alex Certify ನಿಬ್ಬೆರಗಾಗಿಸುತ್ತೆ 13 ವರ್ಷದ ಬಾಲಕನ ಚೈನೀಸ್​ ಖಾದ್ಯ ತಯಾರಿಸುವ ಪರಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಬ್ಬೆರಗಾಗಿಸುತ್ತೆ 13 ವರ್ಷದ ಬಾಲಕನ ಚೈನೀಸ್​ ಖಾದ್ಯ ತಯಾರಿಸುವ ಪರಿ..!

ಚೈನೀಸ್​ ಖಾದ್ಯಗಳು ಆರೋಗ್ಯಕ್ಕೆ ಒಳ್ಳೆಯದು ಅಲ್ಲದೇ ಇದ್ದರೂ ಸಹ ಬಾಯಿಗೆ ರುಚಿ ಮಾತ್ರ ಚೆನ್ನಾಗಿ ನೀಡೋದ್ರಿಂದ ಎಂದಿಗೂ ಫೇಮಸ್​ ಆಗಿಯೇ ಇವೆ. ಆದರೆ ಇಲ್ಲೊಂದು ಚೈನೀಸ್​ ಖಾದ್ಯಗಳ ಅಂಗಡಿಯಲ್ಲಿ ಅಲ್ಲಿನ ಖಾದ್ಯಗಳಿಗಿಂತ ಹೆಚ್ಚಾಗಿ ಅವುಗಳನ್ನು ತಯಾರಿಸುವ ಬಾಲಕ ಹೆಚ್ಚು ಸುದ್ದಿಯಲ್ಲಿ ಇದ್ದಾನೆ.

ಹರಿಯಾಣದ ಫರೀದಾಬಾದ್​ ನಲ್ಲಿ 13 ವರ್ಷದ ಬಾಲಕನೊಬ್ಬ ಫಟಾಫಟ್​ ಅಂತಾ ಚೈನೀಸ್​ ಖಾದ್ಯಗಳನ್ನು ತಯಾರಿಸುವ ಮೂಲಕ ಗ್ರಾಹಕರ ಹುಬ್ಬೇರುವಂತೆ ಮಾಡಿದ್ದಾನೆ.

ದೀಪೇಶ್​ ಎಂಬ ಹೆಸರಿನ ಈ ಪೋರ ಆಡುವ ವಯಸ್ಸಿನಲ್ಲಿ ಬಾಣಸಿಗನಾಗಿದ್ದಾನೆ.

ಈತ ಚೈನೀಸ್​ ಖಾದ್ಯಗಳನ್ನು ತಯಾರಿಸುವ ರೀತಿಯೇ ನಿಮಗೆ ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತೆ. ಹೊತ್ತಿ ಉರಿಯುವ ಬೆಂಕಿಯ ನಡುವೆಯೂ ಕಿಂಚಿತ್ತೂ ಹೆದರದೇ ರುಚಿರುಚಿಯಾದ ಖಾದ್ಯಗಳನ್ನು ತಯಾರಿಸಿ ಗ್ರಾಹಕರಿಗೆ ಸರ್ವ್​ ಮಾಡುತ್ತಾನೆ.

ಫುಡ್​ ವ್ಲೋಗರ್​ ಒಬ್ಬರು ಶೇರ್​ ಮಾಡಿರುವ ವಿಡಿಯೋದಲ್ಲಿ ದಿಪೇಶ್​​ ಇಂಡೋ ಚೈನೀಸ್​ ರೆಸಿಪಿಯಾದ ಚಿಲ್ಲಿ ಪೊಟ್ಯಾಟೋವನ್ನು ತಯಾರಿಸಿದ್ದಾನೆ. ಇದು ದೀಪೇಶ್​ ಕುಟುಂಬಕ್ಕೆ ಸೇರಿದ ಬೀದಿ ಬದಿಯ ಅಂಗಡಿಯಾಗಿದೆ. ಇಷ್ಟೆಲ್ಲ ಅಡುಗೆಯನ್ನು ಹೇಗೆ ಕಲಿತೆ ಎಂದು ಕೇಳಿದ್ದಕ್ಕೆ ಬಾಲಕ, ನೋಡಿ ನೋಡಿಯೇ ಕಲಿತೆ ಎಂದು ನಗುತ್ತಾ ಉತ್ತರಿಸಿದ್ದಾನೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...