alex Certify 17 ವರ್ಷದ ಹುಡುಗ ಮಾಡಿದ ಕೆಲಸಕ್ಕೆ ನೀವೂ ಹೇಳ್ತೀರಿ ಹ್ಯಾಟ್ಸಾಫ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

17 ವರ್ಷದ ಹುಡುಗ ಮಾಡಿದ ಕೆಲಸಕ್ಕೆ ನೀವೂ ಹೇಳ್ತೀರಿ ಹ್ಯಾಟ್ಸಾಫ್

ಐಆರ್‌ಸಿಟಿಸಿಯ ಆನ್ಲೈನ್ ಟಿಕೆಟಿಂಗ್ ವ್ಯವಸ್ಥೆಯಲ್ಲಿದ್ದ ಲೋಪವೊಂದನ್ನು ಪತ್ತೆ ಮಾಡಿದ ಚೆನ್ನೈನ 17 ವರ್ಷದ ಬಾಲಕನೊಬ್ಬ ಅದನ್ನು ಸರಿಪಡಿಸಲು ನೆರವಾಗಿದ್ದಾನೆ.

ಈ ಲೋಪದಿಂದಾಗಿ ಲಕ್ಷಾಂತರ ಪ್ರಯಾಣಿಕರ ವೈಯಕ್ತಿಕ ಮಾಹಿತಿಗಳು ಬಹಿರಂಗವಾಗುವ ಸಾಧ್ಯತೆ ಇತ್ತು. ಆದರೆ ನಗರದ ತಾಂಬರಮ್‌ನ ಪಿ. ರಂಗನಾಥನ್ ಹೆಸರಿನ ಈ ಹುಡುಗ ಕೊಟ್ಟ ಅಲರ್ಟ್‌ನಿಂದ ಎಚ್ಚೆತ್ತ ಐಆರ್‌ಸಿಟಿಸಿ ದೋಷವನ್ನು ಸರಿಪಡಿಸಿಕೊಂಡಿದೆ.

ಟಿಕೆಟ್ ಬುಕ್ ಮಾಡಲು ಐಆರ್‌ಸಿಟಿಸಿ ಪೋರ್ಟಲ್‌ಗೆ ಲಾಗಿನ್ ಆಗಿದ್ದ ರಂಗನಾಥನ್ ಈ ವೇಳೆ ಅನ್ಯ ಪ್ರಯಾಣಿಕರ ವೈಯಕ್ತಿಕ ಮಾಹಿತಿಗಳು ಗೋಚರಿಸುತ್ತಿರುವುದನ್ನು ಕಂಡಿದ್ದಾನೆ. ಜಾಲತಾಣದ ತಾಂತ್ರಿಕ ದೋಷವೊಂದರ ಮೂಲಕ ಇತರ ಪ್ರಯಾಣಿಕರ ಹೆಸರು, ವಯಸ್ಸು, ವಿಳಾಸ, ಪಿಎನ್‌ಆರ್‌ ಸಂಖ್ಯೆ, ರೈಲಿನ ವಿವರಗಳು, ಹತ್ತುವ/ಇಳಿಯುವ ನಿಲ್ದಾಣಗಳು ಸೇರಿದಂತೆ ಅನೇಕ ಮಹತ್ವದ ಮಾಹಿತಿಗಳು ಗೋಚರಿಸಿವೆ.

ಕಡುಬಡತನದಲ್ಲೂ ಹೃದಯ ಸಿರಿವಂತಿಕೆ ಮೆರೆದ ಯುವಕ

ಒಂದೇ ಬ್ಯಾಕ್ ಎಂಡ್ ಕೊಡ್ ಮೂಲಕ ಹ್ಯಾಕರ್‌ಗಳು ಪ್ರಯಾಣಿಕರ ಟಿಕೆಟ್ ವಿವರಗಳನ್ನು ತಮ್ಮಿಚ್ಛೆಯಂತೆ ಬದಲಿಸುವ ಸಾಧ್ಯತೆ ಇದ್ದು, ಖುದ್ದು ಪ್ರಯಾಣಿಕರಿಗೇ ಗೊತ್ತಾಗದಂತೆ ಅವರ ಟಿಕೆಟ್‌ಗಳನ್ನು ರದ್ದು ಮಾಡುವುದು, ಹತ್ತುವ/ಇಳಿಯುವ ನಿಲ್ದಾಣಗಳ ಬದಲಾವಣೆ, ಹೆಸರು ಬದಲಾವಣೆಯಂಥ ಕೆಲಸಗಳನ್ನು ಮಾಡುವ ಸಾಧ್ಯತೆಗಳನ್ನು ಹ್ಯಾಕರ್‌ಗಳಿಗೆ ಈ ದೋಷ ಸೃಷ್ಟಿಸಿಕೊಟ್ಟಿತ್ತು.

ಈ ವಿಚಾರವನ್ನು ಗಣಕೀಕೃತ ತುರ್ತು ಪ್ರತಿಕ್ರಿಯಾ ತಂಡದ ಗಮನಕ್ಕೆ ತಂದ ರಂಗನಾಥನ್, ಐಆರ್‌ಸಿಟಿಸಿಯ ಐಟಿ ವಿಭಾಗಕ್ಕೆ ವಿಚಾರ ಮುಟ್ಟಿಸಿ ನಾಲ್ಕು ದಿನಗಳಲ್ಲಿ ಸಮಸ್ಯೆ ಬಗೆಹರಿಯುವಂತೆ ಮಾಡಿದ್ದಾನೆ.

ಇದಕ್ಕೂ ಮುನ್ನ ಲಿಂಕ್ಡಿನ್, ವಿಶ್ವ ಸಂಸ್ಥೆ, ನೈಕಿ ಸೇರಿದಂತೆ ಅನೇಕ ಪ್ರತಿಷ್ಠಿತ ಸಂಸ್ಥೆಗಳ ಪೋರ್ಟಲ್‌ಗಳಲ್ಲಿರುವ ತಾಂತ್ರಿಕ ಲೋಪಗಳನ್ನು ಕಂಡುಕೊಟ್ಟಿದ್ದ ರಂಗನಾಥನ್ ಜಾಲತಾಣ ಅಪ್ಲಿಕೇಶನ್‌ಗಳ ಭದ್ರತೆ ಕುರಿತಂತೆ ಸ್ವತಂತ್ರ ಸಂಶೋಧನೆ ನಡೆಸುತ್ತಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...