alex Certify ಉದ್ಯಮಿಯ ಪುತ್ರಿಗೆ ಕಾಮೋತ್ತೇಜಕ ಇಂಜೆಕ್ಷನ್ ಕೊಟ್ಟು ಸಂಬಂಧಿಕರಿಂದಲೇ ನೀಚಕೃತ್ಯ, 8 ವರ್ಷ ಅತ್ಯಾಚಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯಮಿಯ ಪುತ್ರಿಗೆ ಕಾಮೋತ್ತೇಜಕ ಇಂಜೆಕ್ಷನ್ ಕೊಟ್ಟು ಸಂಬಂಧಿಕರಿಂದಲೇ ನೀಚಕೃತ್ಯ, 8 ವರ್ಷ ಅತ್ಯಾಚಾರ

ಮುಂಬೈನ ಅಂಧೇರಿಯಲ್ಲಿ ಜೂನಿಯರ್ ಕಾಲೇಜ್ ವಿದ್ಯಾರ್ಥಿನಿಗೆ ಕಾಮೋತ್ತೇಜಕ ಇಂಜೆಕ್ಷನ್ ಕೊಟ್ಟು 8 ವರ್ಷ ಕಾಲ ಅತ್ಯಾಚಾರ ಎಸಗಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ.

ಉದ್ಯಮಿಯ ಪುತ್ರಿಯಾಗಿರುವ 16 ವರ್ಷದ ಬಾಲಕಿಯನ್ನು ಅಪಹರಿಸಿ 8 ವರ್ಷ ಅತ್ಯಾಚಾರವೆಸಗಲಾಗಿದೆ. ವಿದ್ಯಾರ್ಥಿನಿಗೆ ಮಾತ್ರೆ ಮತ್ತು ಇಂಜೆಕ್ಷನ್ ರೂಪದಲ್ಲಿ ಕಾಮೋತ್ತೇಜಕ ಸೇವಿಸುವಂತೆ ಬಲವಂತ ಮಾಡಲಾಗಿತ್ತು.  ನೆರೆಮನೆಯ ವ್ಯಕ್ತಿಯೊಬ್ಬ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆ ವ್ಯಕ್ತಿಯ ಪತ್ನಿಗೆ ಇದರ ಬಗ್ಗೆ ಗೊತ್ತಿದೆ ಎಂದು ಹೇಳಲಾಗಿದ್ದು, ಬಂಧನಕ್ಕೆ ಒಳಗಾಗಿರುವ ದಂಪತಿ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ.

ಬಂಧಿಸಲ್ಪಟ್ಟಿರುವ ಇತರೆ ಇಬ್ಬರು ಬಾಲಕಿಯ ಅಂಕಲ್ ಮತ್ತು ಆತನ 19 ವರ್ಷದ ಮಗ. ಆಕೆಯನ್ನು ಮದುವೆಯಾಗಿ ಅವರ ಕುಟುಂಬದ ಹಣ ಪಡೆಯುವ ಉದ್ದೇಶದಿಂದ ಉತ್ತರ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಸೋದರ ಸಂಬಂಧಿ ಬಾಲಕಿಯೊಂದಿಗೆ ಸಂಬಂಧ ಬೆಳೆಸಿದ್ದಾನೆ ಎಂದು ದೂರು ನೀಡಲಾಗಿದೆ.

ಸ್ಥಳೀಯ ಅಂಬೋಲಿ ಪೊಲೀಸ್ ಠಾಣೆ ಪೊಲೀಸರು ಬಾಲಕಿ ಪೋಷಕರಿಗೆ ಬರೆದಿದ್ದ 27 ಪುಟದ ಪತ್ರ ವಶಕ್ಕೆ ಪಡೆದಿದ್ದಾರೆ. ಅದರಲ್ಲಿರುವ ಮಾಹಿತಿಯ ಪ್ರಕಾರ, ಆಕೆ ಮಾತ್ರೆಗಳಿಗೆ ವ್ಯಸನಿಯಾಗಿದ್ದಳು. ಅಲ್ಲದೇ, ನೆರೆಮನೆಯವನೊಬ್ಬನು ತನ್ನ ಮೇಲೆ ನಡೆಸಿದ ಲೈಂಗಿಕ ಕ್ರಿಯೆ ನಡೆಸಿದ ವಿಡಿಯೋ ಇದೆ ಎಂದು ಹೇಳುವ ಮೂಲಕ ಆಕೆಯನ್ನು ಬೆದರಿಸಿದ್ದ. ಅವಳನ್ನು ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದರಿಂದ ಖಿನ್ನತೆಗೆ ಒಳಗಾಗಿದ್ದಳು.

ಆಕೆಯ ತಂದೆ ಸಲ್ಲಿಸಿದ್ದ ಅಪಹರಣ ಪ್ರಕರಣದ ಆಧಾರದ ಮೇಲೆ ಪೋಲಿಸ್ ಉಪಯುಕ್ತ ಅಭಿಷೇಕ್ ತ್ರಿಮುಖ್, ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ಸೋಮೇಶ್ವರ್ ಕಾಮ್ಟೆ, ಇನ್ಸ್‌ ಪೆಕ್ಟರ್ ಅಬ್ದುಲ್ ರವೂಫ್ ಶೇಖ್ ಅವರನ್ನೊಳಗೊಂಡ ತಂಡ ದೆಹಲಿ ಮತ್ತು ಉತ್ತರ ಪ್ರದೇಶಕ್ಕೆ ತೆರಳಿ ಬಾಲಕಿಯನ್ನು ರಕ್ಷಿಸಿದೆ. ಆಕೆಯ ಚಿಕ್ಕಪ್ಪ ಮತ್ತು ಸೋದರ ಸಂಬಂಧಿಯನ್ನು ಕೂಡ ಬಂಧಿಸಲಾಗಿದೆ. ತನಿಖೆ ಮುಂದುವರೆಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...