alex Certify 2 ವರ್ಷಗಳ ಬಳಿಕ ಮೈಸೂರಿನಲ್ಲಿ ಮತ್ತೆ ದಸರಾ ಸಂಭ್ರಮ; ನಾಳೆ ‘ಜಂಬೂ ಸವಾರಿ’ ವೈಭವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2 ವರ್ಷಗಳ ಬಳಿಕ ಮೈಸೂರಿನಲ್ಲಿ ಮತ್ತೆ ದಸರಾ ಸಂಭ್ರಮ; ನಾಳೆ ‘ಜಂಬೂ ಸವಾರಿ’ ವೈಭವ

ನಾಡಿನಾದ್ಯಂತ ನಾಡಹಬ್ಬ ದಸರಾ ಸಂಭ್ರಮ ಮನೆಮಾಡಿದ್ದು, ಕೊರೊನಾ ಕಾರಣಕ್ಕಾಗಿ ಕಳೆದ ಎರಡು ವರ್ಷಗಳಿಂದ ಕಳೆಗುಂದಿದ್ದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಎಂದಿನ ವೈಭವವನ್ನು ಮತ್ತೆ ಮರಳಿ ಪಡೆದಿದ್ದು, ಎಲ್ಲೆಲ್ಲೂ ಸಡಗರ ಕಂಡು ಬರುತ್ತಿದೆ. ವಿಶ್ವ ವಿಖ್ಯಾತ ಮೈಸೂರು ದಸರಾ ವೀಕ್ಷಣೆಗೆ ದೇಶ ವಿದೇಶಗಳಿಂದಲೂ ಜನ ಆಗಮಿಸಿದ್ದಾರೆ.‌

ಇಂದು ನಾಡಿನಲ್ಲೆಡೆ ಆಯುಧ ಪೂಜೆ ನಡೆಯುತ್ತಿದ್ದು, ವಿಜಯದಶಮಿ ಅಂಗವಾಗಿ ನಾಳೆ ಮೈಸೂರಿನಲ್ಲಿ ವೈಭವದ ಜಂಬು ಸವಾರಿ ಆರಂಭವಾಗಲಿದೆ. ಬುಧವಾರ ಮಧ್ಯಾಹ್ನ 2: 36 ರಿಂದ 2:50 ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದ ಬಳಿ ನಂದಿದ್ವಜ ಪೂಜೆ ನಡೆಯಲಿದ್ದು, ಬಳಿಕ ವಿಜಯದಶಮಿ ಮೆರವಣಿಗೆ ಆರಂಭವಾಗಲಿದೆ.

ದೇವಿ ಚಾಮುಂಡೇಶ್ವರಿಯನ್ನು ಅಂಬಾರಿಯಲ್ಲಿ ಪ್ರತಿಷ್ಠಾಪನೆ ಮಾಡಿದ ಬಳಿಕ ಉತ್ಸವ ಮೂರ್ತಿಗೆ ಸಂಜೆ 5:07 ರಿಂದ 5:18ರ ವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುಷ್ಪಾರ್ಚನೆ ಮಾಡಲಿದ್ದಾರೆ. ಜಂಬೂಸವಾರಿಯಲ್ಲಿ 9 ರಿಂದ 10 ಆನೆಗಳು ಪಾಲ್ಗೊಳ್ಳಲಿದ್ದು, 50ಕ್ಕೂ ಹೆಚ್ಚು ಕಲಾತಂಡಗಳು ಇದಕ್ಕೆ ಮತ್ತಷ್ಟು ಮೆರಗು ನೀಡಲಿವೆ.

ಅಂಬಾರಿಯನ್ನು ಆನೆ ಅಭಿಮನ್ಯು ಹೊರಲಿದ್ದು, ಚೈತ್ರ ಹಾಗೂ ಕಾವೇರಿ ಕುಮ್ಕಿ ಆನೆಗಳಾಗಲಿವೆ. ಅರ್ಜುನ ನಿಶಾನೆಯಾದರೆ, ನೌಪತ್ ಆನೆಯಾಗಿ ಮಹೇಂದ್ರ, ಸಾಲಾನೆಯಾಗಿ ಭೀಮ, ಗೋಪಾಲಸ್ವಾಮಿ, ಧನಂಜಯ್ ಹಾಗೂ ಗೋಪಿ ಹೆಜ್ಜೆ ಹಾಕಲಿದ್ದು ಕೊನೆಗಳಿಗೆಯಲ್ಲಿ ವಿಜಯ ಕೂಡ ತಂಡ ಸೇರಬಹುದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...