alex Certify ವಿಶ್ವದ ಅತ್ಯಂತ ಬಡ ದೇಶಗಳಲ್ಲಿ ಒಂದಾದ ಬುರ್ಕಿನಾಫಾಸೊದಲ್ಲಿ ಜಿಹಾದಿ ಗುಂಪುಗಳ ದಾಳಿ: 14 ಮಂದಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವದ ಅತ್ಯಂತ ಬಡ ದೇಶಗಳಲ್ಲಿ ಒಂದಾದ ಬುರ್ಕಿನಾಫಾಸೊದಲ್ಲಿ ಜಿಹಾದಿ ಗುಂಪುಗಳ ದಾಳಿ: 14 ಮಂದಿ ಸಾವು

ಪಶ್ಚಿಮ ಆಫ್ರಿಕಾದ ಬುರ್ಕಿನಾ ಫಾಸೊದ ಉತ್ತರ ಪ್ರದೇಶದಲ್ಲಿ ಜಿಹಾದಿ ಗುಂಪುಗಳು ನಡೆಸಿದ ಎರಡು ಪ್ರತ್ಯೇಕ ದಾಳಿಗಳಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಎಂಟು ನಾಗರಿಕ ಸೇನಾ ಸಹಾಯಕರು ಎಂದು ಹೇಳಲಾಗಿದೆ.

ಸಫಿ ಗ್ರಾಮದ ಮೇಲೆ ಶಸ್ತ್ರಸಜ್ಜಿತ ವ್ಯಕ್ತಿಗಳು ದಾಳಿ ಮಾಡಿದ್ದಾರೆ. ಸತ್ತವರಲ್ಲಿ ಎಂಟು ಮಂದಿ ನಾಗರಿಕ ಸೇನೆಯ ಸದಸ್ಯರಾಗಿದ್ದಾ. ಫಾದರ್‌ ಲ್ಯಾಂಡ್‌ ನ ರಕ್ಷಣೆಗಾಗಿ ಸ್ವಯಂಸೇವಕರು(ವಿಡಿಪಿ) ಸೈನ್ಯವನ್ನು ಬೆಂಬಲಿಸಲು ಡಿಸೆಂಬರ್ 2019 ರಲ್ಲಿ ಸ್ಥಾಪಿಸಲಾದ ಸಹಾಯಕ ಪಡೆ ಇದಾಗಿದೆ.

ಉತ್ತರ ಬುರ್ಕಿನಾ ಫಾಸೊದ ಮಾರ್ಕೊಯ್ ಎಂಬ ಪಟ್ಟಣದಲ್ಲಿ ಆರು ನಾಗರಿಕರು ಪ್ರತ್ಯೇಕವಾಗಿ ಕೊಲ್ಲಲ್ಪಟ್ಟರು ವಿಶ್ವದ ಅತ್ಯಂತ ಬಡ ದೇಶಗಳಲ್ಲಿ ಒಂದಾದ ಬುರ್ಕಿನಾ ಫಾಸೊ, 2015 ರಲ್ಲಿ ಮಾಲಿಯಿಂದ ಬಂದ ಜಿಹಾದಿ ದಂಗೆಯೊಂದಿಗೆ ಸೆಣಸಾಡುತ್ತಿದೆ.

ಮುಖ್ಯವಾಗಿ ಅಲ್-ಖೈದಾ ಮತ್ತು ಇಸ್ಲಾಮಿಕ್ ಸ್ಟೇಟ್ ಗುಂಪಿಗೆ ಸಂಬಂಧಿಸಿದ ಗುಂಪುಗಳ ಕೃತ್ಯಗಳು ಈ ಪ್ರದೇಶದಲ್ಲಿ ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡಿವೆ, ಭಯಭೀತರಾದ ಜನರಿಗೆ ಪ್ರದೇಶದಿಂದ ಪಲಾಯನ ಮಾಡಲು ಜಿಹಾದಿ ಗುಂಪುಗಳು ಒತ್ತಾಯಿಸಿವೆ. ಬುರ್ಕಿನಾ ಫಾಸೊ ಜನವರಿಯಲ್ಲಿ ದಂಗೆಗೆ ಒಳಗಾಯಿತು, ಅತೃಪ್ತ ಕರ್ನಲ್‌ ಗಳು ಚುನಾಯಿತ ಅಧ್ಯಕ್ಷ ರೋಚ್ ಮಾರ್ಕ್ ಕ್ರಿಶ್ಚಿಯನ್ ಕಬೋರ್ ಅವರನ್ನು ಪದಚ್ಯುತಗೊಳಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...