alex Certify 2 ನಿಮಿಷಗಳಲ್ಲಿ ಸಿದ್ಧವಾಗುವ ಮ್ಯಾಗಿ ನೂಡಲ್ಸ್‌ ಜೀರ್ಣವಾಗಲು ಎಷ್ಟು ಸಮಯ ಬೇಕು ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2 ನಿಮಿಷಗಳಲ್ಲಿ ಸಿದ್ಧವಾಗುವ ಮ್ಯಾಗಿ ನೂಡಲ್ಸ್‌ ಜೀರ್ಣವಾಗಲು ಎಷ್ಟು ಸಮಯ ಬೇಕು ಗೊತ್ತಾ…..?

ಪ್ರಪಂಚದಾದ್ಯಂತ ಫಾಸ್ಟ್ ಫುಡ್ ಪ್ರಿಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ತ್ವರಿತವಾಗಿ ಬೇಯಿಸಬಹುದಾದ ಆಹಾರವನ್ನು ಫಾಸ್ಟ್‌ ಫುಡ್‌ ಎಂದು ಕರೆಯಲಾಗುತ್ತದೆ. ಮಕ್ಕಳಿಗಂತೂ ಫಾಸ್ಟ್‌ ಫುಡ್‌ ಫೇವರಿಟ್‌. ಕೇವಲ ಎರಡೇ ನಿಮಿಷಗಳಲ್ಲಿ ಸಿದ್ಧವಾಗುವ ನೂಡಲ್ಸ್‌ಗಳನ್ನು ನೀವು ಕೂಡ ಜಾಹೀರಾತಿನಲ್ಲಿ ನೋಡಿರಬಹುದು. ಆದರೆ 2 ನಿಮಿಷಗಳಲ್ಲಿ ಬೇಯಿಸಿದ ಇನ್‌ಸ್ಟಂಟ್‌ ನೂಡಲ್ಸ್‌ ಜೀರ್ಣಿಸಿಕೊಳ್ಳಲು ಎಷ್ಟು ಸಮಯ ಬೇಕು ಅನ್ನೋದನ್ನು ಎಂದಾದರೂ ಯೋಚಿಸಿದ್ದೀರಾ? ಮಕ್ಕಳಾದಿಯಾಗಿ ಎಲ್ಲರೂ ಇಷ್ಟಪಡುವ ಮ್ಯಾಗಿ ಕೂಡ ಇನ್‌ಸ್ಟಂಟ್‌ ಆಹಾರ.

ಮ್ಯಾಗಿ ಅಥವಾ ಇನ್‌ಸ್ಟಂಟ್‌ ನೂಡಲ್ಸ್ ತಿನ್ನುವುದರಿಂದ ಸಾಕಷ್ಟು ಅನಾನುಕೂಲಗಳಾಗುತ್ತವೆ. ನೂಡಲ್ಸ್ ನಮ್ಮ ಹಸಿವು ಮತ್ತು ಕ್ರೇವಿಂಗ್‌ ಅನ್ನು ತಣಿಸುತ್ತದೆ. ಆದರೆ ನಮ್ಮ ದೇಹಕ್ಕೆ ಸಾಕಷ್ಟು ಹಾನಿ ಮಾಡುತ್ತದೆ. ಒಂದು ಮ್ಯಾಗಿ ಪ್ಯಾಕೆಟ್ ಸುಮಾರು 385 ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದರಿಂದಾಗಿ ದೇಹದ ಕೊಬ್ಬು ವೇಗವಾಗಿ ಹೆಚ್ಚಾಗುತ್ತದೆ. ಸೇವನೆ ಮಾಡಿರುವ 350ಕ್ಕೂ ಹೆಚ್ಚು ಕ್ಯಾಲೊರಿಗಳನ್ನು ಬರ್ನ್ ಮಾಡಲು, ನೀವು ಸುಮಾರು ಅರ್ಧ ಘಂಟೆಯವರೆಗೆ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ.

ಕ್ಯಾಲೋರಿಗಳ ಹೊರತಾಗಿ ಇದು ಶೇ.14.6ರಷ್ಟು ಕೊಬ್ಬು ಮತ್ತು ಶೇ.3.4ರಷ್ಟು ಸಕ್ಕರೆಯನ್ನು ಹೊಂದಿರುತ್ತದೆ. ಇದನ್ನು ಮೈದಾ  ಹಿಟ್ಟಿನಿಂದ ತಯಾರಿಸಲಾಗುತ್ತದೆ. ಹಾಗಾಗಿ ಇದನ್ನು ಜೀರ್ಣಿಸಿಕೊಳ್ಳಲು ಸುಲಭವಲ್ಲ. ಮ್ಯಾಗಿ ಅಥವಾ ನೂಡಲ್ಸ್ ಕರುಳಿನಲ್ಲಿ ಸಿಲುಕಿಕೊಳ್ಳುತ್ತದೆ ಮತ್ತು ಇದು ಯಕೃತ್ತು ಮತ್ತು ಮೂತ್ರಪಿಂಡವನ್ನು ಹೆಚ್ಚು ಹಾನಿಗೊಳಿಸುತ್ತದೆ. ಪ್ರತಿದಿನ ನೂಡಲ್ಸ್ ತಿಂದರೆ ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ.

ಹೆಚ್ಚು ಮ್ಯಾಗಿ ಸೇವನೆಯಿಂದ ಕೀಲು ನೋವು, ಜ್ಞಾಪಕಶಕ್ತಿ ಸಮಸ್ಯೆಗಳು ಮತ್ತು ಐಕ್ಯೂ ಮಟ್ಟ ಕುಸಿಯುವ ಎಲ್ಲಾ ಸಾಧ್ಯತೆಗಳಿವೆ. ಇನ್‌ಸ್ಟಂಟ್‌ ನೂಡಲ್ಸ್‌ನಲ್ಲಿ ಸೀಸ ಅಥವಾ ಗಾಜಿನ ಅಂಶವಿದೆ ಅನ್ನೋದು ಅನೇಕ ಸಂಶೋಧನೆಗಳಲ್ಲಿ ಬಹಿರಂಗವಾಗಿದೆ. ಸೀಸವು ನಿಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಅಸ್ವಸ್ಥಗೊಳಿಸುತ್ತದೆ. ಇದರ ಬಳಕೆಯಿಂದ ನರಗಳಲ್ಲಿ ಅಸ್ವಸ್ಥತೆ ಕಾಣಿಸಿಕೊಳ್ಳಬಹುದು. ಹಾಗಾಗಿ ಮ್ಯಾಗಿ ಅಥವಾ ಇನ್‌ಸ್ಟಂಟ್‌ ನೂಡಲ್ಸ್‌ಗಳನ್ನು ಸೇವಿಸದೇ ಇರುವುದು ಒಳಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...