alex Certify 56 ಎಕರೆ ಪ್ರದೇಶದಲ್ಲಿನ ಬೆಳೆ ನಾಶ ಮಾಡಿದ ಗಜಪಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

56 ಎಕರೆ ಪ್ರದೇಶದಲ್ಲಿನ ಬೆಳೆ ನಾಶ ಮಾಡಿದ ಗಜಪಡೆ

ಪ್ರಕೃತಿಧಾಮವೊಂದರಿಂದ ಪರಾರಿಯಾದ 15 ಕಾಡಾನೆಗಳು 500 ಕಿಮೀ ವ್ಯಾಪ್ತಿ ಪ್ರದೇಶದಲ್ಲಿ ಅಪಾರ ಹಾನಿ ಮಾಡಿದ ಘಟನೆ ನೈಋತ್ಯ ಚೀನಾದಲ್ಲಿ ಘಟಿಸಿದೆ. ಅಪಾರ ಪ್ರಮಾಣದಲ್ಲಿ ಬೆಳೆ ನಾಶ ಮಾಡಿರುವ ಆನೆಗಳು ಮೆಕ್ಕೆಜೋಳದ ಫಸಲನ್ನು ತಿಂದು ತೇಗಿವೆ.

ಈ ಆನೆಗಳು ವಸತಿ ಪ್ರದೇಶಗಳಲ್ಲಿ ದಾಳಿ ಮಾಡುತ್ತಿರುವ ವಿಡಿಯೋಗಳು ಆನ್ಲೈನ್‌ನಲ್ಲಿ ವೈರಲ್ ಆಗಿವೆ. ಆನೆಗಳ ಈ ಹಿಂಡು ಒಟ್ಟಾರೆ 56 ಎಕರೆ ಬೆಳೆ ನಾಶ ಮಾಡಿದ್ದು, ಒಟ್ಟಾರೆ $1.07 ದಶಲಕ್ಷ ಮೌಲ್ಯದ ಬೆಳೆ ಹಾನಿ ಮಾಡಿವೆ.

ಚೀನಾದ ಯುನ್ನಾನ್ ಪ್ರಾಂತ್ಯದ ಶಿಶುವಾಂಗ್‌ಬನ್ನಾ ರಾಷ್ಟ್ರೀಯ ಪ್ರಕೃತಿ ಧಾಮದಿಂದ ಈ ಆನೆಗಳು ಅದು ಹೇಗೆ ತಪ್ಪಿಸಿಕೊಂಡವು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಅವು ಅಲ್ಲಿಂದ ಕಾಲ್ಕಿತ್ತ ಬಳಿಕ ಒಟ್ಟಾರೆ 500 ಕಿಮೀ ದೂರ ಕಾಲ್ನಡಿಗೆಯಲ್ಲಿ ಕ್ರಮಿಸಿದ್ದು, ಸಾರ್ವಜನಿಕರಿಗೆ ಇವುಗಳಿಗೆ ಯಾವುದೇ ತೊಂದರೆಯಾಗುವುದನ್ನು ತಪ್ಪಿಸಲು ಆಡಳಿತಾಧಿಕಾರಿಗಳು ಗಮನ ಹರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...