alex Certify 16 ಗಂಟೆಗಳ ಸುದೀರ್ಘ ಹೃದ್ರೋಗ ಶಸ್ತ್ರಚಿಕಿತ್ಸೆಗೆ ಒಳಗಾಗಿ ಬದುಕುಳಿದ 58ರ ವ್ಯಕ್ತಿ……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

16 ಗಂಟೆಗಳ ಸುದೀರ್ಘ ಹೃದ್ರೋಗ ಶಸ್ತ್ರಚಿಕಿತ್ಸೆಗೆ ಒಳಗಾಗಿ ಬದುಕುಳಿದ 58ರ ವ್ಯಕ್ತಿ……!

ಕೊಚ್ಚಿಯ ಕೊಡುಂಗಲ್ಲೂರಿನ ನಿವಾಸಿಯಾದ 58 ವರ್ಷದ ನಜೀಬ್​ ಎಂಬವರು 2022ನೇ ವರ್ಷವನ್ನು ನೋಡುತ್ತಾರೆ ಎಂದು ಯಾರೂ ಭಾವಿಸಿರಲಿಲ್ಲ. ಏಕೆಂದರೆ ಅವರು ಮಹಾಪಧಮನಿಯ ಬಹುದೊಡ್ಡ ಸಮಸ್ಯೆಯಿಂದ ಬಳಲುತ್ತಿದ್ದರು. ಇದೊಂದು ಬಹುದೊಡ್ಡ ಹೃದ್ರೋಗ ಸಮಸ್ಯೆ ಆಗಿದ್ದ ಹಿನ್ನೆಲೆಯಲ್ಲಿ ಅನೇಕ ಆಸ್ಪತ್ರೆಗಳು ಇವರಿಗೆ ಚಿಕಿತ್ಸೆಯನ್ನು ನೀಡಲು ಮುಂದೆ ಬರಲಿಲ್ಲ.

ಕಳೆದ ವರ್ಷ ಡಿಸೆಂಬರ್​ 30ರಂದು ನಜೀಬ್​​ರನ್ನು ಆಸ್ಟರ್​ ಮೆಡ್ಸಿಟಿಗೆ ಕರೆತಂದಾಗ ಅವರ ಮೆದಳು ಹಾಗೂ ಕೈಗಳಿಗೆ ರಕ್ತದ ಹರಿವು ಸಂಪೂರ್ಣವಾಗಿ ನಿಂತು ಹೋಗಿತ್ತು. ನಜೀಬ್​ ಪಾರ್ಶ್ವವಾಯು, ಹೃದಾಯಾಘಾತ ಹಾಗೂ ಮೂತ್ರಪಿಂಡ ವೈಫಲ್ಯದ ಅಪಾಯದಲ್ಲಿದ್ದರು. ಇಂತಹ ಕಠಿಣ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರು ಬರೋಬ್ಬರಿ 16 ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆಯನ್ನು ನಡೆಸುವ ಮೂಲಕ ಅವರನ್ನು ಬದುಕಿಸಿದ್ದಾರೆ.

ಸಂಪೂರ್ಣ ಜಗತ್ತು ಹೊಸ ವರ್ಷ ಬರಮಾಡಿಕೊಳ್ಳುವ ಉಮೇದಿಯಲ್ಲಿದ್ದರೆ ಇಲ್ಲಿನ ವೈದ್ಯರು ನಜೀಬ್​ ಬದುಕುಳಿಯುವ ಸಾಧ್ಯತೆ ಕೇವಲ 30 ಪ್ರತಿಶತ ಮಾತ್ರ ಎಂದು ಹೇಳಿದ್ದರು. ಡಿಸೆಂಬರ್​ 31ರ ಬೆಳಗ್ಗೆ 8 ಗಂಟೆಯಿಂದ ನಜೀಬ್​​ಗೆ ಶಸ್ತ್ರಚಿಕಿತ್ಸೆಗಳು ಆರಂಭವಾದವು. ಕೊನೆಗೂ ನಜೀಬ್​ 2022ರ ಹೊಸ ವರ್ಷವನ್ನು ಬರಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಈ ಶಸ್ತ್ರಚಿಕಿತ್ಸೆಯ ನೇತೃತ್ವ ವಹಿಸಿದ್ದ ಅರವಳಿಕೆ ಹಾಗೂ ಕ್ರಿಟಿಕಲ್​ ಕೇರ್​ ವಿಭಾಗದ ಡಾ. ಸುರೇಶ್​ ಜಿ ನಾಯರ್​, ಇದೊಂದು ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯಾಗಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...