alex Certify ಮೃತ ವೃದ್ಧೆಯನ್ನೂ ಬಿಡದ ಕಾಮುಕ: ಕೊಲೆಗೈದು ಅತ್ಯಾಚಾರವೆಸಗಿದ 19 ವರ್ಷದ ಪಾಪಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೃತ ವೃದ್ಧೆಯನ್ನೂ ಬಿಡದ ಕಾಮುಕ: ಕೊಲೆಗೈದು ಅತ್ಯಾಚಾರವೆಸಗಿದ 19 ವರ್ಷದ ಪಾಪಿ…..!

60 ವರ್ಷದ ವೃದ್ಧೆಯನ್ನು ಕೊಲೆ ಮಾಡಿ ಬಳಿಕ ಮೃತ ದೇಹದ ಮೇಲೆ 19 ವರ್ಷದ ಯುವಕ ಅತ್ಯಾಚಾರಗೈದ ಅಮಾನವೀಯ ಘಟನೆ ರಾಜಸ್ಥಾನದ ಹನುಮಾನ್​ಗರ್​ ಜಿಲ್ಲೆಯಲ್ಲಿ ನಡೆದಿದೆ.

ರಾಜಸ್ಥಾನ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಪಿಲಿಬಂಗ ಪೊಲೀಸ್​ ಠಾಣೆಯ ವ್ಯಾಪ್ತಿಯ ದುಲ್ಮಾನಾ ಗ್ರಾಮದಲ್ಲಿ ಮಂಗಳವಾರ ರಾತ್ರಿ 19 ವರ್ಷದ ಯುವಕ 60 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದನು. ಇದಕ್ಕೆ ವೃದ್ಧೆ ವಿರೋಧ ವ್ಯಕ್ತಪಡಿಸುತ್ತಿದ್ದಂತೆಯೇ ವಿಧವೆಯಾಗಿದ್ದ ವೃದ್ಧೆಯನ್ನು ಕೊಂದು ಬಳಿಕ ಮೃತದೇಹದ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.

19 ವರ್ಷದ ಆರೋಪಿಯನ್ನು ಸುರೇಂದರ್​ ಅಲಿಯಾಸ್​ ಮಾಂಡಿಯಾ ಎಂದು ಗುರುತಿಸಲಾಗಿದೆ. ಆರೋಪಿಯ ವಿರುದ್ಧ ಕೊಲೆ ಮತ್ತು ನೆಕ್ರೋಫಿಲಿಯಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಆರೋಪಿ ಸುರೇಂದರ್​ ವಿರುದ್ಧ ವಿವಿಧ ಐಪಿಸಿ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಆತನನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಪಿಲಿಬಂಗ ಠಾಣೆಯ ಹಿರಿಯ ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...