alex Certify BIG NEWS:‌ 6 ತಿಂಗಳಲ್ಲಿ ಕೆಲಸ ಕಳೆದುಕೊಂಡಿದ್ದಾರೆ 17 ಸಾವಿರ ಮಂದಿ; ಸ್ಟಾರ್ಟ್‌ಅಪ್ ಗಳಲ್ಲಿ ಇನ್ನೂ ನಿಲ್ಲದ ವಜಾ ಪ್ರಕ್ರಿಯೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS:‌ 6 ತಿಂಗಳಲ್ಲಿ ಕೆಲಸ ಕಳೆದುಕೊಂಡಿದ್ದಾರೆ 17 ಸಾವಿರ ಮಂದಿ; ಸ್ಟಾರ್ಟ್‌ಅಪ್ ಗಳಲ್ಲಿ ಇನ್ನೂ ನಿಲ್ಲದ ವಜಾ ಪ್ರಕ್ರಿಯೆ….!

ಕಳೆದ ಒಂದು ವರ್ಷದಿಂದಲೂ ಸ್ಟಾರ್ಟಪ್ ಜಗತ್ತಿನಲ್ಲಿ ಅಲ್ಲೋಲಕಲ್ಲೋಲವಾಗುತ್ತಲೇ ಇದೆ. ಇದರಿಂದಾಗಿ ಪ್ರಪಂಚದಾದ್ಯಂತ ಲಕ್ಷಾಂತರ ಜನರು ಕೆಲಸ ಕಳೆದುಕೊಂಡಿದ್ದಾರೆ. ಬಹಳ ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ. 2023ರಲ್ಲಿ ಕೂಡ ಈ ಸ್ಥಿತಿ ಬದಲಾಗಿಲ್ಲ. CIEL HR ಒದಗಿಸಿರುವ ಅಂಕಿ ಅಂಶಗಳ ಪ್ರಕಾರ ಈ ವರ್ಷದ ಮೊದಲ ಆರು ತಿಂಗಳ ಅವಧಿಯಲ್ಲಿ ಸಾವಿರಾರು ಜನರು ಸ್ಟಾರ್ಟ್‌ಅಪ್‌ಗಳಲ್ಲಿ ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ.

ಜನವರಿಯಿಂದ ಜೂನ್ 2023 ರವರೆಗೆ, 70 ಕ್ಕೂ ಹೆಚ್ಚು ಸ್ಟಾರ್ಟಪ್‌ಗಳು ತಮ್ಮ ಉದ್ಯೋಗಿಗಳನ್ನು ಕಡಿತ ಮಾಡಿವೆ. 17 ಸಾವಿರಕ್ಕೂ ಹೆಚ್ಚು ಜನರು ಇದರಿಂದ ಪ್ರಭಾವಿತರಾಗಿದ್ದಾರೆ. ಕೆಲಸ ಕಳೆದುಕೊಂಡಿದ್ದಾರೆ. ಎಡ್ಟೆಕ್, ಇ-ಕಾಮರ್ಸ್, ಫಿನ್‌ಟೆಕ್, ಫುಡ್‌ಟೆಕ್, ಹೆಲ್ತ್‌ಟೆಕ್ ಮತ್ತು ಸಾಸ್ ವಲಯದ ಕಂಪನಿಗಳು ವಜಾ ಪ್ರಕ್ರಿಯೆಯನ್ನು ತೀವ್ರಗೊಳಿಸಿವೆ. edtech ನಲ್ಲಿ 6 ಸ್ಟಾರ್ಟ್‌ಅಪ್‌ಗಳು ವಜಾಗೊಳಿಸಿವೆ.

ಇ-ಕಾಮರ್ಸ್‌ನಲ್ಲಿ 17 ಹೊಸ ಕಂಪನಿಗಳು ಮತ್ತು 3 ಸ್ಟಾರ್ಟಪ್ ಕಂಪನಿಗಳು ವರ್ಷದ ಮೊದಲ ಆರು ತಿಂಗಳ ಅವಧಿಯಲ್ಲಿ ತಮ್ಮ ಉದ್ಯೋಗಿಗಳನ್ನು ಮನೆಗೆ ಕಳಿಸಿವೆ. ಅದೇ ರೀತಿ, ಫಿನ್‌ಟೆಕ್ ಜಗತ್ತಿನಲ್ಲಿ, API ಬ್ಯಾಂಕಿಂಗ್ ಉತ್ಪನ್ನಗಳು, ಬ್ರೋಕರೇಜ್, ಮ್ಯೂಚುಯಲ್ ಫಂಡ್‌ಗಳು, ಕ್ರೆಡಿಟ್ ಕಾರ್ಡ್‌ಗಳು, ವಿಮೆ ಮತ್ತು ಪೇಮೆಂಟ್‌ ಸೊಲ್ಯೂಶನ್‌ ಒದಗಿಸುವ ಕಂಪನಿಗಳು ಸೇರಿದಂತೆ 11 ಸ್ಟಾರ್ಟ್‌ಅಪ್‌ಗಳು ಉದ್ಯೋಗ ಕಡಿತ ಮಾಡಿವೆ.

ಸಾಫ್ಟ್‌ವೇರ್ ಆಸ್ ಎ ಸರ್ವೀಸ್ (ಸಾಸ್) ಉದ್ಯಮದಲ್ಲಿ 11 ಸ್ಟಾರ್ಟ್‌ಅಪ್‌ಗಳು ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಿವೆ. ಸ್ಟಾರ್ಟ್‌ಅಪ್‌ಗಳಲ್ಲಿ ವಜಾಗೊಳಿಸಲು ಮುಖ್ಯ ಕಾರಣವೆಂದರೆ ದೀರ್ಘಾವಧಿಯ ಫಂಡಿಂಗ್ ಕೊರತೆ. ಹೊಸ ಜನರೇಶನ್‌ನ ಕಂಪನಿಗಳು ನಿಧಿಯನ್ನು ಸಂಗ್ರಹಿಸುವಲ್ಲಿ ತೊಂದರೆಗಳನ್ನು ಎದುರಿಸುತ್ತಿವೆ, ಇದರಿಂದಾಗಿ ಬೆಳವಣಿಗೆಯ ವೇಗವನ್ನು ಕಾಪಾಡಿಕೊಳ್ಳುವುದು ಅವರಿಗೆ ಕಷ್ಟವಾಗುತ್ತಿದೆ. ವರ್ಷದ ಮೊದಲ ಆರು ತಿಂಗಳ ಅವಧಿಯಲ್ಲಿ, ಸಾಹಸೋದ್ಯಮ ಬಂಡವಾಳ ಚಟುವಟಿಕೆಗಳಲ್ಲಿ ಶೇ.79 ರಷ್ಟು ಭಾರೀ ಕುಸಿತ ಕಂಡುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...