alex Certify 16 ವರ್ಷದ ಅಪ್ರಾಪ್ತೆ ಮೇಲೆ ಶಾಲೆಯಲ್ಲೇ ಅತ್ಯಾಚಾರ; ಆರೋಪಿ ಸೆರೆಗೆ ಕಾರಣವಾಯ್ತು ಹಳದಿ ಶರ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

16 ವರ್ಷದ ಅಪ್ರಾಪ್ತೆ ಮೇಲೆ ಶಾಲೆಯಲ್ಲೇ ಅತ್ಯಾಚಾರ; ಆರೋಪಿ ಸೆರೆಗೆ ಕಾರಣವಾಯ್ತು ಹಳದಿ ಶರ್ಟ್

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಆಘಾತಕಾರಿ ಕೃತ್ಯವೊಂದು ನಡೆದಿದೆ. 16 ವರ್ಷದ ಬಾಲಕಿ ಮೇಲೆ ಶಾಲೆಯಲ್ಲೇ ಅತ್ಯಾಚಾರವೆಸಗಲಾಗಿದ್ದು, ಆರೋಪಿ ಧರಿಸಿದ್ದ ಹಳದಿ ಶರ್ಟ್ ಸಹಾಯದಿಂದ ಆತನನ್ನು ಈಗ ಬಂಧಿಸಲಾಗಿದೆ.

ಪ್ರಕರಣದ ವಿವರ: ಬಾಲಕಿ ಪೋಷಕರು ಎಂ ಸಿ ಡಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಂತ್ರಸ್ತೆ ಸೇರಿದಂತೆ ತಮ್ಮ ಇಬ್ಬರು ಮಕ್ಕಳೊಂದಿಗೆ ಅಲ್ಲಿಯೇ ವಾಸವಾಗಿದ್ದರು. ಶಾಲೆಯನ್ನು ಕಳೆದ ಕೆಲವು ದಿನಗಳಿಂದ ಮುಚ್ಚಲಾಗಿತ್ತು ಎನ್ನಲಾಗಿದ್ದು, ಘಟನೆ ನಡೆದ ದಿನ ಪೋಷಕರು ಮಕ್ಕಳನ್ನು ಬಿಟ್ಟು ವೇತನ ಪಡೆಯಲು ಹೊರ ಹೋಗಿದ್ದರು.

ಈ ವೇಳೆ ಕಳ್ಳತನ ಮಾಡಲು ಅಲ್ಲಿಗೆ 27 ವರ್ಷದ ವಿವಾಹಿತ ವ್ಯಕ್ತಿ ಮೋನು ಎಂಬಾತ ನುಗ್ಗಿದ್ದು, ಬೆಲೆಬಾಳುವ ವಸ್ತು ದೋಚುವುದರ ಜೊತೆಗೆ ಚಾಕು ತೋರಿಸಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಪೊಲೀಸರು ಈ ಸಂಬಂಧ ದೂರು ದಾಖಲಿಸಿಕೊಂಡಿದ್ದರು.

ವಿಚಾರಣೆ ವೇಳೆ ಬಾಲಕಿ ಆರೋಪಿ ಹಳದಿ ಬಣ್ಣದ ಶರ್ಟ್ ಧರಿಸಿದ್ದ ಕುರಿತು ಮಾಹಿತಿ ನೀಡಿದ್ದಳು. ಅಲ್ಲದೆ ಸಿಸಿ ಟಿವಿಯಲ್ಲೂ ಅಸ್ಪಷ್ಟವಾಗಿ ಆತನ ಚಹರೆ ದಾಖಲಾಗಿತ್ತು. ವ್ಯಾಪಕ ತನಿಖೆ ಕೈಗೊಂಡ ಪೊಲೀಸರು ಅಂತಿಮವಾಗಿ ಆರೋಪಿಯನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...