾನ್ಸ್​ ಮಾಡಿದ್ದಾನೆ.

ಮೊದಲಿಗೆ ಟಿ.ವಿಗೆ ಬೆನ್ನು ಮಾಡಿ ನಿಂತು ಟಿ.ವಿಯಲ್ಲಿ ಈ ತಂಡ ಮಾಡುವ ರೀತಿಯಲ್ಲಿಯೇ ಹೆಜ್ಜೆ ಹಾಕಿ ಅಚ್ಚರಿ ಮೂಡಿಸುತ್ತಿರುವ ಈ ಪುಟ್ಟ ಬಾಲಕನಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...